ಉಡುಪಿ | ರಕ್ಷಿಸಲ್ಪಟ್ಟಿರುವ ಭಿಕ್ಷುಕಿಯ ಸಂಬಂಧಿಕರು ಪತ್ತೆ; ಹಸ್ತಾಂತರ

Date:

Advertisements

.ಭಿಕ್ಷಾಟನೆ ನಿರತ ವೃದ್ಧೆಯನ್ನು ರಕ್ಷಿಸಿ, ಸಮಾಜದ‌ ಮುಖ್ಯವಾಹಿನಿಗೆ ಸೇರಿಸುವಲ್ಲಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಯಶಸ್ವಿಯಾಗಿದೆ. ವೃದ್ಧೆಯ ವಿಳಾಸ‌ ಪತ್ತೆಗೊಳಿಸಿ, ವಾರಸುದಾರರಿಗೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡು, ಹೊಸಬದುಕು ಆಶ್ರಮದ ಮೇಲ್ವಿಚಾರಕರಾದ ವಿನಯಚಂದ್ರ, ರಾಜಶ್ರೀ ಭಾಗಿಯಾಗಿದ್ದರು.

ನಾಗರೀಕ ಸಮಿತಿಯ ಕಾರ್ಯಕರ್ತರು ಭಿಕ್ಷಾಟನೆ ನಿರತ ವೃದ್ಧೆಯನ್ನು ಕಳೆದ ನಲವತ್ತು ದಿನಗಳ ಹಿಂದೆ ರಕ್ಷಿಸಿದ್ದರು. ಜಿಲ್ಲೆಯಲ್ಲಿ ಭಿಕ್ಷುಕರ ಪುರ್ನವಸತಿ ಕೇಂದ್ರ ಇಲ್ಲದಿರುವುದರಿಂದ ಉಡುಪಿ ಕೊರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಿದ್ದರು. ಜೀವನ ನಿರ್ವಹಣೆಗೆ ಅಸಹಾಯಕತೆ ಎದುರಾಗಿರುವುದರಿಂದ, ಭಿಕ್ಷಾಟನೆ ಮಾಡುತ್ತಿರುವುದಾಗಿ, ಅಂದು ವೃದ್ಧೆ ಹೇಳಿಕೊಂಡಿದ್ದರು. ‌ಚಿಕ್ಕಮಗಳೂರು‌‌ ನಗರದ ಹೊರ ವಲಯದ ಗ್ರಾಮದಿಂದ ವಲಸೆ ಬಂದಿರುವ‌ ವೃದ್ಧೆಯು ಉಡುಪಿ ನಗರದ ಧಾರ್ಮಿಕ ಕೇಂದ್ರ, ಪ್ರಾರ್ಥನ‌ ಮಂದಿರದ ಮುಂಬಾಗ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ನಡೆಸುತ್ತಿದ್ದರು. ಸರಿಯಾದ ಆಹಾರ ಸೇವನೆಯಿಲ್ಲದೆ ನಿತ್ರಾಣ ಸ್ಥಿತಿಯಲ್ಲಿದ್ದ ವೃದ್ಧೆಗೆ, ಆಶ್ರಮ ಸೇವಾಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರು. ಹಾಗೆಯೇ ಆಶ್ರಮದಲ್ಲಿ ಪೌಷ್ಟಿಕ ಆಹಾರ ನೀಡಿ ಅಕ್ಕರೆಯಿಂದ ಉಪಚರಿಸಿದ್ದರು. ಭಿಕ್ಷಾಟನೆ ಕಾನೂನಿನಂತೆ ಅಪರಾಧ ಎಂದು ಮನವೊಲಿಸಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X