ಧಾರವಾಡ | ಜಾತ್ರಿ ಕಾದಂಬರಿಯಲ್ಲಿ ಹಳ್ಳಿ ವಾತಾವರಣ ವಾಸ್ತವವಾಗಿ ಮೂಡಿಬಂದಿದೆ : ಪ್ರೊ. ಮುಕುಂದ ರಾಜ್

Date:

Advertisements

ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮದ ಪ್ರಮುಖರು ಬ್ರಿಟೀಷರ ಪರವಾಗಿದ್ದರೆ; ಜನಸಾಮಾನ್ಯರು ಭಯದಿಂದ ಬದುಕುತ್ತಿದ್ದ ಚಿತ್ರಣವನ್ನು ಪ್ರೊ. ಧರಣೇಂದ್ರ ಕುರಕುರಿ ತಮ್ಮ ಜಾತ್ರಿ ಕಾದಂಬರಿಯಲ್ಲಿ ಕಾಣಿಸಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎನ್.ಎಸ್.ಮುಕುಂದರಾಜ್ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಜಾತ್ರಿ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜಾತ್ರಿ ಕಾದಂಬರಿಯಲ್ಲಿ ಹಳ್ಳಿಯ ವಾತಾವರಣ ವಾಸ್ತವವಾಗಿ ಇರುವದನ್ನು ಕಾಣಬಹುದು. ಧಾರವಾಡದ ಸುತ್ತಮುತ್ತಲಿನ ಭಾಷೆ, ಕಥಾ ನಿರೂಪಣೆ, ಅಭಿವ್ಯಕ್ತಿ ಚೆನ್ನಾಗಿ ವ್ಯಕ್ತವಾಗಿದೆ ಮತ್ತು ಸ್ವಾತಂತ್ರ್ಯ ನಂತರದ ಹಳ್ಳಿಗಳ ಪರಿಸ್ಥಿತಿ, ಮೌಲ್ಯಗಳ ಅಧಃಪಥನ, ರಾಜಕೀಯ ವ್ಯವಸ್ಥೆಯನ್ನು ಈ ಕಾದಂಬರಿಯಲ್ಲಿ ಕಾಣಬಹುದು ಎಂದರು.

ಸಾಹಿತಿ ವೆಂಕಟೇಶ್ ಮಾಚಕನೂರ ಮಾತನಾಡಿ, ಕಾದಂಬರಿಯಲ್ಲಿ ವ್ಯಕ್ತವಾದ ಸೂಕ್ಷ್ಮ ಸಂವೇದನೆಗಳನ್ನು ಉದಾಹರಣೆಗಳೊಂದಿಗೆ ವಿಶ್ಲೇಷಿಸಿದರು. ಕಾದಂಬರಿಕಾರ ಪ್ರೊ. ಧರಣೇಂದ್ರ ಕುರಕುರಿ ಕಾದಂಬರಿಯ ಹಿನ್ನೆಲೆಯನ್ನು ವಿವರಿಸಿದರು. ಡಾ. ಕೆ ಬಿ ಪವಾರ ಜಾತ್ರಿ ಕಾದಂಬರಿಯಲ್ಲಿ ಬಳಸಿಕೊಂಡ ಜನಪದ ಸಾಹಿತ್ಯದ ಔಚಿತ್ಯ ವನ್ನು ಕುರಿತು ಮಾತನಾಡಿದರು.‌ ಕಾದಂಬರಿಯ ಪ್ರಕಾಶಕರಾದ ಸವಿತಾ ಯಾಜಿ ಮಾತನಾಡಿ, ಪ್ರಕಾಶಕರ ಮತ್ತು ಬರಹಗಾರರ ಹಾಗೂ ಓದುಗರ ಸಂಬಂದವನ್ನು ವಿವರಿಸಿದರು. ಜಿಲ್ಲಾ ಕನ್ನಡ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಪರಿಷತ್ತು ಸಾಹಿತಿಗಳು ರಚಿಸಿದ ಪ್ರತಿಗಳ ಬಿಡುಗಡೆಗೆ ಸದಾ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.

Advertisements

ಈ ವರದಿ ಓದಿದ್ದೀರಾ? ಉತ್ತರ ಕನ್ನಡ | ಅನಾಥರನ್ನು ಕರೆತಂದು ಸಲಹುವ ಕಾರ್ಯ ಎಲ್ಲರಿಂದ ಸಾಧ್ಯವಿಲ್ಲ: ಗಣೇಶ್ ನಾಯ್ಕ

ತಾಲೂಕಿನ ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಸ್ವಾಗತಿಸಿದರು. ಡಾ.‌ಜಿನದತ್ ಹಡಗಲಿ ವಂದನಾರ್ಪಣೆ ಮಾಡಿದರು. ತಾರಾ ಹೆಗಡೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸತೀಶ್ ಕುಲಕರ್ಣಿ, ಪದ್ಮಾ ಚಿನ್ಮಯಿ, ಎಸ್.ಎಮ್.ದಾನಪ್ಪಗೌಡರ, ಶಾಂತವೀರ ಬೆಟಗೇರಿ, ಶಾಂತರಾಜ ಮಲ್ಲಸಮುದ್ರ, ಚೆನ್ನಪ್ಪ ಅಂಗಡಿ, ಡಾ. ಬಸು ಬೆವಿನಗಿಡದ, ಸರಸ್ವತಿ ಕಳಸದ, ಡಾ . ಹೇಮಾ ಪಟ್ಟಣಶೆಟ್ಟಿ, ವಿದ್ಯಾ ವಂಟಮುರಿ, ಸಿದ್ದಮ್ಮ ಅಡಿವೆನ್ನವರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಎಸ್ ಎಚ್ ಪ್ರತಾಪ್, ಎಸ್ ಕೆ ಕೊಪ್ಪಾ, ನಾಗೇಂದ್ರ ಕೆಂಪಣ್ಣವರ, ಪ್ರೊ. ಎಸ್ ಎಮ್ ಸಾತ್ಮಾರ, ಎಫ್ ಬಿ ಕಣವಿ, ಗಂಗಾಧರ ಗಾಡದ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X