ಈ ದಿನ ಸಂಪಾದಕೀಯ | ಮೋದಿ-ಅದಾನಿಗಳನ್ನು ಅಣಕಿಸುವುದಲ್ಲ; ಬಿಚ್ಚಿಟ್ಟು ಬಹಿರಂಗಗೊಳಿಸಬೇಕಿದೆ

Date:

Advertisements
ಮೋದಿ - ಅದಾನಿ ಸಂಬಂಧ ಸಂಸತ್ತಿನ ಮುಂದೆ ಅಣಕು ಪ್ರದರ್ಶನ ಮಾಡುವಷ್ಟು ಹಗುರವಾದುದಲ್ಲ. ಅದರ ಗಂಭೀರತೆಯನ್ನು ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಕೂಡ ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಇಂತಹ ಚಿಲ್ಲರೆ ಪ್ರತಿಭಟನೆಗಳಿಂದ ಸಂಸತ್ತಿನ ಚಳಿಗಾಲ ಅಧಿವೇಶನದ ಮಹತ್ವದ ಒಂದು ವಾರ ವ್ಯರ್ಥವಾಗಿ ಕಳೆದುಹೋಗಿದೆ. ಅದನ್ನೇ ಮತ್ತೆ ಮುಂದುವರೆಸಿದರೆ, ಅದು ದೇಶದ ಜನತೆಗೆ ಬಗೆಯುವ ದ್ರೋಹವಾಗುತ್ತದೆ.

ಕಳೆದ ಭಾನುವಾರ ಪ್ರಧಾನಿ ಮೋದಿಯವರು, ‘ಕಳೆದ ಐದು ವರ್ಷಗಳಿಂದ ಅದಾನಿ–ಅಂಬಾನಿ ವಿಷಯ ಪ್ರಸ್ತಾಪಿಸುತ್ತಿದ್ದ ಶಹಜಾದ(ರಾಹುಲ್), ಈಗ ಈ ವಿಷಯವಾಗಿ ಮೌನ ತಾಳಿರುವುದೇಕೆ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಈ ಪ್ರಶ್ನೆಯ ಮೂಲಕ ರಾಹುಲ್ ಗಾಂಧಿಯವರನ್ನು ಕಿಚಾಯಿಸುವ ಅಗತ್ಯವಿರಲಿಲ್ಲ. ಏಕೆಂದರೆ, ಆ ಉದ್ಯಮಿಗಳೊಂದಿಗೆ ನಿಕಟ ಸಂಪರ್ಕ ಮತ್ತು ಸಂಬಂಧವಿಟ್ಟುಕೊಂಡಿರುವವರು ಮೋದಿ. ಅವರ ವ್ಯಾಪಾರ-ವಹಿವಾಟುಗಳಿಗಾಗಿ ಸರ್ಕಾರದ ರೀತಿ-ನೀತಿಗಳನ್ನು ಬದಲಾಯಿಸಿರುವವರು ಮೋದಿ. ಇದು ಇಡೀ ಜಗತ್ತಿಗೇ ಗೊತ್ತಿರುವ ಸತ್ಯ. ಆದರೂ, ಮೋದಿಯೇ ಮುಂದಾಗಿ ಅವರ ವಿಷಯ ಕೆದಕಿ, ರಾಹುಲ್‌ರೊಂದಿಗೆ ಜಗಳಕ್ಕೆ ಇಳಿಯಲು ಬಯಸಿದ್ದರು.

ಪ್ರಧಾನಿ ಮೋದಿಯವರು ಹೀಗೆ ಕಾಲು ಕೆದರಿ ಜಗಳಕ್ಕೆ ಕರೆಯುವುದರ ಹಿಂದೆ, ಎರಡು ಮುಖ್ಯ ವಿಚಾರಗಳಿವೆ. ಒಂದು, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಕೂಡ ಉದ್ಯಮಿಗಳಾದ ಅಂಬಾನಿ-ಅದಾನಿಯವರೊಂದಿಗೆ ಕೈ ಜೋಡಿಸಿದ್ದಾರೆ. ಅವರಿಂದ ಅನುಕೂಲ ಹಾಗೂ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿ, ಅವರ ವ್ಯಕ್ತಿತ್ವಹರಣ ಮಾಡುವುದು. ಇನ್ನೊಂದು, ಈ ವಿಷಯವನ್ನೆತ್ತಿಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ, ಧರಣಿ, ಕೂಗಾಟಕ್ಕಿಳಿದರೆ; ಅದು ಲೋಕಸಭೆ ಮತ್ತು ರಾಜ್ಯಸಭೆಗೂ ವಿಸ್ತರಿಸಿದರೆ, ಅದನ್ನೇ ಮುಂದೆ ಮಾಡಿ ಸಂಸತ್ ಅಧಿವೇಶನವನ್ನು ಹಾಳು ಮಾಡಿದರು ಎಂಬ ಅಪವಾದ ಹೊರಿಸುವುದು. ಸಂಸತ್ ಅಧಿವೇಶನವನ್ನು ಮುಂದೂಡುವುದು. ಪ್ರಶ್ನೆಗಳ ಮುಜುಗರದಿಂದ ಬಚಾವಾಗುವುದು.

Advertisements

ಅಸಲಿಗೆ, ಇಲ್ಲಿಯವರೆಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ನಾಯಕರ ಪ್ರಶ್ನೆಗಳಿಗೆ ಪ್ರಧಾನಿ ಮೋದಿಯವರು ಎದ್ದುನಿಂತು ಉತ್ತರಿಸಿದ ಉದಾಹರಣೆಯೇ ಇಲ್ಲ. ಪ್ರಧಾನಿಯ ಸ್ಥಾನದಲ್ಲಿ ನಿಂತು ಸತ್ಯ ನುಡಿದಿದ್ದಂತೂ ಇಲ್ಲವೇ ಇಲ್ಲ. ಅದರಲ್ಲೂ ರಾಹುಲ್ ಗಾಂಧಿಯವರು ಮೋದಿ-ಅದಾನಿ ಚಿತ್ರವನ್ನು ಪ್ರದರ್ಶಿಸಿದರೂ, ಮುಜುಗರದ ಸಂದರ್ಭಗಳಿಂದ ಪಾರಾಗಲಾದರೂ ಅದನ್ನು ಅಲ್ಲಗಳೆಯಲಿಲ್ಲ. ಅಂತಹ ಮೋದಿಯೇ ಮುಂದಾಗಿ ಈಗ ಅದಾನಿ-ಅಂಬಾನಿ ಹೆಸರು ಪ್ರಸ್ತಾಪಿಸಿದರು.

ಅದಕ್ಕೆ ಉತ್ತರವೆಂಬಂತೆ, ಸೋಮವಾರ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರು, ಉದ್ಯಮಿ ಗೌತಮ್‌ ಅದಾನಿ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ ಭವನದ ಆವರಣದಲ್ಲಿ ಭಿನ್ನ ಬಗೆಯ ಪ್ರತಿಭಟನೆ ನಡೆಸಿದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಾಣಂತಿಯರ ಸಾವಿನ ಹೊಣೆಯಲ್ಲ, ಮುಂದೆ ಹೀಗಾಗದಂತೆ ‘ವ್ಯವಸ್ಥೆ’ಯಲ್ಲಿ ಬದಲಾವಣೆ ಬೇಕು

ಆ ಪ್ರತಿಭಟನೆ ಹೇಗಿತ್ತೆಂದರೆ, ಇಬ್ಬರು ವ್ಯಕ್ತಿಗಳಿಗೆ ಮೋದಿ ಮತ್ತು ಅದಾನಿ ಮುಖವಾಡ ತೊಡಿಸಲಾಗಿತ್ತು. ಅವರನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಣಕು ಸಂದರ್ಶನ ಮಾಡುತ್ತಿದ್ದರು.

‘ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಲು ಬಿಡುತ್ತಿಲ್ಲವೇಕೆ?’ ಎಂದು ರಾಹುಲ್‌ ಕೇಳಿದ್ದಕ್ಕೆ ಅದಾನಿ ಮುಖವಾಡ ಧರಿಸಿದ್ದವ, ‘ಅದನ್ನು ನಾವು ಅಮಿತ್‌ ಭಾಯ್‌(ಅಮಿತ್‌ ಶಾ) ಅವರನ್ನು ಕೇಳಬೇಕು. ಅವರು ಕಾಣೆಯಾಗಿದ್ದಾರೆ’ ಎಂದರು.

ಮೋದಿ-ಅದಾನಿ ನಡುವಿನ ಸಂಬಂಧದ ಕುರಿತು ಕೇಳಿದಾಗ, ‘ನಾವಿಬ್ಬರೂ ಒಂದೇ. ನಾನು ಹೇಳುವುದನ್ನೆಲ್ಲ, ಅವರು (ಮೋದಿ) ಮಾಡುತ್ತಾರೆ’ ಎಂದು ಹೇಳಿದರು.

‘ಮೋದಿ ಅವರು ಮಾತನಾಡುತ್ತಿಲ್ಲವೇಕೆ?’ ಎಂಬ ಪ್ರಶ್ನೆಗೆ, ‘ಇತ್ತೀಚಿನ ದಿನಗಳಲ್ಲಿ ಅವರು ಒತ್ತಡದಲ್ಲಿದ್ದಾರೆ’ ಎಂದು ಉತ್ತರಿಸಿದರು.

‘ನಿಮ್ಮ ಮುಂದಿನ ಯೋಜನೆಗಳೇನು? ಏನನ್ನು ಖರೀದಿಸಲು ಮುಂದಾಗಿದ್ದೀರಿ?’ ಎಂದಾಗ, ‘ನಾವಿನ್ನೂ ಅದನ್ನು ನಿರ್ಧರಿಸಿಲ್ಲ. ಇಂದು ಸಂಜೆ ಸಭೆ ಸೇರಲಿದ್ದೇವೆ’ ಎಂದು ಹೇಳಿದರು.

ಮೋದಿ – ಅದಾನಿ ಸಂಬಂಧ ಸಂಸತ್ತಿನ ಮುಂದೆ ಅಣಕು ಪ್ರದರ್ಶನ ಮಾಡುವಷ್ಟು ಹಗುರವಾದುದಲ್ಲ. ಅದರ ಗಂಭೀರತೆಯನ್ನು ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ ಕೂಡ ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಇಂತಹ ಚಿಲ್ಲರೆ ಪ್ರತಿಭಟನೆಗಳಿಂದ ಸಂಸತ್ತಿನ ಚಳಿಗಾಲ ಅಧಿವೇಶನದ ಮಹತ್ವದ ಒಂದು ವಾರ ವ್ಯರ್ಥವಾಗಿ ಕಳೆದುಹೋಗಿದೆ. ಅದನ್ನೇ ಮತ್ತೆ ಮುಂದುವರೆಸಿದರೆ, ಅದು ದೇಶದ ಜನತೆಗೆ ಬಗೆಯುವ ದ್ರೋಹವಾಗುತ್ತದೆ.

ಏಕೆಂದರೆ, ಅದಾನಿ ಹಗರಣಗಳು, ಅದರಲ್ಲೂ ಇತ್ತೀಚಿನ ಅಮೆರಿಕದ ಹೊಸ ಆರೋಪದ ಬಗ್ಗೆ ದೇಶದ ಜನತೆ ತಿಳಿಯಬೇಕು. ಹತ್ತು ಹಲವು ಮಹತ್ವದ ಕ್ಷೇತ್ರಗಳಲ್ಲಿ ಸಾವಿರಾರು ಕೋಟಿಗಳ ಹೂಡಿಕೆ ಮಾಡಿರುವ ಅದಾನಿ ಸಮೂಹವು ದೇಶದ ಪ್ರಮುಖ ಉದ್ಯಮ ಸಂಸ್ಥೆಗಳಲ್ಲಿ ಒಂದು. ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸಹಚರರು ಭಾರತ ಸರ್ಕಾರದ ಅಧಿಕಾರಿಗಳಿಗೆ 2,100 ಕೋಟಿ ರೂ.ಗಳ ಲಂಚ ನೀಡಿದ್ದಾರೆ. ಅಮೆರಿಕದ ಹೂಡಿಕೆದಾರರು ಮತ್ತು ಬ್ಯಾಂಕುಗಳಿಗೆ ಸುಳ್ಳು ಹೇಳಲಾಗಿದೆ ಎಂದು ಅಮೆರಿಕದಲ್ಲಿ ದಾಖಲಾದ ಆರೋಪಪಟ್ಟಿಯಲ್ಲಿ ಇದೆ. ಭಾರತದಲ್ಲಿ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎಂಬುದು ಗಂಭೀರ ಆರೋಪ.

ಜೊತೆಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ(ಸೆಬಿ) ಮತ್ತು ಅದರ ಅಧ್ಯಕ್ಷೆ ಮಾಧವಿ ಬುಚ್ ಅವರ ನಡವಳಿಕೆ, ಹೇಳಿಕೆ ಕುರಿತೂ ಪ್ರಶ್ನೆಗಳಿವೆ. ಈ ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚೆಯಾಗುವುದರ ಜೊತೆಗೆ ವಿಶ್ವಾಸಾರ್ಹ ತನಿಖೆಯನ್ನೂ ನಡೆಸಬೇಕಿದೆ. ಈ ವಿಚಾರದಲ್ಲಿ ಸಾರ್ವಜನಿಕರಿಗೆ ಆಸಕ್ತಿ ಇದೆ ಮತ್ತು ಇದರಲ್ಲಿ ರಾಷ್ಟ್ರೀಯ ಹಿತಾಸಕ್ತಿಯೂ ಅಡಗಿದೆ. ಹಾಗಾಗಿ ಆಳುವ ಪಕ್ಷದ ನಾಯಕರು ಅದೆಷ್ಟೇ ಭಂಡತನ ಮೆರೆದರೂ, ವಿಷಯಾಂತರ ಮಾಡಿದರೂ, ವಿರೋಧ ಪಕ್ಷಗಳು ಪಟ್ಟು ಬಿಡದೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಯಾಗುವಂತೆ ನೋಡಿಕೊಳ್ಳಬೇಕು, ಉತ್ತರ ಪಡೆಯಬೇಕು.

ಹಣ ಮತ್ತು ಅಧಿಕಾರ ಎರಡೂ ಒಂದಾದರೆ ರಾಜಕಾರಣಕ್ಕೆ ಬೆಲೆ ಇಲ್ಲ, ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎನ್ನುವುದನ್ನು ಮೊದಲು ರಾಹುಲ್ ಗಾಂಧಿ ಅರ್ಥ ಮಾಡಿಕೊಳ್ಳಬೇಕಿದೆ. ಜನರಿಗೂ ಅರ್ಥ ಮಾಡಿಸಬೇಕಿದೆ.  

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X