ತುಮಕೂರಿನ ಮೈದಾಳ ರಸ್ತೆಯಲ್ಲಿರುವ ಸ್ನಾತಕೋತ್ತರ ಬಿಸಿಎಂ ಮಹಿಳಾ ಹಾಸ್ಟಲ್ ಗೆ ತುಮಕೂರು ಲೋಕಾಯುಕ್ತರ ತಂಡ ಭೇಟಿನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ಕಳೆದ ಗುರುವಾರ ಸಂಜೆ 5 ರಿಂದ ರಾತ್ರಿ 8 ವರೆಗೂ ಪ್ರತಿಭಟನೆ ನಡೆಸಿ ಕಮಿಷನರ್, ಡಿಸಿ ಸ್ಥಳಕ್ಕೆ ಬರುವಂತೆ ಹಾಸ್ಟೆಲ್ ವಿದ್ಯಾರ್ಥಿನಿಯರು ಹಿಡಿದಿದ್ದರು.
ಈಗ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಹಾಸ್ಟೆಲ್ ವಾರ್ಡನ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿಒ ವಿರುದ್ಧ ವಿದ್ಯಾರ್ಥಿಗಳು ದೂರುಗಳನ್ನು ಹೇಳಿದ್ದಾರೆ ಎಂದು ಗೋತ್ತಾಗಿದೆ.
ಹಾಸ್ಟೆಲ್ ನಲ್ಲಿ ಆಹಾರ ಸೇರಿದಂತೆ ಸರಿಯಾದ ಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಡಿ. 12 ರ ಸಂಜೆ ಮಳೆಯಲ್ಲಿಯೇ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿನೀಡಿದ್ದಾರೆ. ತುಮಕೂರು ಲೋಕಾಯುಕ್ತ ಡಿವೈಸ್ ಪಿ ಗಳಾದ ರಾಮಕೃಷ್ಣ ಹಾಗೂ ಉಮಾಶಂಕರ್ ಭೇಟಿ ನೀಡಿದ್ದಾರೆ.
ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಿಗೆ ವಿದ್ಯಾರ್ಥಿಗಳು ಪತ್ರ ಮೂಲಕ ದೂರು ನೀಡಿದ್ದರು. ಪ್ರತಿಭಟನೆ ವೇಳೆ ಹಾಸ್ಟಲ್ ನಲ್ಲಿ ಬೆಡ್ ಶೀಟ್ ಕೊಟ್ಟಿದೆ ಎಂದು ಸಹಿ ಪಡೆದು, ಕೊಟ್ಟಿರಲಿಲ್ಲ ಹಾಗೂ ಹಾಸ್ಟಲ್ ಗೆ ಬರುವ ಪಡಿತರವನ್ನು ಹಾಸ್ಟಲ್ ಗೆ ವಿತರಿಸದೆ ಫೋಟೋ ತೆಗೆಸಿಕೊಂಡು ಹಾಗೇ ತೆಗೆದುಕೊಂಡು ಹೋಗುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.