ತನ್ನ ಸಂಬಂಧಿಯ ಒಡೆತನದಲ್ಲಿದ್ದ ವಜ್ರ ವ್ಯಾಪಾರ ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗುವುದರಿಂದ ತಪ್ಪಿಸಿಕೊಳ್ಳಲು ಯುವಕನೊಬ್ಬ ತನ್ನದೇ ಕೈನ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಗುಜರಾತ್‌ನ ಸೂರತ್ ಜಿಲ್ಲೆಯ ವರಾಚಾ ಮಿನಿ ಬಜಾರ್‌ನ ನಿವಾಸಿ ಮಯೂರ್ ತಾರಾಪರಾ ಎಂಬಾತ ತನ್ನದೇ ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ, ಆತ ತನ್ನ ಸಂಬಂಧಿ ʼಅನಭ್ ಜೆಮ್ಸ್ʼ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ಅನಭ್ ಜೆಮ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಲು ಮಯೂರ್ ಇಷ್ಟವಿರಲಿಲ್ಲ. ಸಂಬಂಧಿಯೇ ಆಗಿದ್ದರಿಂದ ಕೆಲಸ ಬಿಡುತ್ತೇನೆಂದು ಹೇಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಬೆರಳುಗಳೇ ಇಲ್ಲವೆಂದರೆ ಅವರ ಕೆಲಸದಿಂದ ಬಿಡಿಸುತ್ತಾರೆಂದು ಯೋಜಿಸಿದ್ದ ಮಯೂರ್ ತನ್ನ ಎಡಗೈನ ನಾಲ್ಕು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.