ಏಜೆಂಟ್‌ವೊಬ್ಬ ನೀಡಿದ್ದ ದುಬೈನಲ್ಲಿ ಉದ್ಯೋಗ ಕೊಡಿಸುವ ಆಮಿಷಕ್ಕೆ ತುತ್ತಾಗಿ, ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಕ್ಕಿಕೊಂಡಿದ್ದ ಮಹಿಳೆಯೊಬ್ಬರು 22 ವರ್ಷದ ಬಳಿಕ ತನ್ನೂರಿಗೆ ಮರಳಿಸಿದ್ದಾರೆ. ಮಾನವ ಕಳ್ಳಸಾಗಣೆಗೆ ತುತ್ತಾಗಿ ಪಾಕಿಸ್ತಾನದ ಕರಾಚಿಯಲ್ಲಿದ್ದ ಮಹಿಳೆ ಇದೀಗ ಭಾರತಕ್ಕೆ ಮರಳಿದ್ದಾರೆ.
ಭಾರತದ ಮುಂಬೈ ಮೂಲದ ಹಿಮೀದಾ ಬಾನು ಅವರನ್ನು 22 ವರ್ಷಗಳ ಹಿಮದೆ ಮಾನವ ಕಳ್ಳಸಾಗಣೆ ಜಾಲವು ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಕರಾಚಿಗೆ ಕರೆದೊಯ್ಡಿತ್ತು. ಕರಾಚಿಯಲ್ಲಿ 22 ವರ್ಷ ಬದುಕಿನ ಹೋರಾಟ ನಡೆಸಿದ ಮಹಿಳೆ ಇದೀಗ ಲಾಹೋರ್‌ನ ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿ ಬಂದಿದ್ದಾರೆ. ತನ್ನ ಕುಟುಂಬವನ್ನು ಸೇರಿಕೊಂಡಿದ್ದಾರೆ.
ನಾಲ್ಕು ಮಕ್ಕಳ ತಾಯಿಯಾಗಿದ್ದ ಹಮೀದಾ, “ತನ್ನ ಮಕ್ಕಳಿಗೆ ಉತ್ತಮ ಜೀವನವನ್ನು ಒದಗಿಸಬೇಕೆಂದು ವಿದೇಶದಲ್ಲಿ ಉದ್ಯೋಗ ಮಾಡಲು ನಿರ್ಧರಿಸಿದೆ. 2002ರಲ್ಲಿ, ವಿದೇಶಗಳಲ್ಲಿ ಉದ್ಯೋಗ ಕೊಡುವ ಏಜೆಂಜ್ ತನಗೆ ದುಬೈನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ನನ್ನನ್ನು ಕರಾಚಿಗೆ ಕರೆದೊಯ್ದರು. ಅಲ್ಲಿಯೂ ಯಾವುದೇ ಉದ್ಯೋಗವನ್ನು ಕೊಡಿಸಲಿಲ್ಲ. ಕೆಲ ದಿನಗಳ ಕಾಲ ಬೀದಿಗಳಲ್ಲಿ ವಾಸಿಸಿದ್ದೇನೆ. ಬಳಿಕ, ಸಣ್ಣ ಅಂಗಡಿಯೊಂದನ್ನು ತೆರೆದಿದ್ದೆ” ಎಂದು ಹೇಳಿಕೊಂಡಿದ್ದಾರೆ.
ಹಮೀದಾ ಅವರನ್ನು 2022ರಲ್ಲಿ ಯೂಟ್ಯೂಬರ್ ವಲ್ಲಿಯುಲ್ಲಾ ಮರೂಫ್ ಎಂಬವರು ಸಂದರ್ಶನ ಮಾಡಿದ್ದರು. ಆಗ ಹಮೀದಾ ತಾವು ಕಳ್ಳಸಾಗಣೆ ಜಾಲಕ್ಕೆ ಸಿಲುಕಿ ಕರಾಚಿಗೆ ಬಂದಿದ್ದಾಗಿ ಹೇಳಿಕೊಂಡಿದ್ದರು. ಆ ಸಂದರ್ಶನದ ವಿಡಿಯೋ ವೈರಲ್ ಆಗಿತ್ತು. ಬಳಿಕ, ಆಕೆಯ ಹಿನ್ನೆಲೆ ಮತ್ತು ಗುರುತನ್ನು ಪರಿಶೀಲಿಸಿದ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಆಕೆಯ ಕುಟುಂಬಸ್ತರನ್ನು ಸಂಪರ್ಕಿಸಿದ್ದಾರೆ. ಬಳಿಕ, ಅಕೆಯನ್ನು ಭಾರತಕ್ಕೆ ಮರಳಿ ಬರಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.