ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹುದ್ದೆಗೆ ಪರೀಕ್ಷೆ ಇರುವುದರಿಂದ ಪರೀಕ್ಷಾರ್ಥಿಗಳು ಒಳಗೆ ಪ್ರವೇಶ ಮಾಡುವ ಮೊದಲು ಅಧಿಕಾರಿಗಳು ಪರೀಕ್ಷಾರ್ಥಿಗಳ ಕೈ ತೋಳಿನ ಬಟ್ಟೆಯನ್ನು ಕತ್ತರಿಸಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಹಾಸನ ನಗರದ ಎಲ್ ವಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಪರೀಕ್ಷೆಗೆ ಬಂದ ಕೆಲ ಮಹಿಳಾ ಅಭ್ಯರ್ಥಿಗಳು ತುಂಬುತೋಳಿನ ಬಟ್ಟೆ ಧರಿಸಿದ್ದರು. ಪರೀಕ್ಷಾ ಕೇಂದ್ರದ ಅಧಿಕಾರಿಗಳು, “ಹಾಲ್ ಟಿಕೆಟ್ನಲ್ಲಿ ವಸ್ತ್ರಸಂಹಿತೆಯ ನಿಯಮಗಳನ್ನು ವಿವರಿಸಲಾಗಿದ್ದು, ಅವುಗಳನ್ನು ಉಲ್ಲಂಘಿಸಿದ್ದೀರಿ” ಎಂದು ಹೇಳಿದ್ದು, ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದರು. ಈ ವೇಳೆ ವಸ್ತ್ರಸಂಹಿತೆ ನಿಯಮದ ಕಟ್ಟುನಿಟ್ಟು ವಾದ-ವಿವಾದಕ್ಕೆ ಕಾರಣವಾಯಿತು.
ಈ ವೇಳೆ ಅಧಿಕಾರಿಗಳು ಮತ್ತು ಮಹಿಳಾ ಪರೀಕ್ಷಾರ್ಥಿಗಳ ನಡುವೆ ವಾಗ್ವಾದವೂ ನಡೆದಿದ್ದು, “ನಮ್ಮ ಕರ್ತವ್ಯ ನಾವು ಮಾಡಲೇಬೇಕು” ಎಂದು ಅಧಿಕಾರಿಗಳು ಸ್ಪಷ್ಟ ನಿಲುವು ಪ್ರದರ್ಶಿಸಿದರು. ಅರ್ಧ ತೋಳಿನವರೆಗೂ ಬಟ್ಟೆ ಕತ್ತರಿಸಿದ ನಂತರ ಪರೀಕ್ಷಾ ಕೇಂದ್ರದೊಳಗೆ ತೆರಳುವಂತೆ ಅಧಿಕಾರಿಗಳು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ದೀನ ದಲಿತರು, ಎಲ್ಲ ವರ್ಗದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದವರೇ ಅಂಬೇಡ್ಕರ್: ಶಾಸಕ ಸ್ವರೂಪ್
ಈ ವಿಚಾರದಿಂದ ಹಲವು ಪರೀಕ್ಷಾರ್ಥಿಗಳು ಬೇಸರ ವ್ಯಕ್ತಪಡಿಸಿದರು.
