ಈ ವರ್ಷ ಚಂಡಮಾರುತಗಳ ಅಬ್ಬರ ಹೆಚ್ಚಾಗಿದೆ. ಒಂದರ ಮೇಲೊಂದರಂತೆ ಚಂಡಮಾರುತಗಳ ಪರಿಚಲನೆ ಆರಂಭವಾಗುತ್ತಿದೆ. ಚಂಡಮಾರುತಗಳು ಅಪ್ಪಳಿಸುತ್ತಿವೆ. ಪೂರ್ವ ಆಫ್ರಿಕಾದ ಮೊಜಾಂಬಿಕಾದಲ್ಲಿ ಚಿಡೊ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಿಂದೂ ಮಹಾಸಾಗರದಲ್ಲಿ ಉಂಟಾದ ಚಂಡಮಾರುತವು ಮೊಜಾಂಬಿಕಾ ಮೇಲೆ ಅಪ್ಪಳಿಸಿದೆ. ಹೀಗಾಗಿ, ಕರಾವಳಿ ಮತ್ತು ಒಳನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ವೇಗವಾಗಿ ಗಾಳಿಯೂ ಬೀಸುತ್ತಿದೆ. ಪರಿಣಾಮ, ಪ್ರವಾಹ ಉಂಟಾಗಿದ್ದು, ಭೂಕುಸಿತಗಳು ಸಂಭವಿಸಿವೆ ಎಂದು ಮೊಜಾಂಬಿಕಾ ಸರ್ಕಾರ ತಿಳಿಸಿದೆ.
ಮೊಜಾಂಬಿಕಾದ ನೈಸರ್ಗಿಕ ವಿಕೋಪ ಪರಿಹಾರ ಪಡೆ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಚಂಡಮಾರುತದಿಂದಾಗಿ ಲಕ್ಷಾಂತರ ಮನೆಗಳ ಛಾವಣಿಗಳು ಕುಸಿದಿವೆ. ಹಲವಾರು ಮನೆಗಳು ನಾಶವಾಗಿವೆ. ಸುಮಾರು 1.50 ಲಕ್ಷ ಜನರು ವಸತಿ ಕಳೆದುಕೊಂಡಿದ್ದಾರೆ. ನಿರಾಶ್ರಿತರಾಗಿದ್ದಾರೆ. ಆಹಾರ ಸಾಮಗ್ರಿಗಳನ್ನೂ ಕಳೆದುಕೊಂಡಿದ್ದಾರೆ.
ಚಂಡಮಾರುತದ ಅಬ್ಬರ ಹೆಚ್ಚಾಗಿರುವುದರಿಂದ ಸುಮಾರು 2 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಈ ವರೆಗೆ 35ಕ್ಕೂ ಹೆಚ್ಚು ಮೃತದೇಹಗಳು ಮತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ರಕ್ಷಣಾ ಪಡೆ ತಿಳಿಸಿದೆ.