ಸಂವಿಧಾನ ಶಿಲ್ಪಿ ದಿನದರ್ಶಿಕೆ ವಿಶೇಷವೆಂದರೆ ಪ್ರತಿ ಆಯಾ ದಿನದ ದಿನಾಂಕದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಮಾಹಿತಿ ಇದರಲ್ಲಿದೆ ಎಂದು ದಲಿತ ಕಲಾ ಮಂಡಳಿ ಮುಖಂಡ ಮುತ್ತು ಬಿಳಿಯಲಿ ಹೇಳಿದರು.
ಗದಗ ಪಟ್ಟಣದಲ್ಲಿ ದಲಿತ ಕಲಾ ಮಂಡಳಿಯ ಗೆಳೆಯರು ಸೇರಿ “ಸಂವಿಧಾನ ಶಿಲ್ಪಿ” ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
“ಲಡಾಯಿ ಪ್ರಕಾಶನ ಪ್ರಕಟಿಸಿರುವ 2025ರ ರಾಜ್ಯದಲ್ಲಿ ಲಡಾಯಿ ಪ್ರಕಾಶನ ವೈಚಾರಿಕ ಪುಸ್ತಕಗಳಿಗೆ ಹೆಸರು ವಾಸಿಯಾಗಿದೆ. ಇಂತಹ ಪ್ರಕಾಶನದಿಂದ ಪ್ರತಿವರ್ಷ ಸಂವಿಧಾನ ಶಿಲ್ಪಿ ದಿನದರ್ಶಿಯನ್ನು ಹೊರತಂದು ಸಮಾಜಕ್ಕೆ ವೈಚಾರಿಕತೆಯನ್ನು ಬಿತ್ತುತ್ತಿದ್ದಾರೆ” ಎಂದು ಹೇಳಿದರು.
“ಬೇರೆ ಕ್ಯಾಲೆಂಡರ್‌ಗಳು ಬರೀ ಸನಾತನವಾದದಿಂದ ತುಂಬಿರುತ್ತವೆ. ಪಂಚಾಂಗ, ಭವಿಷ್ಯ ಇನ್ನೂ ಮುಂತಾದ ಮೂಢನಂಬಿಕೆಗಳಿಂದ ಕೂಡಿದ್ದು, ಜನರನ್ನು ಮತ್ತಷ್ಟು ಮೌಢ್ಯರನ್ನಾಗಿ ಮಾಡುತ್ತಿವೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಳಪೆ ಕಾಮಗಾರಿ; ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೆಆರ್‌ಎಸ್ ಆಗ್ರಹ
“ಪ್ರತಿಯೊಬ್ಬರ ಮನೆಯಲ್ಲೂ ಇಂತಹ ಸಂವಿಧಾನ ಶಿಲ್ಪಿ ದಿನದರ್ಶಿಯನ್ನು ಪ್ರತಿಯೊಬ್ಬರ ಮನೆಯಲ್ಲೂ ಹಾಕಿಕೊಳ್ಳಬೇಕು. ಲಡಾಯಿ ಪ್ರಕಾಶನದ ಬಸೂ(ಬಸವರಾಜ್ ಸೂಳಿಬಾವಿ) ಸರ್ ಅವರು ಈ ದಿನದರ್ಶಿಕೆ ಎಲ್ಲರ ಮನೆಗೂ ತಲುಪಬೇಕೆಂಬ ಕಾರಣಕ್ಕೆ ರಿಯಾಯಿತಿ ದರದಲ್ಲಿ ಕೊಡುತ್ತಿದ್ದಾರೆ. ಕೂಡಲೇ ಈ ದಿನದರ್ಶಿಕೆಯನ್ನು ತರಸಿಕೊಳ್ಳಿ” ಎಂದು ಮುತ್ತು ಬಿಳಿಯಲಿ ಮನವಿ ಮಾಡಿದರು.
ಈ ಸಮಯದಲ್ಲಿ ದಲಿತ ಕಲಾ ಮಂಡಳಿ ಮುಖಂಡರಾದ ಆನಂದ ಶಿಂಗಾಡಿ, ಶರೀಫ್ ಬಿಳಿಯಲಿ, ಪರಶು ಕಾಳೆ, ಅನಿಲ್ ಕಾಳೆ ಇದ್ದರು.
