ಆರ್‌ಟಿಪಿಎಸ್‌ನಲ್ಲಿ ರೈಲು ಅಪಘಾತ ಸಂಭವಿಸಿ ಓರ್ವ ಗುತ್ತಿಗೆ ಕಾರ್ಮಿಕ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಾಗರಾಜ್ (32) ಮೃತ ಗುತ್ತಿಗೆ ಕಾರ್ಮಿಕ. ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದ್ದು, ಕಲ್ಲಿದ್ದಲು ಸಾಗಿಸುವ ರೈಲಿನ ರೇಕ್ ಹರಿದು ಗುತ್ತಿಗೆ ಕಾರ್ಮಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕುಷ್ಟಗಿ | ಭೀಕರ ಅಪಘಾತ: 6 ಮಂದಿ ಸಾವು, ಎದೆ ನಲುಗಿತು ಎಂದ ಸಿಎಂ
ಅಪಘಾತ ಸಂಭವಿಸಿದಾಗ ನಾಗರಾಜ್ ಅವರು ಕಲ್ಲಿದ್ದಲು ಸ್ಯಾಂಪಲ್ ತೆಗೆಯುವ ಕೆಲಸದಲ್ಲಿ ತೊಡಗಿದ್ದರು. ಕೆಲಸದ ವೇಳೆ ಆಕಸ್ಮಿಕವಾಗಿ ರೈಲಿನಡಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ರೈಲು ಕುತ್ತಿಗೆ ಮೇಲೆ ಹರಿದದ್ದರಿಂದ ರುಂಡ ಮುಂಡ ಬೇರ್ಪಟ್ಟಿವೆ ಎನ್ನಲಾಗಿದೆ.