ಮಾನವ ಹಕ್ಕುಗಳ ರಕ್ಷಣಾ ಪರಿಷತ್’ನ ಪದಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್’ನ ರಾಜ್ಯಾಧ್ಯಕ್ಷ ಗಣೇಶ ನಾಯ್ಕ ಮಾತನಾಡಿ, ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ಮತ್ತು ಮಮತಾ ನಾಯ್ಕ ಅವರ ಮಾನವೀಯ ಕಾರ್ಯ ಶ್ರೇಷ್ಠವಾದದ್ದು. ಅನಾಥರನ್ನು ಕರೆತಂದು ಸಲಹುವ ಕಾರ್ಯ ಎಲ್ಲರಿಂದ ಸಾದ್ಯವಿಲ್ಲ. ಇದಕ್ಕೆ ತ್ಯಾಗ ಮತ್ತು ಪರಿಶ್ರಮ ಬೇಕು. ಈ ಮಾನವೀಯ ಕಾರ್ಯದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ನಾಗರಾಜ ನಾಯ್ಕರಿಗೆ ಸದಾ ಬೆಂಬಲವಾಗಿರುತ್ತದೆ. ನಮ್ಮ ಎಲ್ಲಾ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ತನು, ಮನ, ಧನದಿಂದ ಆಶ್ರಯಧಾಮದ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಆಶ್ರಯಧಾಮದಲ್ಲಿರುವ ಸುಮಾರು 65ಕ್ಕೂ ಅಧಿಕ ಅನಾಥ, ಅನಾರೋಗ್ಯ ಪೀಡಿತ ವ್ಯಕ್ತಿಗಳು, ಮಕ್ಕಳು, ಅನಾಥರಂತೆ ಬೀದಿಯಲ್ಲಿ ಬಿದ್ದಿರುವ ವಯಸ್ಸಾದವರು, ಶಾಲೆಗೆ ಹೋಗುತ್ತಿರುವ ಚಿಕ್ಕ ಮಕ್ಕಳು, ಕೈ ಇಲ್ಲದವರು, ಕಣ್ಣಿಲ್ಲದವರು, ವಿಕಲಚೇತನರಿಗೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್’ನ ಕಡೆಯಿಂದ ಆಶ್ರಮ ವಾಸಿಗಳಿಗೆ ಉಪಯೋಗ ಆಗುವಂತಹ ಆಹಾರದ ಕಿಟ್, ಹಣ್ಣು, ತರಕಾರಿಗಳನ್ನು ವಿತರಿಸಿದರು.
ಈ ವರದಿ ಓದಿದ್ದೀರಾ? ಧಾರವಾಡ | ಕ್ರಿಮಿನಲ್ ಜೊತೆಗೇ ಪರಾರಿಯಾಗಿದ್ದ ಪೇದೆ: ಹುಬ್ಬಳ್ಳಿ ಪೊಲೀಸರ ವಶಕ್ಕೆ
ಈ ಸಂದರ್ಭದಲ್ಲಿ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾವತಿ ವಿಷ್ಣು ದೇವಾಡಿಗ, ರಾಜ್ಯ ವಕ್ತಾರ ನಿರಂಜನ್ ಪಾಟೀಲ್, ಅಡಲ್ಟ್ಸ್ ಕಾರ್ಯದರ್ಶಿ ವಿಜಯ ಹೆಗಡೆ, ಲಲಿತಾ ಪರಮೇಶ್ವರ್ ನಾಯ್ಕ, ಆಡಳಿತ ಕಮೀಟಿ ಸದಸ್ಯರುಗಳಾದ ಜಿತೇಂದ್ರ, ನರೇಶ, ಶಿವಮೊಗ್ಗ ಜಿಲ್ಲಾಧ್ಯಕ್ಷರು ಮತ್ತು ಮುಂಡಗೋಡ ಉಸ್ತುವಾರಿ ಧನರಾಜ್ ಸಿ, ಅಧ್ಯಕ್ಷ ಉದಯ ಕುಮಾರ ಕವಟೆ, ಉಪಾಧ್ಯಕ್ಷ ಪರಶುರಾಮ ಎನ್ ಮೆಂತೆಕಾರ, ಪ್ರಧಾನ ಕಾರ್ಯದರ್ಶಿ ಮಂಜು ನೇಮಣ್ಣನವರ, ಉಪಾಧ್ಯಕ್ಷ ಮಾರುತಿ ಎ ಪುರದವರ, ಸಂಚಾಲಕ ಪ್ರಶಾಂತ ಎಸ್ ಕಾಂಬಳೆ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಎಸ್ ಕವಟೆ, ಮಹಿಳಾ ಪ್ರತಿನಿಧಿ ಚೈತ್ರಾ ಎಂ ಇಂಗಳಗಿ, ಕಲ್ಪನ ಮತ್ತು ಗಂಗವ್ವ ಹಾಗೂ ಅನಾಥಾಶ್ರಮದ ಮುಖ್ಯಸ್ಥ ಡಾ. ನಾಗರಾಜ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.