ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ವಿಜಯನಗರ ಜಿಲ್ಲೆಯ ಅಂಗನವಾಡಿ ಮತ್ತು ಸಿಐಟಿಯು ಜಿಲ್ಲಾ ಸಂಚಾಲಕಿ ಮಾತನಾಡಿ, “ಚುನಾವಣೆಯ ಬಿಎಲ್‌ಒದಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳು ಮತ್ತು ಬಾಣಂತಿಯರ ರಕ್ಷಾ ಕವಚದಂತೆ ಹಗಲು-ರಾತ್ರಿ ಎನ್ನದೇ ಸೇವೆ ಮಾಡುತ್ತೇವೆ. ಅವರನ್ನು ಆಸ್ಪತ್ರೆಗೆ ದಾಖಲಿಸುವುದು, ಚಿಕಿತ್ಸೆ ಕೊಡಿಸುವುದು ಸೇರಿದಂತೆ ಯಾವುದೇ ರೀತಿಯ ಕೆಲಸಗಳಿದ್ದರೂ ಹಿಂದೇಟು ಹಾಕದೆ ಕಾರ್ಯ ನಿರ್ವಹಿಸುತ್ತೇವೆ. ಆದರೆ, ಸರ್ಕಾರ ನಮ್ಮ ಜೊತೆ ತಾರತಮ್ಯ ಮಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸ್ಕ್ಯಾನಿಂಗ್ ದರ ಹೆಚ್ಚಿಸಿ, ಮತ್ತೆ ವಿವಾದಕ್ಕೀಡಾದ ಜಿಮ್ಸ್: ಮುತ್ತು ಬಿಳಿಯಲಿ ಆಕ್ರೋಶ
“ಕೋವಿಡ್‌ನಂತಹ ಭಯಾನಕ ಸಂದರ್ಭದಲ್ಲೂ ಕೂಡ ಮನೆ ಬಿಟ್ಟು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಪೋಲೀಸ್ ಇಲಾಖೆಯೊಂದಿಗೂ ನಾವು ಜೀವದ ಹಂಗು ತೊರೆದು ಕರ್ತವ್ಯ ಪಾಲಿಸಿದ್ದೇವೆ. ಎಂತಹ ಕಷ್ಟದ ಸಂದರ್ಭದಲ್ಲೂ ಎಲ್ಲ ಇಲಾಖೆಯವರ ಜೊತೆಗಿದ್ದು, ಅವರ ಜತೆ ಜತೆಗೆ ಕಾರ್ಯನಿರ್ಹಿಸುತ್ತಿದ್ದೇವೆ. ಸರ್ಕಾರ ಅಂಗನವಾಡಿ ಕಾರ್ಯಕರ್ತರಾದ ನಮ್ಮನ್ನು ಸರ್ಕಾರ ಕೆಡಿಮೆ ಕೂಲಿ ಅಥವಾ ಸಂಬಳಕ್ಕೆ ದುಡಿಸಿಕೊಳ್ಳುತ್ತಿದೆ. ನಮ್ಮ ನೋವಿಗೆ, ಕಷ್ಠಗಳಿಗೆ ಮಿಡಿಯುತ್ತಿಲ್ಲ. 6ನೇ ವೇತನಕ್ಕೆ ನಮಗೆ ಆದ್ಯತೆ ಮಾಡಿಕೊಡಬೇಕು. ಸರ್ಕಾರ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ನಾವು ತೀವ್ರ ಹೋರಾಟದ ಮೂಲಕ ವಿಧಾನಸೌಧಕ್ಕೆ ಮುತಿಗೆ ಹಾಕುತ್ತೇವೆ” ಎಂದು ಎಚ್ಚರಿಕೆ ನೀಡಿದರು.