ಸಾಲ ಬಾಧೆ ತಾಳಲಾರದೆ ದಂಪತಿಗಳಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಕಟ್ಟೆಗದ್ದೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕಟ್ಟೆಗದ್ದೆ ಗ್ರಾಮದ ನಟೇಶ್(55) ಹಾಗೂ ಚಿನ್ನಮ್ಮ(45) ಮೃತ ದಂಪತಿಗಳು. ಸತಿ ಪತಿಗಳಿಬ್ಬರು ಬುಧವಾರ ರಾತ್ರಿ ತಮ್ಮ ಜಮೀನಿನಲ್ಲಿ ನಿರ್ಮಿಸಿದ್ದ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿದ್ದೀರಾ? ಹಾಸನ l ರೈತರಿಗೆ ಬೆಂಬಲ ಬೆಲೆ: ಸಂಸದರು ಧ್ವನಿ ಎತ್ತದಿದ್ದರೆ ಉಪವಾಸ ಸತ್ಯಾಗ್ರಹ; ರೈತ ಸಂಘ ಎಚ್ಚರಿಕೆ
ಗುರುವಾರ ನಟೇಶ್ ಪತ್ನಿ ಚಿನ್ನಮ್ಮನ ಶವ ನೀರಿನಲ್ಲಿ ತೇಲುತ್ತಿರುವುದನ್ನು ಕಂಡ ಗ್ರಾಮಸ್ಥರು ಆಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಆಲೂರು ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
