ರಕ್ಷಣಾ ಸಚಿವರಿಗೆ ಗುಲಾಬಿ, ತ್ರಿವರ್ಣ ಧ್ವಜ ನೀಡಿದ ರಾಹುಲ್ ಗಾಂಧಿ; ವಿಪಕ್ಷಗಳ ವಿನೂತನ ಪ್ರತಿಭಟನೆ

Date:

Advertisements

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೆಂಪು ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸಂಸತ್ತಿನಲ್ಲಿ ವಿಪಕ್ಷಗಳು ಮತ್ತು ಬಿಜೆಪಿ ನಡುವೆ ಸಂಘರ್ಷ ನಡೆಯುತ್ತಿರುವ ನಡುವೆಯೇ ರಾಜನಾಥ್ ಸಿಂಗ್ ಅವರಿಗೆ ಈ ಉಡುಗೊರೆಯನ್ನು ನೀಡುವ ಮೂಲಕ ವಿಪಕ್ಷ ನಾಯಕರುಗಳು ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಇದನ್ನು ಓದಿದ್ದೀರಾ? ದಾವಣಗೆರೆ | ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಕೊಡುವುದಕ್ಕೆ ವಿಳಂಬ; ಹಸಿರು ಸೇನೆ ಪ್ರತಿಭಟನೆ

Advertisements

ಇನ್ನು ಈಗಾಗಲೇ ತಾರತಮ್ಯ ಮಾಡುವ ಆರೋಪದಲ್ಲಿ ಈ ಅಧಿವೇಶನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಇಂಡಿಯಾ ಒಕ್ಕೂಟ ಮಂಡಿಸಿದೆ.

ಇದಕ್ಕೂ ಮುನ್ನ ಅದಾನಿ-ಮೋದಿ ಭಾಯಿ ಭಾಯಿ (ಅದಾನಿ ಮೋದಿ ಸಹೋದರರು) ಎಂಬ ಬ್ಯಾಗ್ ಹಿಡಿದು, ಟಿ ಶರ್ಟ್ ಧರಿಸಿ ಪ್ರತಿಭಟಿಸಿದ್ದ ಇಂಡಿಯಾ ಒಕ್ಕೂಟದ ನಾಯಕರು ಬುಧವಾರ ಮತ್ತೆ ವಿನೂತನ ಪ್ರತಿಭಟನೆ ನಡೆಸಿದರು.

ಇನ್ನು ಎಎನ್‌ಐ ಹಂಚಿಕೊಂಡ ವಿಡಿಯೋದಲ್ಲಿ ರಾಜನಾಥ್ ಸಿಂಗ್ ಅವರು ಕಾರಿನಿಂದ ಇಳಿದು ಸಂಸತ್ ಭವನದ ಮೆಟ್ಟಿಲುಗಳವರೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವೇಳೆ ಹಲವು ಕಾಂಗ್ರೆಸ್ ನಾಯಕರು ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ರಕ್ಷಣಾ ಸಚಿವರಿಗೆ ನೀಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.

ಇತರೆ ನಾಯಕರು ನೀಡಿದ ತ್ರಿವರ್ಣ ಧ್ವಜವನ್ನು ರಾಜನಾಥ್ ಸಿಂಗ್ ಪಡೆಯುವುದಿಲ್ಲ. ಈ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮುಂದೆ ಹೋಗಿ ನಗು ಮುಖದೊಂದಿಗೆ ರಾಜನಾಥ್ ಸಿಂಗ್ ಅವರಿಗೆ ಗುಲಾಬಿ ಹೂವು ಮತ್ತು ತ್ರಿವರ್ಣ ಧ್ವಜ ನೀಡಿದ್ದಾರೆ. ಇದನ್ನು ಸ್ವೀಕರಿಸಿ ರಕ್ಷಣಾ ಸಚಿವರು ಸಂಸತ್ ಭವನಕ್ಕೆ ತೆರಳಿದ್ದಾರೆ.

ಇದನ್ನು ಓದಿದ್ದೀರಾ? ಶೀಘ್ರವೇ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ‘ಪಿಂಡದಾನ’ ಮಾಡುತ್ತಾರೆ: ಆಚಾರ್ಯ ಪ್ರಮೋದ್ ಕೃಷ್ಣಂ

ಇನ್ನು ರಾಹುಲ್ ಗಾಂಧಿ ಮಾತ್ರವಲ್ಲ ಪ್ರಿಯಾಂಕಾ ಗಾಂಧಿ ವಾದ್ರಾ, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂನಂತಹ ಮಿತ್ರ ಪಕ್ಷಗಳ ಸಂಸದರು ಗುಲಾಬಿಗಳು ಮತ್ತು ಧ್ವಜಗಳೊಂದಿಗೆ ಬಿಜೆಪಿ ಸಂಸದರನ್ನು ಕಾಯುತ್ತಿದ್ದರು. ಇಂಡಿಯಾ ಒಕ್ಕೂಟದ ನಾಯಕರು ಹಲವು ದಿನಗಳಿಂದ ಅದಾನಿ ವಿಚಾರದಲ್ಲಿ ಸದನದಲ್ಲಿ ಚರ್ಚೆಗೆ ಆಗ್ರಹಿಸುತ್ತಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X