ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಅಡಿಲೇಡ್ ಡೇ ನೈಟ್ 2ನೇ ಟೆಸ್ಟ್‌ನ ಮೂರನೇ ದಿನದ ಪಂದ್ಯವು ಅಂತ್ಯವಾಗಿದ್ದು ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ.
ಅಡಿಲೇಡ್ ಓವಲ್‌ನಲ್ಲಿ ಮೂರನೇ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು 175ಕ್ಕೆ ಆಲೌಟ್ ಆಗಿದ್ದು, ಆಸ್ಟ್ರೇಲಿಯಾಕ್ಕೆ ಸರಣಿ ಗೆಲ್ಲಲು ಬರೀ 19 ರನ್‌ಗಳು ಬೇಕಾಗಿತ್ತು. 19 ರನ್‌ಗಳನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ.
ಇದನ್ನು ಓದಿದ್ದೀರಾ? ಇಂಡಿಯಾ-ಆಸ್ಟ್ರೇಲಿಯಾ ಕ್ರಿಕೆಟ್ | ವೇಗಿಗಳ ದಾಳಿಗೆ ಭಾರತ ತತ್ತರ; 29 ರನ್‌ಗಳ ಹಿನ್ನಡೆ
ಮೊದಲ ಎರಡು ದಿನ ಮುಂಚೂಣಿ ಸಾಧಿಸಿದ್ದ ಆಸ್ಟ್ರೇಲಿಯಾ ಮೂರನೇ ದಿನ ಭಾರತವನ್ನು ಮಕಾಡೆ ಮಲಗಿಸಿದೆ. ಎರಡನೇ ದಿನ ಆಸ್ಟ್ರೇಲಿಯಾದ ವೇಗಿಗಳ ದಾಳಿಗೆ ತತ್ತರಿಸಿದ ಭಾರತವು 29 ರನ್‌ಗಳ ಹಿನ್ನಡೆಯನ್ನು ಕಂಡಿತ್ತು.
ಶನಿವಾರದ ಅಂತ್ಯದ ವೇಳೆಗೆ ಭಾರತಕ್ಕೆ 5 ವಿಕೆಟ್‌ಗೆ 128 ಅಷ್ಟೇ ಪಡೆಯಲು ಸಾಧ್ಯವಾಯಿತು. ಪಂದ್ಯದ ಮುಕ್ತಾಯದ ವೇಳೆಗೆ, ಭಾರತವು ಆಸ್ಟ್ರೇಲಿಯಾಕ್ಕಿಂತ 29 ರನ್‌ಗಳ ಹಿನ್ನಡೆ ಕಂಡಿತ್ತು.
Australia win the second Test and level the series.#TeamIndia aim to bounce back in the third Test.
— BCCI (@BCCI) December 8, 2024
Scoreboard ▶️ https://t.co/upjirQCmiV#AUSvIND pic.twitter.com/Tc8IYLwpan
ಮೂರನೇ ದಿನದ ಅಂತಿಮ ಪಂದ್ಯದಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡ ಭಾರತ ಬರೀ 175 ರನ್‌ಗಳನ್ನು ಪಡೆದು ಆಸ್ಟ್ರೇಲಿಯಾಕ್ಕೆ 19 ರನ್‌ಗಳ ಗುರಿ ನೀಡಿತು. ಈ ಸುಲಭ ಗುರಿಯನ್ನು ಆಸೀಸ್ ಪಡೆ ಬರೀ 3.2 ಓವರ್‌ಗಳಲ್ಲೇ ತಲುಪಿದೆ. 10 ವಿಕೆಟ್‌ಗಳನ್ನು ಕೂಡಾ ಉಳಿಸಿಕೊಂಡಿದೆ.
