ಬೀದಿನಾಯಿ ದಾಳಿಗೆ ಯುವತಿ ಸಾವನ್ನಪ್ಪಿರುವುದು ಖಂಡನೀಯ. ಬೀದಿನಾಯಿ ಹಾವಳಿಗೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ರಾಯಚೂರು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸರ್ವೋದಯ ಕಟ್ಟಡ ಕಾರ್ಮಿಕರ ಸಂಘದಿಂದ ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
“ರಾಯಚೂರು ನಗರದ ಮಡ್ಡಿಪೇಟೆ ಬಡಾವಣೆಯ ನಿವಾಸಿ ಮಹಾದೇವಿ ಎಂಬ ಯುವತಿ ಮನೆಯ ಮುಂದೆ ನಿಂತಿದ್ದಾಗ ಬೀದಿನಾಯಿ ಏಕಾಏಕಿ ದಾಳಿ ಮಾಡಿದ್ದರಿಂದ ಇಂದು ಆಕೆ ಅಸುನೀಗಿರುವುದು ಬೇಸರದ ಸಂಗತಿ. ನಾಯಿ ದಾಳಿಗೆ ಸಾವುಗಳು ಸಂಭವಿಸಿದರೂ ಜಿಲ್ಲಾಡಳಿತ ಎಚ್ಚರಗೊಳ್ಳದಿದ್ದರೆ ಏನೆಂದು ಭಾವಿಸಬೇಕು. ಯಾವ ಧೈರ್ಯದಲ್ಲಿ ಬೀದಿಯಲ್ಲಿ ಓಡಾಡುವುದು” ಎಂದು ಸಂಘಟನಾಕರರು ಅಸಮಾಧಾನ ವ್ಯಕ್ತಪಡಿಸಿದರು.
“ನಗರದ ರಸ್ತೆಗಳಲ್ಲಿ ವಾಹನ ಸವಾರರ ಮೇಲೆ ದಾಳಿ ಮಾಡುವುದಕ್ಕೆ ಮುಂದಾದಾಗ ಸಾಕಷ್ಟು ಗಂಭೀರ ಅಪಘಾತಗಳು ಸಂಭವಿಸಿವೆ. ಮಕ್ಕಳು ಶಾಲೆಗೆ ಹೋಗುವಾಗ ದಾಳಿ ಮಾಡಿ ಸಾವು ನೋವಿನಲ್ಲಿ ಸಾಗಿ ಸಾವಿರಾರು ಹಣ ಖರ್ಚು ಮಾಡಿದ್ದಾರೆ. ದಿನನಿತ್ಯ ಹಲವು ಪ್ರಕರಣಗಳು ಕಂಡುಬಂದರೂ ನಗರಸಭೆ ಎಚ್ಚೆತ್ತುಕೊಳ್ಳುತ್ತಿಲ್ಲ” ಎಂದು ಸಂಘಟನಾಕಾರರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬೀದಿನಾಯಿ ದಾಳಿಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ ಸಾವು
“ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳನ್ನು ಕೂಡಲೇ ಬೇರೆಕಡೆ ಸಾಗಿಸಬೇಕು. ತುರ್ತಾಗಿ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಅಧ್ಯಕ್ಷರು ತಿಮ್ಮಪ್ಪ ಸ್ವಾಮಿ, ಮಲ್ಲೇಶ ನಾಯಕ, ಮೈಲಾರಿ, ನಾರಾಯಣ, ಜಂಬಪ್ಪ, ಯಲ್ಲಪ್ಪ ಭಂಡಾರಿ, ಸಿದ್ದಪ್ಪ, ಯುವರಾಜ್, ರಮೇಶ್, ಸುಗೂರಪ್ಪ ಸೇರಿದಂತೆ ಇತರರು ಇದ್ದರು.
