ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಗರ ಹೊರವಲಯದ ಮಾಲಗತ್ತಿ ಕ್ರಾಸ್ ಸಮೀಪ ನಡೆದಿದೆ.
ನಗರದ ಹಮಾಲ್ ವಾಡಿಯ ನಿವಾಸಿ ಖಲೀಲ್ ತಂದೆ ಲಾಲ್ ಅಹ್ಮದ್ (37) ಕೊಲೆಯಾದ ವ್ಯಕ್ತಿ.ದುಷ್ಕರ್ಮಿಗಳು ಖಲೀಲ್‍ನ ಮುಖಕ್ಕೆ ಮಾರಕಾಸ್ತ್ರಗಳಿಂದ ತಿವಿದಿದ್ದು ಮುಖ ಗುರುತು ಸಿಗದಂತಾಗಿದೆ.
ಖಲೀಲ್ ಮೇಲೆ ಸ್ಟೇಷನ್ ಬಜಾರ್ ಠಾಣೆಯಲ್ಲಿ ರೌಡಿಶೀಟರ್, ದರೋಡೆ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ನಿವೇಶನಕ್ಕಾಗಿ ನಡೆದ ಜಗಳವೇ ಕೊಲೆಗೆ ಕಾರಣ ಎನ್ನಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.