ಡಾ. ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವೇ ಗೃಹಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕೆಂದು ಒತ್ತಾಯಿಸಿ ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನಾಕಾರರು ಕೊಪ್ಪಳ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
“ಬುಧವಾರ ಸಂಸತ್ತಿನಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ‘ಡಾ. ಬಿ ಆರ್ ಅಂಬೇಡ್ಕರ್ ಹೆಸರನ್ನು ಪದೇ ಪದೆ ಬಳಸುವುದು ಶೋಕಿಯಾಗಿದೆ, ಅಂಬೇಡ್ಕರ್ ಹೆಸರು ಬಳಸುವುದಕ್ಕಿಂತ ದೇವರ ಸ್ಮರಣೆ ಮಾಡಿದ್ದರೆ ಏಳೇಳು ಜನ್ಮಕ್ಕೆ ಆಗುವಷ್ಟು ಸ್ವರ್ಗವಾದರೂ ಸಿಗುತ್ತಿತ್ತು’ ಎಂದು ಹಗುರವಾಗಿ ಮಾತನಾಡಿ ಡಾ. ಬಿ ಅರ್ ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ” ಎಂದು ಆಕ್ರೋಶ ಹೊರ ಹಾಕಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅಮಿತ್ ಶಾ ನಾಡಿನ ಜನತೆಯ ಕ್ಷಮೆಯಾಚಿಸಿ, ರಾಜೀನಾಮೆ ನೀಡುವಂತೆ ಡಿಎಸ್‌ಎಸ್ ಆಗ್ರಹ
“ಅಮಿತ್ ಶಾ ಅವರ ಅಸೂಕ್ಷ್ಮ ಹೇಳಿಕೆ ಮತ್ತು ಅಭದ್ರ ಹೇಳಿಕೆ ಇಡೀ ದೇಶದ ಶೋಷಿತ ಸಮುದಾಯಗಳ ಸಂಕಷ್ಟ ಹಾಗೂ ಅವಮಾನವನ್ನು ಒತ್ತಿ ಹೇಳುತ್ತಿದೆ. ಈ ಹೇಳಿಕೆ ತುಳಿತಕ್ಕೊಳಪಟ್ಟವರನ್ನು ಜಾಗೃತಿಗೊಳಿಸದಂತ ಮಹಾ ವಿಶ್ವಜ್ಞಾನಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಅಮಿತ್ ಶಾ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಅವರ ವಿರುದ್ಧ ತೀವ್ರವಾಗಿ ಹೋರಾಟ ಮಾಡುತ್ತೇವೆ” ಎಂದು ಶಶಿಕಲಾ ಮಠದ ಆಕ್ರೋಶ ವ್ಯಕ್ತಪಡಿಸಿದರು.
ನಿಂಗು ಬೆಣಕಲ್, ಮಾಂತೇಶ್ ಮ್ಯಾಗಳಮನಿ, ಯಮನೂರ ಬಣಕಾರ, ಮೈಲಾರಪ್ಪ ಮಾದಿನೂರು, ಶಶಿಕಲಾ ಮಠದ, ಸಲೀಮಾ ಜಾನ್, ಸಂಜಯ ದಾಸರ ಕೌಜಗೇರಿ, ಯಲ್ಲಪ್ಪ ಸಣ್ಣಿಗರ, ರಾಮಲಿಂಗ ಶಾಸ್ತ್ರಿ ಸೇರಿದಂತೆ ಇತರರು ಇದ್ದರು.