ರೈಸ್ ಮಿಲ್ ಒಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಹಿನ್ನೆಲೆ ಹಲವರಿಗೆ ಗಾಯಗಳಾಗಿದ್ದು, ಓರ್ವ ಕಾರ್ಮಿಕ ನಾಪತ್ತೆಯಾಗಿದ್ದಾನೆ.
ಭದ್ರಾವತಿ ತಾಲೂಕಿನ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್ ನಲ್ಲಿನ ಬಾಯ್ಲರ್ ಗುರುವಾರ ಸಂಜೆ 6.20ರ ಸುಮಾರಿಗೆ ದಿಢೀರ್ ಸ್ಪೋಟಗೊಂಡಿದ್ದು, ರೈಸ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 5 ಮಂದಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ.
ಘಟನೆಯಲ್ಲಿ ರಘು ಎಂಬಾತ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸ್ಪೋಟಗೊಂಡ ಬಾಯ್ಲರ್ ನಿಂದ ಕಬ್ಬಿಣದ ತುಂಡುಗಳು ಹೊರಗಡೆ ಸಿಡಿದಿದ್ದು, ಪಕ್ಕದ ಅಣ್ಣಾ ನಗರ ಮತ್ತು ಹೊಸಮನೆ ಭಾಗದ ಮನೆಗಳಿಗೆ ಹಾನಿಯಾಗಿದೆ.

ಹೊಸಮನೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಯಾಳುಗಳನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.