ಶ್ರೀರಂಗಪಟ್ಟಣ ಪರಿವರ್ತನಾ ಸಂಸ್ಥೆ ಹಾಗೂ ಅಚೀವರ್ಸ್ ಅಕಾಡೆಮಿ ವತಿಯಿಂದ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಕೂಟಕ್ಕೆ ಆಯ್ಕೆ ಮತ್ತು ತರಬೇತಿ ಶಿಬಿರವನ್ನು ಶ್ರೀರಂಗಪಟ್ಟಣದ ಪರಿವರ್ತನಾ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಷನ್ ಹಾಗೂ ಮಂಡ್ಯ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ವತಿಯಿಂದ 58ನೇ ಪುರುಷರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಪಂದ್ಯಕೂಟವು ಕೇರಳದ ಕೊಟ್ಟಾಯಂನಲ್ಲಿ ಡಿಸೆಂಬರ್ 26ರಿಂದ 29ರವರೆಗೆ ನಡೆಯಲಿದೆ.
ಮಂಡ್ಯ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಮಂಜೂರಾಂ ಪುಟ್ಟೇಗೌಡರವರು ಈ ತರಬೇತಿ ಮತ್ತು ಆಯ್ಕೆ ಶಿಬಿರಕ್ಕೆ ಚಾಲನೆಯನ್ನು ನೀಡಿ ಕ್ರೀಡಾಪಟುಗಳಿಗೆ ಶುಭವಾಗಲಿ, ಕರ್ನಾಟಕ ರಾಜ್ಯಕ್ಕೆ ಕೀರ್ತಿಯನ್ನು ತರಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಧನಂಜಯ್, ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್ನಿನ ಪ್ರಧಾನ ಕಾರ್ಯದರ್ಶಿಯಾದ ಬಿ.ಎಲ್, ಲೋಕೇಶ್, ರಾಜ್ಯ ಅಸೋಸಿಯೇಷನ್‌ನ ಖಜಾಂಚಿ ಪ್ರಕಾಶ್ ಎನ್ ನರಗಟ್ಟಿ, ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ವಿನೋದ್, ಹೇಮೋದರ್, ಡಾ. ರಾಘವೇಂದ್ರ ಕೆ, ಉದ್ಯೋಗದಾತ ಸಂಸ್ಥೆಯ ಅಧ್ಯಕ್ಷರಾದ ರುಕ್ಮಾಂಗದ, ಮಂಡ್ಯ ಜಿಲ್ಲಾ ಅಸೋಸಿಯೇಷನ್ ಕಾರ್ಯದರ್ಶಿಯಾದ ಡಾ.ರಾಘವೇಂದ್ರ, ಹಾಗೂ ವಿವಿಧ ಜಿಲ್ಲೆಯಿಂದ ಬಂದಂತಹ ಕ್ರೀಡಾಪಟುಗಳು ಹ್ಯಾಂಡ್ ಬಾಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ ಮತ್ತು ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದರು.
