ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರುಡೇಶ್ವರದಲ್ಲಿ ಸಮುದ್ರ ಪಾಳಾಗಿದ್ದ ಕೋಲಾರದ ಮೂವರು ವಿದ್ಯಾರ್ಥಿನಿಯರ ಮೃತದೇಹ ಬುಧವಾರ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿಯರನ್ನು ದೀಕ್ಷಾ ಜೆ (15), ಲಾವಣ್ಯಾ (15) ಮತ್ತು ವಂದನಾ (15) ಎಂದು ಗುರುತಿಸಲಾಗಿದೆ. ಈಗಾಗಲೇ ಓರ್ವ ವಿದ್ಯಾರ್ಥಿನಿ ಶೃವಂತಿ ಗೋಪಾಲಪ್ಪ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಪ್ರವಾಸಕ್ಕೆ ಬಂದಿದ್ದ ಕೋಲಾರದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲು
ಕೋಲಾರದ ಮುಳಬಾಗಿಲು ತಾಲ್ಲೂಕಿನ ಕೊತ್ತೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಮುರುಡೇಶ್ವರಕ್ಕೆ ತೆರಳಿದ್ದರು. ನಿನ್ನೆ ಸಂಜೆ (ಡಿಸೆಂಬರ್ 10) ಸಮುದ್ರ ತಟದಲ್ಲಿ ನೀರಿನಲ್ಲಿ ಆಡುತ್ತಿದ್ದಾಗ ಈ ಪೈಕಿ ಸುಮಾರು 7 ವಿದ್ಯಾರ್ಥಿನಿಯರು ಅಲೆಯಲ್ಲಿ ಕೊಚ್ಚಿ ಹೋಗಿದ್ದರು.
ಈ ಪೈಕಿ ಯಶೋದಾ, ವೀಕ್ಷಣಾ ಮತ್ತು ಲಿಪಿಕಾ ಎಂಬ ಮೂವರು ವಿದ್ಯಾರ್ಥಿನಿಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಓರ್ವ ವಿದ್ಯಾರ್ಥಿನಿ ಶೃವಂತಿ ಗೋಪಾಲಪ್ಪ ಪತ್ತೆಯಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ನಾಪತ್ತೆಯಾದ ದೀಕ್ಷಾ, ಲಾವಣ್ಯ, ವಂದನಗಾಗಿ ಶೋಧ ಮುಂದುವರೆದಿತ್ತು. ಇಂದು ಈ ಮೂವರೂ ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾಗಿದೆ.
