ಸಾಲಬಾಧೆ ತಾಳಲಾರದೆ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಯಶವಂತ ಕೃಷ್ಣಾಜಿ ಸಣ್ಣಬೊಮ್ಮಾಜಿ(45) ಮೃತ ರೈತನಾಗಿದ್ದು, ತನ್ನ ಜಮೀನಿನಲ್ಲಿ ಕೃಷಿಗಾಗಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ₹90,000 ಬೆಳೆಸಾಲ ಪಡೆದಿದ್ದರು. ಆದರೆ ಸಮರ್ಪಕ ಮಳೆ ಬೆಳೆಯಾಗದೆ ಬೆಳೆಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿಯೂ ಪತ್ನಿಯ ಹೆಸರಿನಲ್ಲಿ ₹50,000 ಹಾಗೂ ಸಂಬಂಧಿಕರ ಬಳಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹2ಲಕ್ಷ ಸಾಲ ಮಾಡಿದ್ದು, ಸಾಲ ತೀರಿಸುವ ಚಿಂತೆಯಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕೆಟ್ಟು ನಿಂತಿದ್ದ ಟ್ಯಾಂಕರ್ ಗೆ ಬೈಕ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
