ಔರಾದ್ ತಾಲ್ಲೂಕಿನ ಭೂ ಮಾಪನ ಇಲಾಖೆಯ ಭೂ ಮಾಪಕ ಸಂತೋಷ ಬೋಗಾರ ಎಂಬುವರು ರೈತರೊಬ್ಬರಿಂದ ₹75 ಸಾವಿರ ಲಂಚ ಪಡೆಯುವ ವೇಳೆ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಮೀನು ಸರ್ವೇ ಮಾಡಲು ಔರಾದ್ ತಾಲ್ಲೂಕಿನ ವಡಗಾಂವ ಗ್ರಾಮದ ರೈತ ಮೊಹಮ್ಮದ್ ಶೌಕತ್ ಅಲಿ ಎಂಬುವರ ಬಳಿ ₹1.50 ಲಕ್ಷ ಲಂಚಕ್ಕೆ ಭೂಮಾಪಕ ಸಂತೋಷ ಬೇಡಿಕೆ ಇಟ್ಟಿದ್ದರು. ಪಟ್ಟಣದ ದತ್ತ ಮಂದಿರ ಬಳಿ ₹75 ಸಾವಿರ ಹಣ ಮುಂಗಡವಾಗಿ ಪಡೆಯುವ ಲೋಕಾಯುಕ್ತ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಬ್ಬಬ್ಬಾ! ಏನ್ ಚಳಿ ಅಂತೀರಾ…
ಈ ಸಂದರ್ಭದಲ್ಲಿ ಬೀದರ್ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿದರು.