ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಸೃಷ್ಟಿಸಿರುವ ಪುಷ್ಪ-2 ನಾಯಕ ನಟ ಅಲ್ಲು ಅರ್ಜುನ್ ಬಂಧನ-ಬಿಡುಗಡೆಯ ನಾಟಕೀಯ ಬೆಳವಣಿಗೆ ಶುಕ್ರವಾರ ನಡೆಯಿತು. ಇದರ ಬೆನ್ನಲ್ಲೇ ಈ ಪ್ರಕರಣ ಮತ್ತೊಂದು ಅನಿರೀಕ್ಷಿತ ತಿರುವು ಪಡೆಯಿತು ಕೂಡ.
ಪುಷ್ಪ-2 ಬಿಡುಗಡೆಯ ದಿನದಂದು ಸಿನೆಮಾ ಥಿಯೇಟರಿನ ಕಾಲ್ತುಳಿತದಲ್ಲಿ ಅಭಿಮಾನಿ ಮಹಿಳೆಯೊಬ್ಬಳ ಸಾವಿನ ಕೇಸಿಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಬಂಧನಕ್ಕೆ ಒಳಗಾಗಿದ್ದರು. ಈ ಬಂಧನದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ತೆಲಂಗಾಣದ ರೇವಂತ ರೆಡ್ಡಿ ಸರ್ಕಾರ ತರಾತುರಿಯಲ್ಲಿ ಸಾರಿ ಹೇಳಿದೆ.
ಅಷ್ಟೇ ಅಲ್ಲ, ಮೃತ ಮಹಿಳೆ ರೇವತಿಯ ಪತಿ ಭಾಸ್ಕರ್, ಈ ಸಂಬಂಧದ ದೂರನ್ನು ವಾಪಸು ಪಡೆಯಲು ಸಿದ್ಧವೆಂದು ಸಾರಿದ್ದಾನೆ. ಕಾಲ್ತುಳಿತ ಮತ್ತು ತನ್ನ ಪತ್ನಿಯ ಸಾವಿಗೆ ಅಲ್ಲು ಅರ್ಜುನ್ ಜವಾಬ್ದಾರರಲ್ಲ ಎಂದೂ ಹೇಳಿದ್ದಾರೆ. ನಮ್ಮ ಮಗನ ಒತ್ತಾಯಕ್ಕಾಗಿ ಪುಷ್ಪ-2 ನೋಡಲು ಅಂದು ನಾವು ಸಂಧ್ಯಾ ಥಿಯೇಟರಿಗೆ ಹೋಗಿದ್ದೆವು. ಅಲ್ಲು ಅರ್ಜುನ್ ಅಂದೇ ಥಿಯೇಟರಿಗೆ ಬಂದದ್ದು ಅವರ ತಪ್ಪೆಂದು ಹೇಗೆ ಹೇಳೋದು? ಕೇಸು ವಾಪಸು ಪಡೆಯಲು ನಾನು ತಯಾರಿದ್ದೇನೆ. ಅಲ್ಲು ಅರ್ಜುನ್ ಬಂಧನದ ಸುದ್ದಿ ಆಸ್ಪತ್ರೆಯಲ್ಲಿ ಟೀವಿ ಚಾನೆಲ್ ನೋಡ್ತಿದ್ದಾಗ ಗೊತ್ತಾಯ್ತು ಎಂದಿದ್ದಾರೆ. ಭಾಸ್ಕರ್ ಅವರ ದೂರಿನ ಮೇರೆಗೆ ಅಲ್ಲು ಅರ್ಜುನ್ ಅವರನ್ನು ಬಂಧಿಸಿಲಾಗಿತ್ತು.

ಅಲ್ಲು ಅರ್ಜುನ್ ಕೇಸಿನಲ್ಲಿ ಭಾರೀ ಅನಿರೀಕ್ಷಿತ ತಿರುವು!
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: