ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಬಿಜೆಪಿ ಸಂಸದರ ನಡುವೆ ಲೋಕಸಭೆಯ ಆವರಣದಲ್ಲಿ ತಳ್ಳಾಟ ನಡೆದಿದ್ದು, ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುತ್ತಿದ್ದಾರೆ.
ತಳ್ಳಾಟದಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರಿಗೆ ಗಾಯವಾಗಿದ್ದು “ರಾಹುಲ್ ಗಾಂಧಿ ಓರ್ವ ಸಂಸದರನ್ನು ತಳ್ಳಿದರು, ಆ ಸಂಸದ ನನ್ನ ಮೇಲೆ ಬಿದ್ದು ನನಗೆ ಗಾಯವಾಗಿದೆ” ಎಂದು ಪ್ರತಾಪ್ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ “ನಾನು ತಳ್ಳಿಲ್ಲ ಅವರೇ ನನ್ನನ್ನು ತಳ್ಳಿದ್ದಾರೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ರಕ್ಷಣಾ ಸಚಿವರಿಗೆ ಗುಲಾಬಿ, ತ್ರಿವರ್ಣ ಧ್ವಜ ನೀಡಿದ ರಾಹುಲ್ ಗಾಂಧಿ; ವಿಪಕ್ಷಗಳ ವಿನೂತನ ಪ್ರತಿಭಟನೆ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ಬಗ್ಗೆ ಸಂಸತ್ತಿನಲ್ಲಿ ಭಾರೀ ಗದ್ದಲ ಎದ್ದಿದೆ. ವಿರೋಧ ಪಕ್ಷಗಳು ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ, ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದೆ.
मैं संसद के अंदर जाने की कोशिश कर रहा था।
— Congress (@INCIndia) December 19, 2024
लेकिन BJP के सांसद मुझे रोकने की कोशिश कर रहे थे, धक्का दे रहे थे और धमका रहे थे।
ये संसद है और अंदर जाना हमारा अधिकार है।
: नेता विपक्ष श्री @RahulGandhi pic.twitter.com/wfwAGAeruf
ಈ ತಳ್ಳಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, “ಸಂಸತ್ತಿನ ಪ್ರವೇಶ ದ್ವಾರದ ಮೂಲಕ ನಾನು ಒಳಗೆ ಹೋಗಲು ಮುಂದಾದೆ. ಆದರೆ ಬಿಜೆಪಿ ಸಂಸದರು ನನ್ನನ್ನು ತಳ್ಳಿದರು, ನನಗೆ ಒಳಗೆ ಹೋಗಲು ಅವಕಾಶ ನೀಡಿಲ್ಲ. ನನ್ನನ್ನು ಬೆದರಿಸಿದರು. ಇದು ನಿಮ್ಮ ಕ್ಯಾಮೆರಾದಲ್ಲಿಯೂ ಇರಬಹುದು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
VIDEO | BJP MP Pratap Sarangi reportedly sustains injury during INDIA bloc's protest inside Parliament premises.#ParliamentWinterSession2024
— Press Trust of India (@PTI_News) December 19, 2024
(Full video available on PTI Videos – https://t.co/n147TvrpG7) pic.twitter.com/koaphQ9nqz
ಇನ್ನು ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಕೂಡಾ ತಳ್ಳಲಾಗಿದೆ ಎಂಬ ಆರೋಪದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದೆ. “ತಳ್ಳಾಟದಿಂದ ನಮಗೇನು ಆಗದು. ಆದರೆ ಇದು ಸಂಸತ್ತಿನ ಪ್ರವೇಶ ದ್ವಾರ. ಇಲ್ಲಿಂದ ಒಳಗೆ ಹೋಗುವುದು ನಮ್ಮ ಹಕ್ಕು. ಆದರೆ ಬಿಜೆಪಿ ಸದಸ್ಯರು ನಮ್ಮನ್ನು ಒಳಗೆ ಹೋಗದಂತೆ ತಡೆಯುತ್ತಿದ್ದರು” ಎಂದು ದೂರಿದ್ದಾರೆ.