ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರವಿಚಂದ್ರನ್ ಈ ಘೋಷಣೆಯನ್ನು ಮಾಡಿದ್ದಾರೆ.
ಈ ಮೂಲಕ ಸುಮಾರು 14 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹಾಡಿದ್ದಾರೆ. ಆದರೆ ತಾನು ಐಪಿಎಲ್‌ನಲ್ಲಿ ಮುಂದುವರೆಯುವುದಾಗಿ ಆರ್ ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಶ್ವಕಪ್ ಏಕದಿನ ತಂಡಕ್ಕೆ ಸ್ಥಾನ ಪಡೆದ ಸ್ಪಿನ್ನರ್ ಆರ್ ಅಶ್ವಿನ್: ಬದಲಾವಣೆಯ 15ರ ಬಳಗದಲ್ಲಿ ಆಯ್ಕೆ
ಆರ್ ಅಶ್ವಿನ್ ಈವರೆಗೆ ಸುಮಾರು 106 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಒಟ್ಟು 200 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ತನ್ನ ಕ್ರಿಕೆಟ್ ಜೀವನದಲ್ಲೇ ಒಟ್ಟು 27246 ಬಾರಿ ದಾಂಡಿಗರೆಡೆ ಚೆಂಡು ಎಸೆದಿರುವ ಅಶ್ವಿನ್ ಒಟ್ಟು 537 ವಿಕೆಟ್ ಕಬಳಿಸಿದ್ದಾರೆ.
ಆರ್ ಅಶ್ವಿನ್ ಈವರೆಗೆ ಸುಮಾರು 106 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಒಟ್ಟು 200 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ತನ್ನ ಕ್ರಿಕೆಟ್ ಜೀವನದಲ್ಲೇ ಒಟ್ಟು 27246 ಬಾರಿ ದಾಂಡಿಗರೆಡೆ ಚೆಂಡು ಎಸೆದಿರುವ ಅಶ್ವಿನ್ ಒಟ್ಟು 537 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತದ ಪರವಾಗಿ ಆಡಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
Ravichandran Ashwin announces his retirement from all forms of international cricket.
— 7Cricket (@7Cricket) December 18, 2024
Congratulations on a brilliant career 👏 pic.twitter.com/UHWAFmMwC0
ಆರು ಬಾರಿ ಶತಕ ಬಾರಿಸಿರುವ, 14 ಬಾರಿ ಅರ್ಧ ಶತಕ ದಾಖಲಿಸಿರುವ ಅಶ್ವಿನ್ ಈವರೆಗೆ 3503 ಟೆಸ್ಟ್ ರನ್‌ಗಳನ್ನು ಪೇರಿಸಿದ್ದಾರೆ. 3000ಕ್ಕೂ ಅಧಿಕ ರನ್‌ಗಳನ್ನು ಪಡೆದಿರುವ ಮತ್ತು 300ಕ್ಕೂ ಹೆಚ್ಚು ಟಿಕೆಟ್ ಕಬಳಿಸಿರುವ 11 ಆಲ್‌ರೌಂಡರ್‌ಗಳಲ್ಲಿ ಇವರೂ ಒಬ್ಬರಾಗಿದ್ದಾರೆ.
𝙏𝙝𝙖𝙣𝙠 𝙔𝙤𝙪 𝘼𝙨𝙝𝙬𝙞𝙣 🫡
— BCCI (@BCCI) December 18, 2024
A name synonymous with mastery, wizardry, brilliance, and innovation 👏👏
The ace spinner and #TeamIndia's invaluable all-rounder announces his retirement from international cricket.
Congratulations on a legendary career, @ashwinravi99 ❤️ pic.twitter.com/swSwcP3QXA
