ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಲ್ಲಿ ಜಗಜ್ಯೋತಿ ಬಸವಣ್ಣನ ಭಾವಚಿತ್ರ ಅನಾವರಣ

Date:

Advertisements

ಬಸವಣ್ಣನವರ ಪುತ್ಥಳಿ ನಿರ್ಮಿಸಿ ಪೂಜೆಗೆ ಸೀಮಿತಗೊಳಿಸದೆ, ಜಗಜ್ಯೋತಿ ಬಸವಣ್ಣನವರ ತತ್ವ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಕೆ ರವೀಂದ್ರನಾಥ್ ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಅನಾವರಣಗೊಳಿಸಿದ ವೇಳೆ ಮಾತನಾಡಿದರು.

“12ನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಸಮಾಜದಲ್ಲಿದ್ದಂಥ ಜಾತಿ ವ್ಯವಸ್ಥೆ, ಲಿಂಗ ಅಸಮಾನತೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಅಂಧಕಾರಗಳನ್ನು ನಿರ್ಮೂಲನೆ ಮಾಡಿ, ಧಾರ್ಮಿಕ ಮೂಢನಂಬಿಕೆಗಳನ್ನು, ಕಿತ್ತೊಗೆದು, ಕಾಯಕ ದಾಸೋಹ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಇಂದಿನ ಸಂವಿಧಾನದ ಆಶಯವಾದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ತತ್ವವನ್ನು 12ನೇ ಶತಮಾನದಲ್ಲಿಯೇ ಬಸವಣ್ಣನವರು ರೂಪಿಸಿ ನಿರೂಪಿಸಿದ್ದರು. ಈ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಮಾತ್ರ, ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ” ಎಂದು ನುಡಿದರು.

Advertisements

ಇದೇ ವೇಳೆ ದಾಸೋಹಿ ಶರಣ ಪ್ರಭುದೇವ ಅರಳಿ ಅವರನ್ನು ಸತ್ಕರಿಸಲಾಯಿತು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮರೆಡ್ಡಿ ಹೀರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೆ ರವೀಂದ್ರನಾಥ ಅವರ ನೇತೃತ್ವದಲ್ಲಿ, ಪ್ರಭುರಾಜ ಅರಳಿ ಅವರು ತಮ್ಮ ತಂದೆ ಕೊಟ್ರೇಶಪ್ಪ ಅರಳಿ ಅವರ ಸ್ಮರಣಾರ್ಥ ನೀಡಿದ ಜಗಜ್ಯೋತಿ ಬಸವೇಶ್ವರ ಫೋಟೋವನ್ನು ಅನಾವರಣಗೊಳಿಸಿದರು.

ಈ ಸುದ್ದಿ ಒದಿದ್ದೀರಾ? ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪಂಚಮಸಾಲಿ ಶ್ರೀಗೆ ಬಿಜೆಪಿ ಸುಪಾರಿ: ಕೆ ಎಸ್ ಶಿವರಾಮು ಆರೋಪ

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷೆ ಸೌಭಾಗ್ಯ ಲಕ್ಷ್ಮಿ, ಲಿಂಗಾಯತ ಸಮಾಜದ ಮುಖಂಡರಾದ ಬಸವರಾಜ ಮಾವಿನಹಳ್ಳಿ, ಬಸವ ಬಳಗದ ಬಸವಕಿರಣ ಸ್ವಾಮಿ, ಲೋಕೇಶ್ ಅವರಾದಿ, ಕೋರಿ ಶೆಟ್ಟಿ ಲಿಂಗಪ್ಪ, ಡಾ. ಮಹಾಬಲೇಶ್ವರ ರೆಡ್ಡಿ, ಶರಣಗೌಡ ಪೊಲೀಸ್ ಪಾಟೀಲ,‌ ಇಷ್ಠಲಿಂಗ ಅಧ್ಯಯನದ ಬಸವರಾಜ ಮಾವಿನಳ್ಳಿ, ಬಸವ ಬಳಗದ ಬಸವಕಿರಣ ಸ್ವಾಮಿ, ಲೋಕೇಶ ಅವರಾಧಿ, ಲಿಂಗಾಯತ ಸಮಾಜದ ಗಣ್ಯರಾದ ಕೊರಿಶೆಟ್ಟಿ ಲಿಂಗಪ್ಪ, ಶರಣುಸ್ವಾಮಿ, ಡಾ.ಮಹಾಬಲೇಶ್ವರ ರೆಡ್ಡಿ, ಅರಳಿ ಪ್ರಭು, ಜಾಫರಸಾಬ, ಬಸವಣ್ಣ ಲಿಂಗಾಯತ, ಸೋ ದಾ ವಿರೂಪಾಕ್ಷಗೌಡ, ಮುದನೂರು ಉಮಾಮಹೇಶ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್ ವಿಭಾಗದ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ

ಬೆಂಗಳೂರು ನಿಮ್ಹಾನ್ಸ್ ಟೆಲಿ-ಮನಸ್ ಅಪೆಕ್ಸ್ ತಂಡದಿಂದ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್...

ಕಲಬುರಗಿ | ಶಾಲಾ ಮೇಲ್ಚಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ; ಗ್ರಾಮಸ್ಥರಿಂದ ಪ್ರತಿಭಟನೆ

ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ...

ಗದಗ | ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ, ಸ್ಪಂದಿಸದ ಆಡಳಿತ: ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿ

"ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ...

ಕೊಪ್ಪಳ | ಅಕ್ರಮ ಗಾಂಜಾ ಮಾರಾಟ : ಒಂದೇ ಕುಟುಂಬದ 3 ಸೇರಿ ನಾಲ್ವರ ಬಂಧನ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ...

Download Eedina App Android / iOS

X