ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡ ಮಾಲೀಕರು ಮತ್ತು ಅಧಿಭೋಗದಾರರ ಹಿಂದಿನ ವರ್ಷದ ಆಸ್ತಿತೆರಿಗೆ ಮತ್ತು 2024-25 ರ ಆಸ್ತಿತೆರಿಗೆ ವಸೂಲಾತಿ ಬಾಕಿ ಇರುವುದು ಕಂಡುಬಂದಿದ್ದು, ಸಾರ್ವಜನಿಕರು ಬಾಕಿ ಇಟ್ಟಿರುವ ಆಸ್ತಿತೆರಿಗೆ, ನೀರಿನ ಕರ, ಉದ್ದಿಮೆ ಪರವಾನಿಗೆ ಶುಲ್ಕ, ಎಸ್.ಡಬ್ಲೂ.ಎಮ್ ಶುಲ್ಕವನ್ನು ಪಾವತಿಸುವಂತೆ ನಗರಸಭೆ ಪೌರಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.
