ಅಸ್ಸಾಂ ಮೂಲದ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ.
ಅಸ್ಸಾಂ ಮೂಲದ ವ್ಯಕ್ತಿ ನಿಕ್ಕಿಮ್ (17) ಆರೋಪಿ ಕೂಡ ಅಪ್ರಾಪ್ತನಾಗಿದ್ದು, ಈತ ಶೃಂಗೇರಿ ತಾಲೂಕಿನ ತೆಕ್ಕೂರಿನ ಎಸ್ಟೇಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈಗ ಆರೋಗ್ಯ ತಪಾಸಣೆ ವೇಳೆ ಬಾಲಕಿ ಗರ್ಭಾವತಿಯಾಗಿರುವ ಘಟನೆ ಹೊರಬಂದಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಸ್ಸಾಂ ಕಾರ್ಮಿಕರು ಹಾಗೂ ಬಾಂಗ್ಲಾ ನುಸುಳುಕೋರರು ಮಲೆನಾಡಿನ ಎಸ್ಟೇಟ್ ಗಳಲ್ಲಿ ನುಸುಳಿಕೊಂಡಿದ್ದಾರೆ. ಕಡಿಮೆ ಕೂಲಿಗೆ ಕಾರ್ಮಿಕರು ಸಿಗುತ್ತಾರೆ ಎಂಬ ಕಾರಣಕ್ಕೆ ಎಸ್ಟೇಟ್ ಮಾಲೀಕರು ಕಾನೂನನ್ನು ಗಾಳಿಗೆ ತೂರಿ ಇಂತಹವರನ್ನು ತಮ್ಮ ಎಸ್ಟೇಟ್ ನಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಅಪ್ರಾಪ್ತ ಬಾಲಕನನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ಮಾಲೀಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಎಸ್ಟೇಟ್ ಮಾಲೀಕ “ಅಸ್ಸಾಂಯಿಂದ ಒಂದು ಕುಟುಂಬ ಐದು ತಿಂಗಳ ಹಿಂದೆಯೇ, ಕೂಲಿ ಕೆಲಸಕ್ಕೆ ಬಂದಿತ್ತು. ಅವರಿಗೆ ಇಬ್ಬರು ಮಕ್ಕಳು, ಅದರಲ್ಲಿ ವಿಕ್ಕಿಮ್ ಯುವಕ ಲೈಂಗಿಕ ದೌರ್ಜನ್ಯ ಎಸಗಿರುವ ವ್ಯಕ್ತಿ. ಅವನು ಅವರ ಪೋಷಕರ ಜತೆಗೆ ಬಂದಿದ್ದಾನೆ” ಎಂದು ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸರ್ಕಾರದ ಕಾನೂನು ಆದೇಶದಂತೆ ಅರಣ್ಯ ಒತ್ತುವರಿ ತೆರವು; ಅಡಕೆ ತೋಟ ಸಂಹಾರ
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಸ್ಸಾಂ ಕಾರ್ಮಿಕ ವಿಕ್ಕಿಮ್ ಬಂಧನವಾಗಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
