2020ರ ದೆಹಲಿ ಗಲಭೆಗೆ ಪಿತೂರಿ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಉಮರ್ ಖಾಲಿದ್ ಅವರಿಗೆ ದೆಹಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಕುಟುಂಬದ ವಿವಾಹ ಸಮಾರಂಭಕ್ಕೆ ಹಾಜರಾಗಲು 7 ದಿನಗಳ ಮಧ್ಯಂತರ ಜಾಮೀನು ನೀಡಲಾಗಿದೆ.
ಇದನ್ನು ಓದಿದ್ದೀರಾ? ದೆಹಲಿ ಗಲಭೆ ಪ್ರಕರಣ | ನನ್ನನ್ನು ಆರೋಪಿ ಎನ್ನಲು ಆಧಾರ ಏನಿದೆ: ಉಮರ್ ಖಾಲಿದ್ ಪ್ರಶ್ನೆ
2020ರ ಫೆಬ್ರವರಿಯಲ್ಲಿ ನಡೆದ ನಡೆದ ದೆಹಲಿ ಗಲಭೆ ಸಂಬಂಧ ಪಿತೂರಿ ಮಾಡಿದ ಆರೋಪದಲ್ಲಿ 2020ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಅದಾದ ಬಳಿಕ ಉಮರ್ ಸುಪ್ರೀಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿ ಬಳಿಕ ಹಿಂಪಡೆದಿದ್ದರು.
2020ರ ಫೆಬ್ರವರಿಯಲ್ಲಿ ನಡೆದ ನಡೆದ ದೆಹಲಿ ಗಲಭೆ ಸಂಬಂಧ ಪಿತೂರಿ ಮಾಡಿದ ಆರೋಪದಲ್ಲಿ 2020ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಅದಾದ ಬಳಿಕ ಉಮರ್ ಸುಪ್ರೀಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿ ಬಳಿಕ ಹಿಂಪಡೆದಿದ್ದರು.
ಅದಾದ ಬಳಿಕ ಮತ್ತೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಈ ವರ್ಷದ ಆರಂಭದಲ್ಲಿ ಕೋರ್ಟ್ ವಜಾಗೊಳಿಸಿದೆ. ಸದ್ಯ ಈ ಅರ್ಜಿ ತಿರಸ್ಕಾರ ಪ್ರಶ್ನಿಸಿ ಉಮರ್ ಖಾಲಿದ್ ಸಲ್ಲಿಸಿರುವ ಮೇಲ್ಮನವಿ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿಯಿದೆ.
ಏನಿದು ದೆಹಲಿ ಗಲಭೆ?
2020ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಕೆಲ ಕಿಡಿಗೇಡಿಗಳಿಂದ ಹಿಂಚಾಸಾರ ಭುಗಿಲೆದ್ದಿತ್ತು. ಆ ಗಲಭೆಗೆ ಸಂಚು ರೂಪಿಸಿದ ಆರೋಪದ ಮೇಲೆ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು 2020ರ ಸೆ.13ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಮಾತ್ರವಲ್ಲದೆ, ಅವರ ವಿರುದ್ಧ ಧಾರ್ಮಿಕ ಭಾವನೆ ಕದಡಿದ್ದಾರೆ ಎಂಬ ಆರೋಪ ಹೊರಿಸಿ, ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿ ಪ್ರಕರಣವನ್ನೂ ದಾಖಲಿಸಿದ್ದರು.
ಉಮರ್ ಖಾಲಿದ್ ಬಂಧನವಾಗಿ ನಾಲ್ಕೂವರೆ ವರ್ಷಗಳಾಗಿವೆ. ಖಾಲಿದ್ ಜೊತೆಗೆ ಬಂಧನಕ್ಕೊಳಗಾಗಿದ್ದ 18 ಮಂದಿ ಆರೋಪಿಗಳಲ್ಲಿ ಇನ್ನೂ 12 ಮಂದಿ ಜೈಲಿನಲ್ಲಿಯೇ ಇದ್ದಾರೆ. ದೆಹಲಿ ಪೊಲೀಸರು ಪರಿಪೂರ್ಣ ಜಾರ್ಜ್‌ಶೀಟ್ ಸಲ್ಲಿಸದೆ, ವಿಚಾರಣೆಯೂ ಇಲ್ಲದೆ ಖಾಲಿದ್ ದೆಹಲಿಯ ತಿಹಾರ್ ಜೈಲಿನಲ್ಲಿ ಸುದೀರ್ಘ ಜೈಲುವಾಸ ಅನುಭವಿಸಿದ್ದಾರೆ.
2021ರ ಜುಲೈ ತಿಂಗಳಿನಲ್ಲಿ ಖಾಲಿದ್ ಮೊದಲ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಅದೇ ವರ್ಷದ ಆಗಸ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಅದಾದ ಎಂಟು ತಿಂಗಳ ನಂತರ, ಅಂದರೆ, 2022ರ ಮಾರ್ಚ್ 24ರವರೆಗೂ ವಿಚಾರಣೆ ಮುಂದುವರೆದು, ಅಂದು ದೆಹಲಿ ಸೆಷನ್ಸ್ ನ್ಯಾಯಾಲಯವು ಜಾಮೀನು ನಿರಾಕರಿಸಿತು. ಅಲ್ಲದೆ, ಖಾಲಿದ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ 14 ಬಾರಿ ಮರು ನಿಗದಿಪಡಿಸಲಾಗಿದೆ. ಸೆಷನ್ಸ್ ನ್ಯಾಯಾಲಯ ಎರಡು ಬಾರಿ ಮತ್ತು ದೆಹಲಿ ಹೈಕೋರ್ಟ್ ಒಮ್ಮೆ ಜಾಮೀನು ತಿರಸ್ಕರಿಸಿದೆ. ಹೀಗಾಗಿ, ಖಾಲಿದ್ ಕಂಬಿಗಳ ಹಿಂದೆ ದಿನ ದೂಡುತ್ತಿದ್ದರು.
ಹಲವು ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಧಾರದಲ್ಲಿ ಜಾಮೀನು ನೀಡುವ ನ್ಯಾಯಾಲಯಗಳು, ಖಾಲಿದ್ ವಿಚಾರದಲ್ಲಿ ಮಾತ್ರ ಮೌನಕ್ಕೆ ಜಾರಿವೆ. ಜಾಮೀನು ಅರ್ಜಿ, ಪ್ರಕರಣದ ವಿಚಾರಣೆಯನ್ನು ಪದೇ-ಪದೇ ಮುಂದೂಡುತ್ತಲೇ ಬಂದಿದ್ದವು.
ಜೈಲು ವಾಸದಿಂದ ಬೇಸತ್ತಿದ್ದ ಖಾಲಿದ್, ಡಿಸೆಂಬರ್ 7ರಂದು ನಡೆದ ವಿಚಾರಣೆ ವೇಳೆ, ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಪಿತೂರಿ ಆರೋಪದ ಮೇಲೆ ನನ್ನ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲಾಗಿದೆ. ಆದರೆ, ಪೊಲೀಸರು ಯಾವ ಆಧಾರದಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡಿದ್ದಾರೆ. ಯಾವುದೇ ನೇರವಾದ ಸಾಕ್ಷ್ಯಗಳಿಲ್ಲ ಎಂದು ವಾದಿಸಿದ್ದರು.
ವಾದ ಆಲಿಸಿದ್ದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತ್ತು. ಇದೀಗ, 7 ದಿನಗಳ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
