ಲೋಕಸಭೆ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಅವರು ‘ಕಾಂಗ್ರೆಸ್‌ನ ಅಂತ್ಯ ಸಂಸ್ಕಾರ’ ಮಾಡಿದಂತೆಯೇ ಇಂಡಿಯಾ ಒಕ್ಕೂಟದ ‘ಪಿಂಡದಾನ’ ಮಾಡುತ್ತಾರೆ ಎಂದು ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಟೀಕಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡುರುವ ಅವರು, “ದೇಶದ ಸ್ವಾತಂತ್ರ್ಯದಲ್ಲಿ ಪಾತ್ರ ವಹಿಸಿದ 150 ವರ್ಷಗಳಷ್ಟು ಹಳೆಯ ಪಕ್ಷವಾದ ಕಾಂಗ್ರೆಸ್‌ಗೆ ಯಾವುದೇ ಬೆಂಬಲ ಸಿಗುತ್ತಿಲ್ಲ. ಅದಕ್ಕೆ ಯಾರು ಹೊಣೆ? ರಾಹುಲ್ ಗಾಂಧಿಯವರೇ ಜವಾಬ್ದಾರರು” ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಸಂಭಲ್‌ಗೆ ತೆರಳುವುದಕ್ಕೆ ತಡೆ | ‘ಸಾಂವಿಧಾನಿಕ ಹಕ್ಕು ನಿರಾಕರಣೆ’ ಎಂದ ರಾಹುಲ್ ಗಾಂಧಿ
“ಈಗ ಕಾಂಗ್ರೆಸ್ ಅಂತ್ಯ ಕಂಡಿದೆ. ಈಗ ಪ್ರತಿಪಕ್ಷಗಳು ರಾಹುಲ್ ಗಾಂಧಿಯನ್ನು ತಮ್ಮ ನಾಯಕನನ್ನಾಗಿ ಆರಿಸಿಕೊಂಡಿವೆ. ನನ್ನ ಹೇಳಿಕೆ ಮತ್ತು ಇಂದಿನ ಸಮಯವನ್ನು ನೀವು ಬರೆದಿಟ್ಟುಕೊಳ್ಳಿ. ಶೀಘ್ರದಲ್ಲೇ, ರಾಹುಲ್ ಗಾಂಧಿ ಅವರು ‘ಕಾಂಗ್ರೆಸ್‌ನ ಅಂತ್ಯ ಸಂಸ್ಕಾರ’ ಮಾಡಿದಂತೆ ಇಂಡಿಯಾ ಒಕ್ಕೂಟದ ‘ಪಿಂಡ ದಾನ’ ಮಾಡುತ್ತಾರೆ” ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಲಕ್ನೋದಿಂದ ಸ್ಪರ್ಧಿಸಿ ಸೋತಿದ್ದ ಕೃಷ್ಣಂ, ಈ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ಹಾಗೆಯೇ ರಾಜಕೀಯ ಪ್ರೇರಿತವಾದ ಈ ಕಾರ್ಯಕ್ರಮಕ್ಕೆ ಗೈರಾಗುವ ಕಾಂಗ್ರೆಸ್ ಅನ್ನು ಟೀಕಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಕೃಷ್ಣಂ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.
VIDEO | “Congress, a 150-year-old party that played a role in the country's independence, is not getting any support. Who is responsible for it? Rahul Gandhi is responsible… Now, Congress is over. The opposition chose Rahul Gandhi as their leader. Note my statement and today’s… pic.twitter.com/NxwOgcEJLI
— Press Trust of India (@PTI_News) December 8, 2024
ಮೋದಿ ಭಕ್ತ, ಕಾಂಗ್ರೆಸ್‌ನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ನಿರಂತರವಾಗಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯ ಬಗ್ಗೆ ಅವಹೇಳನಕಾರಿ, ವಿವಾದಾದ್ಮತಕ ಹೇಳಿಕೆಗಳನ್ನು ನೀಡುವ ಮೂಲಕವೇ ಸುದ್ದಿಯಾಗಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ರಾಹುಲ್ ಗಾಂಧಿಯನ್ನು ‘ಅಜಾಗರೂಕ ಆನೆ’ ಎಂದು ಕರೆದಿದ್ದರು.
