ಈ ದಿನ ವಿಶೇಷ | ಇತಿಹಾಸವನ್ನು ಅನುಮಾನದಿಂದ ಓದಿ, ಅಪರಿಪೂರ್ಣ ದಾಖಲೆ ಎಂದು ಪರಿಗಣಿಸಬೇಕೆ?

Date:

Advertisements
ನಾವು ಯಾವುದೇ ಇತಿಹಾಸದ ಪುಸ್ತಕ ಓದುವಾಗ ಜಾಗರೂಕರಾಗಿರಬೇಕು. ಇತಿಹಾಸಕಾರರು ನಮಗೆ ಕಟ್ಟಿಕೊಡುವ ಇತಿಹಾಸ ನಾನಾ ಮಿತಿಗಳಿಂದ ಕೂಡಿದ ಅಪರಿಪೂರ್ಣ ದಾಖಲೆ ಅಂತಲೇ ಪರಿಗಣಿಸಬೇಕು. ಎಲ್ಲಾ ಯುಗಗಳಲ್ಲೂ ಶೋಷಣೆ, ಅಸಮಾನತೆ, ಕ್ರೌರ್ಯ, ತಾರತಮ್ಯಗಳಿದ್ದವು, ದೊರೆಗಳು, ಆಡಳಿತಗಾರರು ನಮ್ಮ ನಿಮ್ಮಂತೆ ನ್ಯೂನತೆಗಳಿದ್ದ ನರಮಾನವರಾಗಿದ್ದರು ಎಂಬ ಅರಿವಿರಬೇಕು.

ಒಂದೆರಡು ವರುಷಗಳೇ ಕಳೆದಿರಬಹುದು ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ. ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದ್ದ ಸಂಸ್ಥೆಯೊಂದು ಆ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಉದ್ಘಾಟನೆ ಮಾಡುತ್ತಾ ಮುಖ್ಯ ಅತಿಥಿಯಾಗಿ ಬಂದಿದ್ದ ಮತ್ತೊಂದು ಪ್ರತಿಷ್ಠಿತ ವಿಶ್ವವಿದ್ಯಾಲಯದ ಉಪಕುಲಪತಿಯೊಬ್ಬರು ಹೀಗೆ ಹೇಳಿದರು:

“ಭಾರತದ ಗತಕಾಲದ ಇತಿಹಾಸದ ಕುರಿತು ಈಗಿನ ಯುವ ಪೀಳಿಗೆಗೆ ಯಾವ ಅರಿವೂ ಇಲ್ಲ. ವಿದ್ಯಾರ್ಥಿಗಳಿಗೆ ಭಾರತದ ಭವ್ಯ ಇತಿಹಾಸ, ಪರಂಪರೆಯ ಬಗ್ಗೆ ಜ್ಞಾನ ನೀಡುವುದು ಶಿಕ್ಷಕರ ಆದ್ಯ ಕರ್ತವ್ಯ” ಎಂದು. ಅಷ್ಟಕ್ಕೇ ಸುಮ್ಮನಾಗದ ಅವರು ಮುಂದುವರೆದು ಹೇಳಿದರು, “ಭಾರತದಲ್ಲಿ ಸುಮಾರು ಮೂರು ಸಾವಿರ ವರುಷಗಳ ಹಿಂದೆಯೇ ಐದು ಸಾವಿರ ಗಾತ್ರದ ನೌಕಾಪಡೆಯಿತ್ತು. ಇಡೀ ಭೂಮಂಡಲವನ್ನೇ ಭರತ ಖಂಡವೆಂದು ಕರೆಯಲಾಗುತಿತ್ತು” ಎಂದು. ಎಷ್ಟು ಮಂದಿ ಶಿಕ್ಷಕರಿಗೆ ಈ ಮಾಹಿತಿಯಿದೆ ಹೇಳಿ ಎಂದು ಭಾಷಣದ ಅಂತ್ಯದಲ್ಲಿ ಕುಟುಕಿದರು. ವೇದಿಕೆ ಮೇಲೆ ಕುಳಿತಿದ್ದ ವಿಜ್ಞಾನಿಗಳು, ನೆರೆದಿದ್ದ ಜನ ಸಮೂಹವೆಲ್ಲಾ ಉಪಕುಲಪತಿಗಳ ಮಾತು ಕೇಳಿ ಚಪ್ಪಾಳೆ ತಟ್ಟಿತು. ಮುಂದೆ ಕಾರ್ಯಕ್ರಮ ಎತ್ತ ಸಾಗಿತು ಎಂದು ನಾ ಹೇಳುವ ಅವಶ್ಯಕತೆಯಿಲ್ಲ. ಆ ಕಾರ್ಯಕ್ರಮದಿಂದ ನನಗೆ ಲಭಿಸಿದ್ದು- ಒಂದು ನೋಟ್ ಪ್ಯಾಡ್, ಒಂದು ಪೆನ್, ರುಚಿಕರ ಭೋಜನ ಮತ್ತು ಸರ್ಟಿಫಿಕೇಟ್.

ಉಪಕುಲಪತಿಗಳು ವಿಜ್ಞಾನ ಹಿನ್ನಲೆಯಿಂದ ಬಂದವರು. ಅವರೇಕೆ ಇತಿಹಾಸವನ್ನು ಉಲ್ಲೇಖಿಸುತ್ತಿದ್ದಾರೆ. ಅವರ ಐದು ಸಾವಿರ ಗಾತ್ರದ ನೌಕಾ ಪಡೆಯ CLAIMಗೆ ಪುರಾವೆಗಳೆಲ್ಲಿವೆ? ಗತಕಾಲದ ಇತಿಹಾಸ ರಚನೆ ಎಷ್ಟು ತ್ರಾಸದಾಯಕವಾದುದು? ಇತಿಹಾಸವನ್ನು ದಾಖಲಿಸುವ ವಿಧಾನಗಳು ಎಷ್ಟು ಕಠಿಣ? ಸಿಕ್ಕ ಪುರಾವೆಗಳು ನಮಗೆ ಸಂಪೂರ್ಣ ಮಾಹಿತಿ ನೀಡುತ್ತವೆಯೇ? ಇರುವ ಪುರಾವೆಗಳ ಆಧಾರದ ಮೇಲೆ ನಾವು ಕಟ್ಟಿಕೊಂಡ ಇತಿಹಾಸ ಅಪರಿಪೂರ್ಣ ಮತ್ತು ದಿಕ್ಕು ತಪ್ಪಿಸುವ ಇತಿಹಾಸವಲ್ಲವೇ? ಸರ್ಕಾರಗಳು ಬದಲಾದಂತೆ ಇತಿಹಾಸ ವಿಮರ್ಶೆಗೇಕೆ ಒಳಪಡುತ್ತದೆ? ಇತಿಹಾಸವನ್ನು ತಿದ್ದಿ ಮರು ಬರೆಯಲಾಗುವುದೇಕೆ? ಎಂಬೆಲ್ಲಾ ಪ್ರಶ್ನೆಗಳು ನನ್ನನ್ನು ಕಾಡಿದವು.

Advertisements

ಇದನ್ನು ಓದಿದ್ದೀರಾ?: ವಾಹ್ ಉಸ್ತಾದ್ | ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ವಿಸ್ತರಿಸಿದ ಝಾಕಿರ್ ಹುಸೇನ್

ನಾವು ನೀವು ಇಸವಿ 3020ರಲ್ಲಿ ಬದುಕಿರುವ ಇತಿಹಾಸಕಾರನೆಂದು ಒಮ್ಮೆ ಕಲ್ಪಿಸಿಕೊಳ್ಳೋಣ. 2020ರ ಭಾರತದ ಕುರಿತು ನೀವು ಇತಿಹಾಸ ಪುಸ್ತಕ ಬರೆಯಲು ಮುಂದಾಗಿದ್ದೀರಿ ಎಂದು ಊಹಿಸಿಕೊಳ್ಳೋಣ. ಭಾರತದ ಬಗ್ಗೆ ನಿಮಗೆ ಸಿಕ್ಕಿರುವ ಪುರಾವೆ, ಕುರುಹು ಅಥವಾ ದಾಖಲೆಗಳು ಇಂತಿವೆ ಎಂದುಕೊಳ್ಳೋಣ…

  1. ಕೇಂದ್ರ ಸರ್ಕಾರ ಉತ್ತರ ಪ್ರದೇಶದ ಪತ್ರಿಕೆಗಳಲ್ಲಿ ದಿನನಿತ್ಯ ಪ್ರಕಟಿಸುತ್ತಿದ್ದ ಜಾಹೀರಾತುಗಳು.
  2. ದೆಹಲಿಯ ಕಲಾ ಗ್ಯಾಲರಿಗಳ ಮತ್ತು ನೂತನ ಸಂಸತ್ತಿನ instagram ಪೋಸ್ಟುಗಳು.
  3. ಅಂಬಾನಿ ಮಗನ ಅದ್ದೂರಿ ಮದುವೆಯ ವಿಡಿಯೋಗಳು.

3020ರಲ್ಲಿ ನಿಮಗೆ ಸಿಕ್ಕ ಈ ಲಿಮಿಟೆಡ್ ಪುರಾವೆಗಳ ಮೂಲಕ ಹೇಗೆ 2020ರ ಇತಿಹಾಸ ಕಟ್ಟಿಕೊಡುವಿರಿ?

ಜಾಹೀರಾತುಗಳನ್ನು ಸಂಗ್ರಹಿಸಿದ ನೀವು ಹೀಗೆ ಇತಿಹಾಸ ಬರೆಯಬಹುದು: “2020ರಲ್ಲಿ ಭಾರತ ದೇಶವನ್ನಾಳಿದ ಸರ್ಕಾರ ಅತ್ಯಂತ ಸಮರ್ಥ ಸರ್ಕಾರ. ಅದರ ಕ್ಷಮತೆಗೆ ಸಾಟಿಯಿಲ್ಲ. ಆ ವರುಷ ಬಂದ ಕೊರೋನ ಮಹಾಮಾರಿಯನ್ನು ನಿಭಾಯಿಸಿ, ದೇಶವನ್ನು ಆರ್ಥಿಕವಾಗಿ ಸದೃಢವಾಗಿಟ್ಟು, ಸೌಹಾರ್ದಯುತ ನಾಡು ಕಟ್ಟಿದ ಕಳಂಕರಹಿತ ಆಡಳಿತ ನೀಡಿದ ನಾಯಕತ್ವ ಅದು” ಎಂದು ನೀವು ಬಣ್ಣಿಸಬಹುದು.

ಬರಿಯ ದೆಹಲಿಯ ಕಲಾ ಗ್ಯಾಲರಿಯ instagram ರೀಲ್ಸ್ ನೋಡಿದ ನೀವು ಹೀಗೆ ಉಲ್ಲೇಖಿಸಬಹುದು: “2020ರ ಭಾರತ ಕಲೆಯ ತವರೂರಾಗಿತ್ತು. ಆಗಿನ ಕಲಾವಿದರಿಗೆ, ಶಿಲ್ಪಿಗಳಿಗೆ ನೀಡುತ್ತಿದ್ದ ಉತ್ತೇಜನ, ಪ್ರಶಂಸೆ, ಧನಕ್ಕೆ ಭಾರತದ ಇತಿಹಾಸದಲ್ಲೇ ಮತ್ತೊಂದು ಯುಗ ಸಾಟಿಯಿರಲಾರದು” ಎಂದು ನೀವು ಗೀಚಬಹುದು.

history1

ತಿಂಗಳುಗಟ್ಟಲೇ ನಡೆದ ಅಂಬಾನಿ ಪುತ್ರನ ಮದುವೆ ಸಡಗರದ ವಿಡಿಯೋಗಳು ಮಾತ್ರ ನಿಮಗೆ ದೊರಕಿವೆ ಎಂದುಕೊಳ್ಳಿ. ಆಗ ನೀವು 2020 ದಶಕದ ಇತಿಹಾಸವನ್ನು ಹೀಗೆ ದಾಖಲಿಸಬಹುದು: “ಆಗಿನ ಭಾರತದಲ್ಲಿ ಎಲ್ಲವೂ ಸುಭಿಕ್ಷವಾಗಿತ್ತು. ಜನರು ಕೆಜಿಗಟ್ಟಲೆ ಚಿನ್ನ, ವಜ್ರ, ವೈಢೂರ್ಯ ತೊಟ್ಟು ನಕ್ಕು ನಲಿಯುತ್ತಿದ್ದರು. ಎಲ್ಲೆಲ್ಲೂ ಹೊಳಪಿನ ಬಟ್ಟೆಗಳದ್ದೇ ಜಾತ್ರೆ. ನೂರಾರು ಬಗೆಯ ತಿಂಡಿ ತಿನಿಸುಗಳಿದ್ದವು. ಮದುವೆಯಲ್ಲಿ ಆನೆಗಳಿದ್ದವು ಮತ್ತು ಕೋಟಿ ಕೋಟಿ ಬೆಲೆಬಾಳುವ ಕಾರುಗಳಿದ್ದವು. ಇಡೀ ನಗರ ಜಗಮಗಿಸುತ್ತಿತ್ತು. ಬಡತನವೆಂಬುದಿರಲಿಲ್ಲ. ಈ ಸಂಭ್ರಮ ನೋಡಲು ದೇಶ ವಿದೇಶಗಳಿಂದ ಜನ ಬಂದಿದ್ದರು. ಪ್ರಖ್ಯಾತ ವಿದೇಶಿ ಗಾಯಕ ಜಸ್ಟಿನ್ ಬೀಬರ್ ಕೂಡ ಇಲ್ಲಿನ ಸಡಗರದಲ್ಲಿ ಭಾಗವಹಿಸಿದ್ದ ಎಂದರೆ 2020 ಭಾರತದ ಗಮ್ಮತು ಹೇಗಿತ್ತೆಂದು ಒಮ್ಮೆ ಯೋಚಿಸಿ” ಎಂದು ಬರೆದು ಬಿಡುತ್ತೀರಿ.

2020ರ ಭಾರತ ಇತಿಹಾಸ ಇಷ್ಟೆಯೇನು? ಕೊರೋನ ಮಹಾಮಾರಿಗೆ ಸಾವಿರಾರು ಜನ ಬಲಿಯಾಗಿದ್ದು, ಕಾಳಸಂತೆಯಲ್ಲಿ ಉಳ್ಳವರಿಗೆ ಬಿಕರಿಯಾದ ಆಮ್ಲಜನಕ ಸಿಲಿಂಡರ್ ಗಳು, ಔಷಧಿಗಳು. ಆಮ್ಲಜನಕವಿಲ್ಲದೆ ಉಸಿರುಬಿಟ್ಟ ಸಾಮಾನ್ಯರ, ಹೆಣಗಳನ್ನು ಸುಡಲಾಗದೆ ಪರದಾಡಿದವರ, ಸಾವಿರಾರು ಮೈಲಿ ನಡೆದು ಬಸವಳಿದ ಕಾರ್ಮಿಕರು, ಇಷ್ಟೆಲ್ಲಾ ಆಗುವಾಗ ಮಹಡಿಯ ಮೇಲೆ ಜಾಗಟೆ, ತಟ್ಟೆ ಬಡಿಯುತ್ತಿದ್ದ ಸಿರಿವಂತರು, ರೈಲು ಹಳಿಗಳ ಮೇಲೆ ಸತ್ತ ಬಡವರ ರೊಟ್ಟಿಯ ಚೂರುಗಳು, ಕೊರೋನ ಮಹಾಮಾರಿಯನ್ನು ಓಡಿಸಲು ದೇಶದ ಸ್ವಾಮೀಜಿಗಳು ನೀಡಿದ ಅವೈಜ್ಞಾನಿಕ ಪರಿಹಾರಗಳು, ಆ ಪರಿಹಾರಗಳನ್ನು ನಂಬಿ ಪ್ರಾಣ ಕಳೆದುಕೊಂಡ ಜನರು, ಆ ವಿಷಮ ಕಾಲದಲ್ಲೂ ಕೋಮು ಸೌಹಾರ್ದತೆಯನ್ನು ಕದಡಲು ಹವಣಿಸುತ್ತಿದ್ದ ಮಾಧ್ಯಮಗಳು, The total breakdown of governance and rampant madness… ಇವೆಲ್ಲಾ ನೀವು 3020ರಲ್ಲಿ ಬರೆಯುವ ಇತಿಹಾಸದಲ್ಲಿ ಎಲ್ಲಿ ದಾಖಲಾಗುತ್ತದೆ? ಇತಿಹಾಸವೆಂದರೆ ಹಾಗೆಯೇ. ಅದು ಹುಟ್ಟು ಕುರುಡರು ಆನೆಯ ಮೈ ಸವರಿ ಆನೆ ಹೀಗಿದ್ದಿರಬಹುದು ಎಂದು ಅಂದುಕೊಳ್ಳುವ ಊಹೆಯ ಅಸ್ಪಷ್ಟ ಆಟ.

ಸಿಕ್ಕ ಚೂರು ಪಾರಿನ ಪುರಾವೆಗಳಿಂದ ಹೀಗೆ ಕಳೆದ ದಶಕದಲ್ಲಿ ಕಟ್ಟಿಕೊಡಲಾಗಿರುವ ಸೂಪರ್ ಕೂಲ್ ಇತಿಹಾಸ, ಕಳೆದುಹೋದ ಸುವರ್ಣ ಯುಗಕ್ಕಾಗಿ ಜನರು ಹಾತೊರೆಯುವಂತೆ ಮಾಡಿದೆ ಎಂದು ಇರದಿದ್ದ ಸಮರ್ಥ ನಾಯಕತ್ವದ ಕನಸು ಕಾಣುತ್ತೇವೆ. ಗಿಲೀಟಿನ ಮಾತುಗಳಿಗೆ, ಟೊಳ್ಳು ಆಶ್ವಾಸನೆಗೆ ಸುಲಭವಾಗಿ ಮನ ಸೋಲುತ್ತೇವೆ. ದೈವೀ ಪುರುಷನ ಅವತಾರದ ಆಗಮನವಾಗಿದೆ ಎಂದುಕೊಳ್ಳುತ್ತೇವೆ. ಪರರನ್ನು ಅನುಮಾನದಿಂದ ನೋಡುತ್ತೇವೆ, ದ್ವೇಷಿಸುತ್ತೇವೆ. ಸಾಮೂಹಿಕ ಭ್ರಮೆ ಎಲ್ಲರನ್ನೂ ಆವರಿಸಿಬಿಡುತ್ತದೆ!

ಇದನ್ನು ಓದಿದ್ದೀರಾ?: ನೆನಪು | ಅರಸು ಅವರದು ಇನ್‌ಕ್ಲೂಸಿವ್ ಪಾಲಿಟಿಕ್ಸ್ ಎಂದ ಪ್ರೊ. ವಿ.ಕೆ. ನಟರಾಜ್

ನಾವು ಯಾವುದೇ ಇತಿಹಾಸದ ಪುಸ್ತಕ ಓದುವಾಗ ಜಾಗರೂಕರಾಗಿರಬೇಕು. ಇತಿಹಾಸಕಾರರು ನಮಗೆ ಕಟ್ಟಿಕೊಡುವ ಇತಿಹಾಸ ನಾನಾ ಮಿತಿಗಳಿಂದ ಕೂಡಿದ ಅಪರಿಪೂರ್ಣ ದಾಖಲೆ ಅಂತಲೇ ಪರಿಗಣಿಸಬೇಕು. ಎಲ್ಲಾ ಯುಗಗಳಲ್ಲೂ ಶೋಷಣೆ, ಅಸಮಾನತೆ, ಕ್ರೌರ್ಯ, ತಾರತಮ್ಯಗಳಿದ್ದವು, ದೊರೆಗಳು, ಆಡಳಿತಗಾರರು ನಮ್ಮ ನಿಮ್ಮಂತೆ ನ್ಯೂನತೆಗಳಿದ್ದ ನರಮಾನವರಾಗಿದ್ದರು ಎಂಬ ಅರಿವಿರಬೇಕು. ತನನ್ನು ತಾನು ದಿಗ್ಗಜ, ಅಸಾಮಾನ್ಯ ಶೂರ, ಶ್ರೇಷ್ಠ ಆಡಳಿತಗಾರ ಎಂದು ಬಿಂಬಿಸಿಕೊಳ್ಳುವ ಮಾನವ ಸಹಜ ತುರಿಕೆ ಎಲ್ಲಾ ಕಾಲದ ಎಲ್ಲಾ ರಾಜರಲ್ಲಿತ್ತು ಎಂಬ ಜ್ಞಾನ ನಮಗಿರಬೇಕು. ಇತಿಹಾಸವನ್ನು ಓದಬೇಕಾಗಿರುವ ಬಗೆಯೇ ಇದು. ಇತಿಹಾಸದ ಸಂಕೀರ್ಣತೆಯೇ ಹಾಗಿದೆ…

ಈ ಸಂಕೀರ್ಣತೆಯ ಸೊಗಡು ನಿಮ್ಮನ್ನು ತಟ್ಟದಿದ್ದರೆ ಸಾವಿರಾರು ಪುಟಗಳ ಅತಿಶಯೋಕ್ತಿಗೆ ಸುಲಭದ ತುತ್ತಾಗುವಿರಿ. (ಪ್ರವಾಹದಂತೆ ಕನ್ನಡ ಭಾಷೆಯಲ್ಲಿ ಹರಿದು ಬರುತ್ತಿರುವ ರಾಜ ರಾಣಿಯರ ಇತಿಹಾಸದ ಪುಸ್ತಕಗಳನ್ನು ಒಮ್ಮೆ ಗಮನಿಸಿದಾಗ ದಿಗಿಲಾಗುತ್ತದೆ.) ದಿನನಿತ್ಯ ಅಂಗಡಿಗೆ ಲಗ್ಗೆಯಿಡುವ ತರಾವರಿ ಇತಿಹಾಸಗಳನ್ನು, ರಾಜರ ಜೀವನ ಚರಿತ್ರೆಗಳನ್ನು ಅನುಮಾನದಿಂದಲೇ ಓದಿ… ಪ್ರಶ್ನಿಸಿ… ನೀವು ಕೂಡ “ಸುವರ್ಣ ಕಾಲ ಒಂದಿತ್ತು… ಎಂದು ಕೊರಗುವ ಜನರಲ್ಲಿ ಒಂದಾಗಬೇಡಿ. In fact there was nothing called Golden Era”

ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X