ಹಾಸನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಎಸ್ ಎಂ ಕೃಷ್ಣರಿಗೆ ಶ್ರದ್ಧಾಂಜಲಿ

Date:

Advertisements

ಇತ್ತಿಚಿಗೆ ಮಡಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಹಾಸನ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಮುಖಂಡರು ಎರಡು ನಿಮಿಷ ಮೌನ ಆಚರಿಸಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಇದೆ ವೇಳೆ ಕಾಂಗ್ರೆಸ್ ಮುಖಂಡ ಇ ಎಚ್ ಲಕ್ಷ್ಮಣ್ ಮಾತನಾಡಿ, “ನಮ್ಮ ರಾಜ್ಯದಲ್ಲಿ ಸರಳ ಸಜ್ಜನಿಕೆಯ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಎಸ್ ಎಂ ಕೃಷ್ಣ ಇಬ್ಬರೂ ಕೂಡ ಒಂದು ರೀತಿಯ ಹೊಂದಾಣಿಕೆ ಇದ್ದವರು. ಯಾವತ್ತೂ, ಯಾರಿಗೂ ನೋವಾಗದ ರೀತಿ ರಾಜಕಾರಣ ಮಾಡಿಕೊಂಡವರು. ದೇವೇಗೌಡರು ಮತ್ತು ಈ ಇಬ್ಬರೂ ಕೂಡ ಒಂದೇ ಬಾರಿ ಸ್ವತಂತ್ರವಾಗಿ ಗೆದ್ದು ವಿಧಾನಸೌದಕ್ಕೆ ಹೋದವರು. ಅಲ್ಲಿಂದ ಅವರ ಪಯಾಣ ತಿರುಗಿ ನೋಡಲೇ ಇಲ್ಲ. ಅವರು ಕೊಟ್ಟ ಕೊಡುಗೆ ಅನೇಕ ಮೈಲಿಗಲ್ಲುಗಳನ್ನು ಬಿಟ್ಟು ಹೋಗಿದೆ. ಕೆಂಗಲ್ ಹನುಮಂತಯ್ಯ ಕೊಟ್ಟಂಥ ಕೊಡುಗೆ ಎಸ್ ಎಂ ಕೃಷ್ಣ ಅವರು” ಎಂದರು.

“ರಾಜಕಾರಣದಲ್ಲಿ ಅನೇಕ ಕಷ್ಟ ಅನುಭವಿಸಿದವರು. ಇವರ ಅಧಿಕಾರದಲ್ಲಿ ವೀರಪ್ಪನ್ ರಾಜ್‌ಕುಮಾರ್‌ ಅವರನ್ನು ಅಪಹರಣ ಮಾಡಿದ್ದಂತಹ ಘಟನೆಯ ನೋವುಗಳಿದ್ದರೂ ಎಸ್ ಎಂ ಕೃಷ್ಣ ಅವರು ನಗುನಗುತ್ತಲೇ ಕೆಲಸ ಮಾಡಿದವರು” ಎಂದು ನೆನಪಿಸಿಕೊಂಡರು.

Advertisements

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಕೆ ಜವರೇಗೌಡ ಮಾತನಾಡಿ, “ಎಸ್ ಎಂ ಕೃಷ್ಣ ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಭಾರತ ಕಂಡಂತಹ ಅಪುರೂಪದ ರಾಜಕಾರಣಿ, ಅನೇಕ ಪಾಶ್ಚಾತ್ಯ ದೇಶಗಳಿಗೆ ಭೇಟಿ ಕೊಟ್ಟಾಗ ಬೆಂಗಳೂರು ಸಿಲಿಕಾನ್ ಸಿಟಿಯ ಕೊಡುಗೆ ಕೊಟ್ಟ ಕೃಷ್ಣ ಅವರ ಹೆಸರು ಬರುತ್ತದೆ. ಕ್ರಿಯಾಶೀಲ ರಾಜಕಾರಣಿ ಎಂದರೂ ತಪ್ಪಾಗಲಾರದು. ಮಂಡ್ಯದ ಉಪಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಸಂಸದರಾಗುತ್ತಾರೆ. ದೇವರಾಜ ಅರಸು ಸಿಎಂ ಆದಾಗ ಕೃಷ್ಣ ಅವರು ಕೈಗಾರಿಕಾ ಮಂತ್ರಿಯಾಗಿದ್ದರು. ಇವರು ನಿಜವಾಗಿಯೂ ರಾಜಕಾರಣಿಗೆಳಿಗೆ ಆದರ್ಶ ವ್ಯಕ್ತಿ” ಎಂದು ಎಸ್ ಎಂ ಕೃಷ್ಣ ಅವರನ್ನು ನೆನೆದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಕೆರೆಗಳಿಂದ ಹೊಲಗಳಿಗೆ ನೀರು ಹರಿಸಲು ಆಗ್ರಹ

ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಶಾಸಕ ಬಿ ವಿ ಕರೀಗೌಡ, ಹೆಚ್ ಪಿ ಮೋಹನ್, ಶಿವಪ್ಪ, ಗೋಪಾಲ್, ವಿಶ್ವನಾಥ್, ಅಶೋಕ್, ಬಾಲಶಂಕರ್, ದೇವಪ್ಪ ಮಲ್ಲಿಗೆವಾಳ್, ರಘು ದಾಸರಕೊಪ್ಪಲು, ಕಡಾಕಡಿ ಫೀರ್ ಸಾಹೇಬ್, ಮುನಿಸ್ವಾಮಿ, ಯೂತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X