ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಶಹಾಪುರ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಪತ್ರ ಸಲ್ಲಿಸಿದರು.
‘ರಾಜ್ಯಸಭೆಯಲ್ಲಿ ಡಿ.18ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ʼಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನೋದು ಈಗ ಕೆಲವರಿಗೆ ಫ್ಯಾಷನ್ ಆಗಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದರೆ ಏಳೇಳು ಜನ್ಮಕೂ ಸ್ವರ್ಗ ಪ್ರಾಪ್ತಿಯಾಗುತ್ತದೆ” ಎಂದು ಮಾತನಾಡಿ ಅಂಬೇಡ್ಕರ್ ಅವರಿಗೆ ಘೋರ ಅವಮಾನ ಮಾಡಿದ್ದಾರೆ. ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಪ್ರವಾಸದ ವೇಳೆ ವಿದ್ಯಾರ್ಥಿ ಸಾವು : ಮುಖ್ಯ ಶಿಕ್ಷಕ ಸೇರಿ ಆರು ಶಿಕ್ಷಕರ ಅಮಾನತು
ಈ ಸಂದರ್ಭದಲ್ಲಿ ಶಿವಪುತ್ರ ಜವಳಿ, ಚಂದಪ್ಪ ಮೂನಿಯಪ್ಪನೋರ್, ಮಹಾದೇವ ದಿಗ್ಗಿ, ಶರಣು ದೊರನಹಳ್ಳಿ, ತಾಯಪ್ಪ ಭಂಡಾರಿ, ಮರಿಯಪ್ಪ ಕ್ರಾಂತಿ, ಮಲ್ಲಿಕಾರ್ಜುನ್ ಹೊಸಮನಿ, ಬಲಭೀಮ್ ಬೇವಿನಹಳ್ಳಿ, ಶರಬಣ್ಣ ದೊರನಹಳ್ಳಿ, ವಾಸು ಕೋಗಿಲ್ಕರ್, ನಾಗರಾಜ ಕೊಡಮನಹಳ್ಳಿ, ಶ್ರೀಮಂತ ಸಿಂಗನಹಳ್ಳಿ, ಶರಣಪ್ಪ ಕಟ್ಟಿಮನಿ, ಅನ್ಸೂರ್, ಭೀಮಾಶಂಕರ ಗುಂಡಳ್ಳಿ, ಪುರುಷೋತ್ತಮ್ ಬಬಲಾದ, ಚೆನ್ನಬಸವ ಗುರಸುಣಗಿ, ಸಿದ್ದಪ್ಪ ಕೊಡಮನಹಳ್ಳಿ, ನಾಗಪ್ಪ ಹಳಿಸಗರ, ಜೈಭೀಮ್ ಸಿಂಗನಹಳ್ಳಿ, ಹೊನ್ನಯ್ಯ ಕುರಕುಂದ, ದಶರಥ ಸೇರಿದಂತೆ ಇತರರು ಭಾಗವಹಿಸಿದ್ದರು.