ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೊಗಿ ಇಲಾಖೆ ಕರೆದಿರುವ ಪ್ಯಾಕೇಜ್ ಟೆಂಡರ್’ಅನ್ನು ರದ್ದು ಪಡಿಸುವಂತೆ ಲೋಕೋಪಯೋಗಿ ಇಲಾಖೆ ಎದುರು ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲಾ ಸಿವಿಲ್ ಪ.ಜಾತಿ, ಪ.ಪಂಗಡದ ಗುತ್ತಿಗೆದಾರರ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಈ ವೇಳೆ ಸಂಘದ ವಿಭಾಗಿಯ ಅಧ್ಯಕ್ಷ ಸಿದ್ದು ಮಣ್ಣನವರ ಮಾತನಾಡಿ, ಕೊಪ್ಪಳ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಕಲ್ಬುರ್ಗಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಸೇರಿ ಪ.ಜಾತಿ, ಪ.ಪಂಗಡ, ಹಿಂದುಳಿದ, 2ಎ ಮತ್ತು ಪ್ರ.ವರ್ಗ 1 ಜಾತಿಗಳ ಗುತ್ತಿಗೆದಾರರಿಗೆ ಟೆಂಡರ್ ನೀಡುವಲ್ಲಿ ಅನ್ಯಾವೆಸಗುತ್ತಿದ್ದಾರೆ ಮತ್ತು ಕೆ.ಟಿ.ಪಿ.ಪಿ ಕಾಯ್ದೆಯ ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ.ಜಾತಿ/ಪ.ಪಂಗಡಕ್ಕೆ ಶೇಕಡಾ 24.10% ಇದ್ದು ಈ ನಿಯಮಾನುಸಾರ ಟೆಂಡರ್ ಕರೆಯಬೇಕು. ಆದರೆ, ಪಿ.ಡಬ್ಲ್ಯೂ.ಡಿ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ.ಜಾತಿ ಮತ್ತು ಪ.ಪಂಗಡ, ಹಿಂದುಳಿದ ಸಮುದಾಯಗಳಿಗೆ ಅನ್ಯಾಯವೆಸಗುತ್ತಲೇ ಬಂದಿದ್ದಾರೆ. ಕೊಪ್ಪಳ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಕಲ್ಬುರ್ಗಿ ಮುಖ್ಯ ಇಂಜಿನಿಯರ್ ಇವರು ಸವರ್ಣಿಯ ಮೇಲ್ಜಾತಿ ಜನಪ್ರತಿನಿಧಿಗಳ ಕೈಗೊಂಬೆಯಾಗಿ ವರ್ತಿಸಿ ತಳಸಮುದಾಯಗಳಿಗೆ ಟೆಂಡರ್ ಹಂಚಿಕೆಯಲ್ಲೂ ಅನ್ಯಾಯ ಮಾಡುತ್ತಿದ್ದಾರೆ. ಈ ಪ್ಯಾಕೇಜ್ ಟೆಂಡರ್‌ನ್ನು ರದ್ದುಪಡಿಸುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಗುತ್ತೆಗೆದಾರ ಮಂಜುನಾಥ ಮಿಸಲಾಪುರ ಎಚ್ಚರಿಕೆ ನಿಡಿದರು.
ಈ ವರದಿ ಓದಿದ್ದೀರಾ? ಹಾವೇರಿ | ಎಂಟನೇ ದಿನಕ್ಕೆ ಕಾಲಿಟ್ಟ ರೈತರ ಆಹೋರಾತ್ರಿ ಧರಣಿ
ಈ ವೇಳೆ ನಾಗರಾಜ್ ನಂದಾಪುರ, ಯಂಕಣ್ಣ ಹೊಸಳ್ಳಿ, ವೀರಭದ್ರಪ್ಪ ನಾಯಕ, ದ್ಯಾಮಣ್ಣ ಬಜೆಂತ್ರಿ, ನಿಂಗಪ್ಪ ಗದ್ದಿ ಇನ್ನಿತರರು ಹಾಜರಿದ್ದರು.