ಓಪನ್‌ಎಐ ಬಗ್ಗೆ ಗಂಭೀರ ಆರೋಪ ಮಾಡಿದ್ದ ಭಾರತೀಯ ಮೂಲದ ಸಂಶೋಧಕ ಸುಚಿರ್ ಬಾಲಾಜಿ ಶವವಾಗಿ ಪತ್ತೆಯಾಗಿದ್ದಾರೆ. 26 ವರ್ಷದ ಸುಚಿರ್ ಯುಎಸ್‌ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನವೆಂಬರ್ 26ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಸರಿಸುಮಾರು ಮಧ್ಯಾಹ್ನ 1 ಗಂಟೆಗೆ ಸುಚಿರ್ ಅಪಾರ್ಟ್‌ಮೆಂಟ್ ಪರಿಶೀಲಿಸುವಂತೆ ಕರೆಯೊಂದು ಬಂದಿದೆ. ಅದೇ ದಿನ ಬಾಲಾಜಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಇತರೆ ಯಾವುದೇ ಅನುಮಾನಾಸ್ಪದ ಪುರಾವೆಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಕೆ
ಜನಪ್ರಿಯ ಕೃತಕ ಬುದ್ಧಿಮತ್ತೆ ಸಂಸ್ಥೆಯಾದ ಓಪನ್‌ಎಐ (OpenAI) ಬಗ್ಗೆ ಸುಚಿರ್ ಗಂಭೀರ ಆರೋಪಗಳನ್ನು ಮಾಡಿದ ಕೆಲವೇ ತಿಂಗಳುಗಳ ನಂತರ ಈ ದುರಂತ ಸಂಭವಿಸಿದೆ.
ಓಪನ್‌ಎಐ ಸಂಸ್ಥೆಯ ಮಾಜಿ ಸಂಶೋಧಕರಾಗಿದ್ದ ಬಾಲಾಜಿ ಅವರು ಈ ಹಿಂದೆ ನ್ಯೂಯಾರ್ಕ್ ಟೈಮ್ಸ್‌ಗೆ ಲೇಖನವೊಂದನ್ನು ಬರೆದಿದ್ದರು. “ಚಾಟ್‌ಜಿಪಿಟಿಗೆ ತರಬೇತಿ ನೀಡಲು ಓಪನ್‌ಎಐ ಹಕ್ಕುಸ್ವಾಮ್ಯದ ವಸ್ತುಗಳನ್ನು ಬಳಸುತ್ತಿದೆ” ಎಂದು ತಾನಿದ್ದ ಸಂಸ್ಥೆಯ ವಿರುದ್ಧವೇ ಆರೋಪಿಸಿದ್ದರು.
— Elon Musk (@elonmusk) December 14, 2024
ಓಪನ್‌ಎಐ ಸಂಸ್ಥೆ ಅಮೆರಿಕದ ಹಕ್ಕುಸ್ವಾಮ್ಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಚಾಟ್‌ಜಿಪಿಟಿಯಂತಹ ತಂತ್ರಜ್ಞಾನಗಳು ಇಂಟರ್‌ನೆಟ್ ಅನ್ನು ಹಾನಿಗೊಳಿಸುತ್ತಿವೆ ಎಂದು ದೂರಿದ್ದರು. ಹಾಗೆಯೇ ಇದಾದ ಕೆಲವು ದಿನಗಳ ನಂತರ ತಾನಾಗಿಯೇ ನ್ಯೂಯಾರ್ಕ್ ಟೈಮ್ಸ್ ಅನ್ನು ಸಂಪರ್ಕಿಸಿ ಈ ಲೇಖನ ನೀಡಿರುವುದಾಗಿ ತಿಳಿಸಿದ್ದರು.
ಇನ್ನು ಈ ಹಿಂದೆ ಓಪನ್‌ಎಐ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್, ಬಾಲಾಜಿ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬರೀ ‘ಹ್ಮ್’ ಎಂದು ಪೋಸ್ಟ್ ಮಾಡುವ ಮೂಲಕ ಮಸ್ಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
