ಗುಬ್ಬಿ | ಮೈನಿಂಗ್ ಕಳ್ಳತನ ಮಾಡಿ ₹20 ಕೋಟಿ ದಂಡ ಕಟ್ಟಿದವರು ಯಾರು ಗೊತ್ತೆ?; ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್

Date:

Advertisements

: ಕಾಂಗ್ರೆಸ್ ಸಂಸ್ಕೃತಿ ಬಿಂಬಿಸಿದ ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಏಕವಚನ ಪ್ರಯೋಗ ಮಾಡಿ ವಿರೋಧ ಪಕ್ಷದ ಮುಖಂಡ ದಿಲೀಪ್ ಅವರನ್ನು ನಿಂದಿಸಿದ್ದಲ್ಲದೆ ಮೈನಿಂಗ್ ಕಳ್ಳ ಎಂಬ ಆರೋಪ ಮಾಡಿದ್ದರು. ಆದರೆ ವಾಸ್ತವದಲ್ಲಿ ಮೈನಿಂಗ್ ಕಳ್ಳತನ ಮಾಡಿ 20 ಕೋಟಿ ದಂಡ ಕಟ್ಟಿದವರು ಯಾರು ಎಂಬುದು ವೆಂಕಟೇಶ್ ಅವರಿಗೆ ತಿಳಿದಿಲ್ಲ ಎಂದು ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್ ಕುಟುಕಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಅಕ್ರಮ ಮೈನಿಂಗ್ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು ಒಬ್ಬರ ಮೇಲೆ ಆರೋಪ ಹಾಗೂ ನಿಂದನೆ ಮಾಡುವಾಗ ನಾಲಿಗೆ ಬಿಗಿ ಹಿಡಿದಿರಬೇಕು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗೌರವ ತರುವ ರೀತಿ ನಡೆದುಕೊಳ್ಳದೇ ಎಲ್ಲರ ಮೇಲೂ ಏಕವಚನ ಪ್ರಯೋಗ ಮಾಡುವ ಮೊದಲು ತಾವು ಎಲ್ಲಿದ್ದೀರಿ ಹೇಗಿದ್ದೀರಿ ಎಂಬುದು ಮರೆಯಬಾರದು ಎಂದು ಛೇಡಿಸಿದರು.

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆ ಇರುವಾಗ ಹೋರಾಟದ ದಿಕ್ಕು ತಪ್ಪಿಸಲು ಸಲ್ಲದ ಹೇಳಿಕೆ ವೈಯಕ್ತಿಕ ನಿಂದನೆ ಮಾಡಿ ಪ್ರಚೋದನೆ ನೀಡುತ್ತಿರುವುದು ಹೋರಾಟವನ್ನು ಹತ್ತಿಕ್ಕುವ ಕೆಲಸ ಈ ರೀತಿ ಮಾಡಲಾಗುತ್ತಿದೆ. ಶಾಸಕರ ಮೇಲಿನ ಪ್ರೀತಿ ಇದ್ದರೆ ಅಭಿವೃದ್ದಿ ಕೆಲಸದ ಬಗ್ಗೆ ಪ್ರಸ್ತಾಪಿಸಿ, ಹೇಮಾವತಿ ನೀರು ಉಳಿಸಲು ಸರ್ಕಾರದ ಮುಂದೆ ಹೋರಾಟ ಮಾಡಲಿ. ನನ್ನ ವಿರೋಧವಿದೆ ಎನ್ನುತ್ತೀರಿ ಆದರೆ ಕಾಮಗಾರಿ ನಿಲ್ಲಿಸುತ್ತೇನೆ ಎಂದು ಎಲ್ಲಿಯೂ ಹೇಳಿಕೆ ನೀಡುತ್ತಿಲ್ಲ. ಇಲ್ಲೇ ತಿಳಿಯುತ್ತದೆ ಅವರ ರಾಜಕೀಯ ತಂತ್ರ. ಅಭಿವೃದ್ದಿ ವಿಚಾರದಲ್ಲಿ ಶ್ರಮದಿಂದ ಅನುದಾನ ತಂದ ನಿದರ್ಶನವಿಲ್ಲ. ಗುತ್ತಿಗೆದಾರರು ಶ್ರಮಪಟ್ಟು ತಂದ ಕೆಲಸವಷ್ಟೇ ತಾಲ್ಲೂಕಿನಲ್ಲಿ ನಡೆದಿದೆ. ಬಿಕ್ಕೆಗುಡ್ಡ ಯೋಜನೆ ಕಳೆದ 11 ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಇದೇ ಅವರ ಅಭಿವೃದ್ಧಿಗೆ ಸಾಕ್ಷಿ ಎಂದು ವ್ಯಂಗ್ಯವಾಡಿ ಹಾಲು ಒಕ್ಕೂಟದ ಚುನಾವಣೆ ಹೇಗೆಲ್ಲಾ ಮಾಡಿದ್ದೀರಿ, ಅಧಿಕಾರ ದುರ್ಬಳಕೆ ಮಾಡಿದ್ದೀರಿ ಜನರಿಗೆ ತಿಳಿದಿದೆ ಎಂದರು.

Advertisements

ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಮಾಧ್ಯಮ ಸುದ್ದಿಗೋಷ್ಠಿ ಮಾಡಿದ ಕಾಂಗ್ರೆಸ್ ಅಧ್ಯಕ್ಷರಿಂದ ಒಳ್ಳೆಯ ಸುದ್ದಿ ನಿರೀಕ್ಷೆ ಮಾಡಿದ್ದರೆ ಅಲ್ಲಿ ಹೇಮಾವತಿ ಹೋರಾಟದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಎಲ್ಲಾ ಮುಖಂಡರ ಬಗ್ಗೆ ಏಕವಚನ ಪ್ರಯೋಗ ಮಾಡಿ ನಿಂದಿಸಿ ವಿಷಯಾಂತರ ಮಾಡಿ ಹೋರಾಟ ದಿಕ್ಕು ತಪ್ಪಿಸುವ ಹುನ್ನಾರ ಮಾಡಲಾಗಿದೆ. ಯಾವುದೇ ರಾಜಕೀಯ ಲಾಭವಿಲ್ಲದೆ ರೈತಪರ ಹೋರಾಟ ಮಾಡುತ್ತಿದ್ದೇವೆ. ಇದರ ತೀವ್ರತೆಗೆ ದಂಗಾಗಿ ಈ ರೀತಿಯ ಹತಾಶೆ ನುಡಿಗಳು ವೈಯಕ್ತಿಕ ನಿಂದನೆಯತ್ತ ಸಾಗಿದೆ. ಶಾಸಕರು ರೈತಪರ ಇದ್ದರೆ ಸರ್ಕಾರದ ಜೊತೆ ನಡೆಸಿದ ಪತ್ರ ವ್ಯವಹಾರ ಜನತೆ ಮುಂದೆ ತೋರಿಸಲಿ. ಕೆನಾಲ್ ನಲ್ಲಿ ನೀರು ಬರುವಾಗ ಎಲ್ಲಾ ಕೆರೆಗಳಿಗೆ ನೀರು ಹರಿಸಿದ್ದ ಶಾಸಕರೇ ಮುಂದಿನ ದಿನದಲ್ಲಿ ಕೆನಾಲ್ ನಲ್ಲಿ ನೀರು ಬಾರದಿದ್ದಾಗ ಏನು ಮಾಡುತ್ತೀರಿ ಎಂಬ ಉತ್ತರ ರೈತರಿಗೆ ನೀಡಿ. ವೆಂಕಟೇಶ್ ಅವರ ಮೂಲಕ ನಿಂದನೆ ಮಾಡಿಸಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಶಾಸಕರಿಗೆ ಕೆಟ್ಟ ಹೆಸರು ಬರುತ್ತದೆ. ಪ್ರತಿ ನಾಯಕರು ಶ್ರಮದಿಂದ ಬೆಳೆದಿದ್ದಾರೆ. ವೈಯಕ್ತಿಕ ನಿಂದನೆ ಬಿಟ್ಟು ಅಭಿವೃದ್ದಿ ವಿಚಾರವಾಗಿ ಬಿಕ್ಕೆಗುಡ್ಡ ಹಾಗೂ ಹಾಗಲವಾಡಿ ಕೆರೆಗೆ ನೀರು ಹರಿಸುವ ಯೋಜನೆಗೆ ಹಣ ಯಾವಾಗ ಮಂಜೂರು ಮಾಡಿಸುತ್ತೀರಿ ಉತ್ತರ ನೀಡಿ ಎಂದು ಪ್ರಶ್ನೆ ಕೇಳಿದರು.

1000764626

ಜೆಡಿಎಸ್ ಮುಖಂಡ ಜಿ.ಡಿ.ಸುರೇಶ್ ಗೌಡ ಮಾತನಾಡಿ ಬಕೇಟ್ ಹಿಡಿಯುವ ಕೆಲಸ ಮಾಡುವ ಕಾಂಗ್ರೆಸ್ ಕೆಲ ಮುಖಂಡರು ಶಾಸಕರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಮೇಲ್ನೋಟಕ್ಕೆ ವಿರೋಧವಿದೆ ಎಂದು ಹೇಳಿಕೆ ನೀಡಿ ಒಳಗೆ ಕಾಮಗಾರಿಗೆ ಸಾಥ್ ನೀಡುತ್ತಿರುವ ಶಾಸಕರು ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚಿಸಿದ ಪತ್ರ ವ್ಯವಹಾರ ಜನರ ಮುಂದೆ ಪ್ರದರ್ಶಿಸಬೇಕು. ಲೋಕಸಭಾ ಚುನಾವಣೆಯಲ್ಲಿ ಎನ್ ಡಿ ಎ ತನ್ನ ಶಕ್ತಿ ಪ್ರದರ್ಶನ ತೋರಿದ ಹಿನ್ನಲೆ ಕಾಂಗ್ರೆಸ್ ಶಕ್ತಿ ಕುಂದಿದೆ. ಈ ಹಿನ್ನಲೆ ಇಲ್ಲಸಲ್ಲದ ನಡವಳಿಕೆ ಕಾಂಗ್ರೆಸ್ ಮುಖಂಡರಿಂದ ಕಾಣುತ್ತಿದೆ ಎಂದು ಕುಟುಕಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್ ಕುಮಾರ್ ಮಾತನಾಡಿ ಸ್ಥಳೀಯ ಚುನಾವಣೆ ಹಿನ್ನಲೆ ಹೇಮಾವತಿ ಹೋರಾಟ ಎಂದು ಟೀಕಿಸಿದ ಕಾಂಗ್ರೆಸ್ ಮುಖಂಡರು ಈ ಮೊದಲು ನಡೆದ ಲಿಂಕ್ ಕೆನಾಲ್ ಕಾಮಗಾರಿ ಬಗ್ಗೆ ತಿಳಿಯಬೇಕಿದೆ. ಜಿಲ್ಲೆಗೆ ಮರಣ ಶಾಸನ ಬರೆದ ಪೈಪ್ ಲೈನ್ ಕೆಲಸಕ್ಕೆ ಕಾಂಗ್ರೆಸ್ 500 ಕೋಟಿ ಮಂಜೂರು ಮಾಡಿತ್ತು. ನಂತರ ಬಿಜೆಪಿ ಸರ್ಕಾರ ಈ ಯೋಜನೆ ರದ್ದು ಮಾಡಿ ಜಿಲ್ಲೆಯ ರೈತರನ್ನು ಉಳಿಸಿತ್ತು. ಆದರೆ ಮತ್ತೇ ತರಲೆ ಮಾಡಿರುವುದು ಕಾಂಗ್ರೆಸ್ ಎಂಬುದು ಮರೆಯುವಂತಿಲ್ಲ. ನಮ್ಮ ಹೋರಾಟ ಶಾಸಕರು, ಮಾಜಿ ಶಾಸಕರು ಸೇರಿದಂತೆ ಎಲ್ಲಾ ಸಂಘಗಳು ಕೈಜೋಡಿಸಿ ಬಿಗಿಯಾದ ಕಾರಣ ದಿಕ್ಕು ತಪ್ಪಿಸುವ ಹುನ್ನಾರ ಈ ರೀತಿ ನಡೆದಿದೆ ಎಂದರು.

ಗ್ರಾಪಂ ಸದಸ್ಯ ವಿದ್ಯಾಸಾಗರ್ ಮಾತನಾಡಿ ಹೇಮಾವತಿ ಹೋರಾಟವನ್ನು ಅವಹೇಳನ ಮಾಡಿ ರೈತ ವಿರೋಧಿ ಎನಿಸಿದ ವೆಂಕಟೇಶ್ ಅವರು ಒಂದೂವರೆ ವರ್ಷದ ಹಿಂದೆ ದಲಿತ ಪತ್ರಕರ್ತರ ಬಗ್ಗೆ ಮಾತನಾಡಿ ದಲಿತ ವಿರೋಧಿ ಎನಿಸಿದ್ದರು. ಈಗ ಗ್ರಾಮ ಪಂಚಾಯಿತಿ ಚುವಾವಣೆಯಲ್ಲಿ ಗೆಲ್ಲಲು ಆಗದು ಎಂದು ದಿಲೀಪ್ ಅವರನ್ನು ಮೊದಲಿಸಿದ ವೆಂಕಟೇಶ್ ಅವರು ನನ್ನ ಎದುರು ಪಂಚಾಯಿತಿ ಚುನಾವಣೆ ಫೇಸ್ ಮಾಡಲಿ ಎಂದು ಸವಾಲೆಸೆದರು.

ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯತೀಶ್ ಮಾತನಾಡಿ ಬಿಜೆಪಿಯಲ್ಲಿ ರಾಜಕೀಯ ಚೆಡ್ಡಿ ಹಾಕಿದ ವೆಂಕಟೇಶ್ ಈಗ ಕಾಂಗ್ರೆಸ್ ಅಧ್ಯಕ್ಷರಾಗಿ ಗೌರವಯುತ ನಡವಳಿಕೆ ಮರೆತಿದ್ದಾರೆ. ಶಾಸಕ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ ದಿಲೀಪ್ ಹಾಗೂ ನಾಗರಾಜು ಅವರನ್ನು ಯಾರೆಂದು ಗೊತ್ತಿಲ್ಲ ಎನ್ನುವ ಉಂಬತನ ಒಳ್ಳೆಯದಲ್ಲ. ಯಾವ ಚುನಾವಣೆಯಲ್ಲಿ ಸ್ಪರ್ಧಿಸದ ವೆಂಕಟೇಶ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಚುನಾಯಿತ ಪ್ರತಿನಿಧಿ ಎಂದು ತಿಳಿದಿದ್ದಾರೆ ಎಂದು ಛೇಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್ಅಣ್ಣಪ್ಪಸ್ವಾಮಿ, ಬಿಜೆಪಿ ರೈತಮೋರ್ಚಾ ಸಿದ್ದರಾಮಯ್ಯ, ವೀರಶೈವ ಮಹಾಸಭಾ ಅಧ್ಯಕ್ಷ. ಮಂಜುನಾಥ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗಣ್ಣ, ಮುಖಂಡರಾದ ರಾಜಣ್ಣ, ಡಿ.ರಘು, ಮಡೇನಹಳ್ಳಿ ಲೋಕೇಶ್, ಹೊಸಹಳ್ಳಿ ರೇಣುಕಾ ಪ್ರಸಾದ್, ಹೊನ್ನಪ್ಪ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X