ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಕರಾವಳಿಯಲ್ಲಿ ನೌಕಾಪಡೆಯ ಸ್ಪೀಡ್ ಬೋಟ್ ಪ್ರಯಾಣಿಕರ ದೋಣಿಗೆ ಡಿಕ್ಕಿಯೊಡೆದ ಪರಿಣಾಮ 13 ಮಂದಿ ಮೃತಪಟ್ಟಿದ್ದು, 99 ಮಂದಿಯನ್ನು ಸಮುದ್ರದಿಂದ ರಕ್ಷಿಸಲಾಗಿದೆ.
ಪ್ರಯಾಣಿಕರ ದೋಣಿಯು 110 ಮಂದಿಯನ್ನು ಕರೆದೊಯ್ಯುತ್ತಿತ್ತು. ನೀಲ್‌ಕಮಲ್ ಎಂಬ ಹೆಸರಿನ ಬೋಟ್ ಮುಂಬೈನ ಪ್ರವಾಸಿ ತಾಣವಾದ ಎಲಿಫೆಂಟಾ ದ್ವೀಪದಿಂದ ಆಗಮಿಸುತ್ತಿದ್ದಾಗ ಗೇಟ್ ವೇ ಆಫ್ ಇಂಡಿಯಾ ಬಳಿಯ ಕರಾವಳಿಯಲ್ಲಿ ನೌಕಾಪಡೆಯ ಬೋಟ್ ಡಿಕ್ಕಿಯೊಡೆದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವಾಲಯ ಪ್ರವೇಶಕ್ಕೆ ಅಂಗಲಾಚುವ ದಲಿತರಿಗೆ ಬಾಬಾಸಾಹೇಬರು ಹೇಳಿದ್ದ ಪಾಠಗಳೇನು?
ನೌಕಾಪಡೆಯ ಮೂಲಗಳ ಪ್ರಕಾರ, ಸ್ಪೀಡ್ ಬೋಟ್ ಎಂಜಿನ್ ಸಮಸ್ಯೆಯಿಂದ ಇದು ಅಪಘಾತಕ್ಕೆ ಕಾರಣವಾಗಿದೆ. ರಕ್ಷಣಾ ಕವಚಗಳನ್ನು ಧರಿಸಿದ ಪ್ರಯಾಣಿಕರನ್ನು ರಕ್ಷಿಸಿ ಮತ್ತೊಂದು ದೋಣಿಗೆ ಕರೆದೊಯ್ಯುತ್ತಿರುವುದನ್ನು ದೃಶ್ಯಗಳಲ್ಲಿ ಕಂಡುಬರುತ್ತಿದೆ. ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇದರ ಭಾಗವಾಗಿ ನೌಕಾಪಡೆಯ 11 ಬೋಟ್‌ಗಳು, ಪೊಲೀಸರ ಮೂರು ಬೋಟ್‌ಗಳು ಮತ್ತು ನೌಕಾಪಡೆಯ ಬೋಟ್‌ಅನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
#Indian Navy craft lost control and collided with passenger ferry Neel Kamal near Karanja, Mumbai.
— Waseem Zaidi (@ZaidiWaseem7) December 18, 2024
🔹 99 rescued
🔹 13 fatalities, including 1 Navy personnel
🔹 Rescue ops: 4 Navy helicopters, 11 naval craft, Coast Guard & Marine Police on-site.#boataccident pic.twitter.com/Xs3Upz8YsL
ಹೆಚ್ಚುವರಿಯಾಗಿ, ನಾಲ್ಕು ಹೆಲಿಕಾಪ್ಟರ್‌ಗಳು, ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರದ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.
