ಇಡೀ ವಿಶ್ವಮಾನ್ಯ ಪಡೆದ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಛಲವಾದಿ ಮಹಾಸಭಾದ ತಾಲ್ಲೂಕು ಘಟಕ ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಬಂದ ಛಲವಾದಿ ಮಹಾಸಭಾದ ಸದಸ್ಯರು ಹಾಗೂ ದಲಿತ ಪರ ಸಂಘಟನೆಯ ಮುಖಂಡರು ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಈರಣ್ಣ ಮಾತನಾಡಿ ಅಂಬೇಡ್ಕರ್ ಹೆಸರು ಜಪ ಮಾಡುವ ಬದಲು ದೇವರ ಹೆಸರು ಜಪ ಮಾಡಿ ಅನ್ನುವ ಅಮಿತ್ ಷಾ ಅವರು ಚುನಾವಣಾ ಮೂಲಕ ಆಯ್ಕೆಯಾದ ನಿಮಗೆ ಮತ ನೀಡಿದ್ದು ಅಂಬೇಡ್ಕರ್ ಅನುಯಾಯಿಗಳು. ಯಾವ ದೇವರು ನಿಮಗೆ ಮತ ನೀಡಿಲ್ಲ. ಸಂವಿಧಾನದ ಚೌಕಟ್ಟಿನ ಎಲ್ಲಾ ಜಾತಿ ಧರ್ಮದ ಜನರ ಮತದಿಂದ ಆಯ್ಕೆಯಾಗಿ ಈಗ ಅವರನ್ನು ಹೀಯಾಳಿಸುವ ಪ್ರವೃತ್ತಿ ನಿಮ್ಮ ದುರ್ಬುದ್ಧಿ ತೋರುತ್ತದೆ. ಹೇಳಿಕೆ ನೀಡಿ ಈಗ ಕ್ಷಮೆ ಕೇಳಿದರೂ ನಿಮಗೆ ಶಿಕ್ಷೆ ಆಗುವವರಿವಿಗೂ ಉಗ್ರ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಭಾರತ್ ಭೀಮ್ ಸೇನೆಯ ಸಚಿನ್ ಮಾತನಾಡಿ ಅಂಬೇಡ್ಕರ್ ಹೆಸರು ಅಜರಾಮರ. ಇಡೀ ವಿಶ್ವವೇ ಹೊಗಳುವ ಅವರ ತತ್ವಾದರ್ಶಗಳನ್ನು ಸಹಿಸದ ಈ ಬಿಜೆಪಿ ಮುಖಂಡ ಅಮಿತ್ ತಮ್ಮ ಅಸೂಯೆ ಗುಣ ವ್ಯಕ್ತಪಡಿಸಿದ್ದಾರೆ. ವರ್ಷ ಕಳೆದಂತೆ ಅಂಬೇಡ್ಕರ್ ಅವರ ಅಭಿಮಾನಿಗಳು, ಅನುಯಾಯಿಗಳ ಸಂಖ್ಯೆ ಸಾವಿರಾರು ಜನ ಸಿಡಿದೇಳುತ್ತಾರೆ. ಅಮಿತ್ ಷಾ ಅವರ ಹೇಳಿಕೆಗೆ ಯುವ ಜನಾಂಗವೇ ಆಕ್ರೋಶಭರಿತವಾಗಿದೆ. ಕೂಡಲೇ ಗೃಹ ಮಂತ್ರಿ ಸ್ಥಾನದಿಂದ ವಜಾಗೊಳಿಸಿ ಎಂದು ಒತ್ತಾಯಿಸಿದರು.
ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಸಲ್ಲಿಸಿ ರಾಷ್ಟ್ರಪತಿಗಳಿಗೆ ಪತ್ರ ರವಾನೆಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾಸಭಾ ಮುಖಂಡರಾದ ಕಿಟ್ಟದಕುಪ್ಪೆ ನಾಗರಾಜ್, ಹರಿವೇಸಂದ್ರ ಕೃಷ್ಣಪ್ಪ, ಮಹಿಳಾ ಘಟಕದ ಗಿರಿಜಮ್ಮ, ಸಾತೇನಹಳ್ಳಿ ರಮೇಶ್, ಗೋಪಾಲ್, ಮಧು, ಮಂಜುನಾಥ್, ಕೊಲ್ಕಾರ್ ರವಿ, ಇಮ್ರಾನ್ ಇತರರು ಇದ್ದರು.

ಕೇಸರಿ ಶಾಲು ಹಾಕಿಕೊಂಡ ದಲಿತ ನಾಯಕರು ನಾಪತ್ತೆ ಆಗಿದ್ದಾರೆ,,,, ನೀವುಗಳು ಟೀವಿ ಮುಂದೆ ಬಂದು ನಿಮ್ಮದೇ ವರ್ಗದವರನ್ನು ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನು ಬೈಯ್ದುಕೊಳ್ಳಲು, ಅಧಿಕಾರ ಹಕ್ಕು ನೀಡಿದ್ದೆ ಅಂಬೇಡ್ಕರ್ ಮತ್ತು ಸಂವಿಧಾನ,,ಈಗ ನಿಮ್ಮದೆ ಜುಮ್ಲಾ ವ್ಯಾಪಾರಿಗಳು ಅವರ ಬಗ್ಗೆ ತಮ್ಮ ತಿರಸ್ಕಾರ ಭಾವನೆ ವಾಂತಿ ಮಾಡಿಕೊಂಡಾಗ ನೀವುಗಳು ನಿಮ್ಮ ಸ್ವಾಭಿಮಾನ ಸ್ವಂತಿಕೆಯನ್ನು ಜುಮ್ಲಾಗಳ ಪಾದಾರವಿಂದಗಳಲ್ಲಿ ಅರ್ಪಣೆ ಮಾಡಿ ಶತಮಾನಗಳಿಂದ ತಲೆ ಮೇಲೆ ಹೊತ್ತುಕೊಂಡ ಗುಲಾಮಗಿರಿ ಖಾಯಂ ಮಾಡಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಿ