ಬಿಸಿಎಂ ಹಾಸ್ಟೆಲ್ ಸಮಸ್ಯೆಗಳ ಪರಿಹಾರಕ್ಕೆ ವಿದ್ಯಾರ್ಥಿನಿಯರಿಂದ ಮಳೆಯಲ್ಲಿಯೇ ಪ್ರತಿಭಟನಾ ಧರಣಿ ಪ್ರಸ್ತುತ ನಡೆಯುತ್ತಿದೆ.
ಕ್ಯಾತ್ಸಂದ್ರದ ಮೈದಾಳ ರಸ್ತೆಯಲ್ಲಿರುವ ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ಎದುರು ಹಾಸ್ಟೆಲ್ ವಿದ್ಯಾರ್ಥಿಯರು ಎಐಡಿಎಸ್‌ಒ ಹಾಗೂ ಎಐಎಂಎಸ್ಎಸ್ ಸಹಯೋಗದಲ್ಲಿ ಮೂಲಭೂತ ಸೌಕರ್ಯಗಳ ಈಡೇರಿಕೆಗಾಗಿ ಹಾಗೂ ಜಿಲ್ಲಾಧಿಕಾರಿ ಮತ್ತು ಬಿಸಿಎಂ ಇಲಾಖೆ ಕಮೀಷನರ್ ಸ್ಥಳಕ್ಕೆ ಆಗಮಿಸಬೇಕೆಂದು ಮಳೆಯ ನಡುವೆಯೇ ಪಟ್ಟು ಹಿಡಿದಿದ್ದಾರೆ.
ಎಂಟು ತಿಂಗಳಿಂದೆಯೇ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿ ಮಾಡಿದ್ದರೂ ಯಾವುದೇ ಕ್ರಮವಾಗಿಲ್ಲ. ಪ್ರತಿಭಟನೆಯನ್ನು ತಡೆಯುವ ಪ್ರಯತ್ನವೂ ನಡೆದಿದೆ ಎಂದು ವಿದ್ಯಾರ್ಥಿನಿಯರು ದೂರಿದರು.
ಅಧಿಕಾರಿಗಳೇ ಬೆಡ್ ಶೀಟ್ ಗಳನ್ನು ಕದ್ದು ಮಾರಾಟ ಮಾಡಿದ್ದಾರೆ, ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ. ಕಿಟ್ ಗಳನ್ನು ನೀಡಿ ಸಹಿ ಮಾಡಿಸಿಕೊಂಡು ಹಿಂಪಡೆದಿದ್ದಾರೆ ಎಂದು ಆರೋಪಿಸಿದರಲ್ಲದೆ ತನಿಖೆಗೆ ಆಗ್ರಹಿಸಿದರು.
ಹಾಸ್ಟೆಲ್ ಅಡುಗೆಯವರನ್ನು ರೂಂ ನಲ್ಲಿ ಕೂಡಿಹಾಕಿ ಹೇಳಿಕೆ ನೀಡದಂತೆ ತಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಹೇಳಿದರು.
ಪ್ರತಿಭಟನೆಗೆ ಕರುನಾಡ ವಿಜಯಸೇನೆ ಸಂಘಟನೆ ಸಾಥ್ ನೀಡಿತು.