ಔರಾದ್ ತಾಲ್ಲೂಕಿನ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಏಕಂಬಾ, ಹುಲ್ಯಾಳ ಹಾಗೂ ಖಂಡೆಕೇರಿ ಗ್ರಾಮಗಳ ಕೆರೆಗಳಲ್ಲಿ ಸಂಗ್ರಹವಾದ ನೀರು ಸುತ್ತಲಿನ ಹೊಲಗಳಿಗೆ ಹರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಹಾಗೂ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಕುರಿತು ಜಂಟಿ ಸಂಘಟನೆಗಳ ಪ್ರಮುಖರು ಶುಕ್ರವಾರ ಔರಾದ್ ಗ್ರೇಡ್-2 ತಹಸೀಲ್ದಾರ್ ಸಂಗಯ್ಯಾ ಸ್ವಾಮಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ರೈತರ ಕೃಷಿ ಭೂಮಿಗಳಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚದಿಂದ ಬ್ರಿಜ್ ಕಂ ಬ್ಯಾರೇಜ್‌ಗಳು ನಿರ್ಮಿಸಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವು ಉಪಯೋಗಕ್ಕೆ ಬಾರದೆ ಹಾಳಾಗುತ್ತಿವೆ. ಈ ಮೂರು ಗ್ರಾಮಗಳ ಕೆರೆ ನೀರು ಬಿಟ್ಟರೆ ಸುತ್ತಲಿನ ಅನೇಕ ಗ್ರಾಮಗಳ ಹಿಂಗಾರು ಬೆಳೆಗಳಿಗೆ ಅನುಕೂಲವಾಗಲಿದೆʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಖಾಲಿಯಿರುವ ಸಿಬ್ಬಂದಿ ಕೊರತೆ ನೀಗಿಸಿ : ಶಾಸಕ ಪ್ರಭು ಚವ್ಹಾಣ
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಅನಿಲ ದೇವಕತ್ತೆ, ರೈತ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಬಾವಗೆ, ರೈತ ಮುಖಂಡ ವಿಶ್ವನಾಥ ಧರಣೆ, ನಮ್ಮ ಕರ್ನಾಟಕ ಸೇನೆ ತಾಲೂಕಾಧ್ಯಕ್ಷ ಬಾಲಾಜಿ ದಾಮ, ಗೌರವಾಧ್ಯಕ್ಷ ಬಸವರಾಜ ಶೆಟಕಾರ್ ಸೇರಿದಂತೆ ಅರ್ಜುನ್ ಭಂಗೆ, ಬಾಲಾಜಿ ಕಾಸಲೆ, ಆಕಾಶ್, ಮಾರುತಿ, ರಾಹುಲ್, ವಿಜಯ ಹಾಗೂ ಕರವೇ ಕಾರ್ಯಕರ್ತರು ಹಾಜರಿದ್ದರು.