ಸ್ಥಗಿತಗೊಂಡಿರುವ ಮಲ್ಲಾಬಾದ ಏತ ನೀರಾವರಿಯ ಕಾಮಗಾರಿ ಟೆಂಡರ್ ಕರೆದು ಕೂಡಲೇ ಕೆಲಸ ಪ್ರಾರಂಭಿಸಲು ಆಗ್ರಹಸಿ ಕಲಬುರಗಿಯ ಜೇವರ್ಗಿಯ ಮಲ್ಲಾಬಾದ ಏತ ನೀರಾವರಿ ರೈತ ಹೋರಾಟ ಸಮಿತಿ ವತಿಯಿಂದ ಜಾನುವಾರು ಬಂಡಿಗಳೊಂದಿಗೆ ರೈತರು ಚಿಗರಳ್ಳಿ ಕ್ರಾಸ್ ರಾಷ್ಟ್ರೀಯ ಮುಖ್ಯ ಹೆದ್ದಾರಿ ತಡೆದು ಪ್ರತಿಭಟಸಿದ್ದು ಪೊಲೀಸರು ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ (ಡಿಸೆಂಬರ್ 16) ತಡರಾತ್ರಿ ಪ್ರತಿಭಟನೆ ಸ್ಥಳಕ್ಕೆ ಜೇವರ್ಗಿ ತಹಶೀಲ್ದಾರ, ದಂಡಾಧಿಕಾರಿಗಳು, ಪೋಲಿಸ್ ಸಿಬ್ಬಂದಿ, ಕಲಬುರಗಿ ಜಿಲ್ಲಾವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಿದ್ದು ರೈತ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಪುನರಾರಂಭಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ
ಆದರೆ ಸಮಸ್ಯೆಗೆ ಸರಿಯಾದ ಪರಿಹಾರ ಒದಗಿಸುವ ಭರವಸೆ ನೀಡದ ಕಾರಣ ರೈತರು ಪಟ್ಟು ಹಿಡಿದು ನಿರಂತರ ಎಂಟು ಗಂಟೆಗಳ ಅಧಿಕ ಕಾಲ ಪ್ರತಿಭಟನೆ ನಡೆಸಿದರು.
ಈ ಬೆನ್ನಲ್ಲೇ ರೈತ ಮುಖಂಡರಾದ ಡಾ.ಮಹೇಶಕುಮಾರ್ ರಾಠೋಡ, ಇಬ್ರಾಹಿಂ ಪಟೇಲ್ ಯಾಳವರ್, ಬಾಬು ಪಾಟೀಲ್, ಶೋಭಾ ಬಾಣಿ ಸೇರಿದಂತೆ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
