ಹಿಂದುಳಿದ ವರ್ಗದ ಮೊರಾರ್ಜಿ ದೇಸಾಯಿ ವಸತಿ ನಿಲಯದ ವಿದ್ಯಾರ್ಥಿನಿಯರ ಶೌಚಾಲಯದ ಹಿಂಭಾಗದಲ್ಲಿ ಮೂಬೈಲ್ ಇಟ್ಟು ವಿದ್ಯಾರ್ಥಿನಿಯರು ಶೌಚ ಮಾಡುವ ಚಿತ್ರೀಕರಣ ಸೆರೆ ಹಿಡಿಯಲು ಯತ್ನಿಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನಡೆದಿದೆ.
ಮಾನ್ವಿ ತಾಲೂಕಿನ ರಾಜಲಬಂಡಾ ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗ ವಸತಿನಿಲಯದ ಶೌಚಾಲಯದ ಹಿಂಭಾಗದಲ್ಲಿ ಚಿತ್ರೀಕರಣ ಮಾಡಲು ಡಿಸೆಂಬರ್ 19 ರಂದು ರಾತ್ರಿ 10ಕ್ಕೆ ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಘಟನೆಯ ದಿನ ಶುಕ್ರವಾರ ರಾತ್ರಿ ವಾರ್ಡನ್ ಶಂಕ್ರಪ್ಪ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ 112 ವಾಹನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಇದು ಹೆಣ್ಣುಮಕ್ಕಳ ವಸತಿನಿಲಯ. ಈ ಕಡೆ ಯಾರೂ ಬರುವಂತಿಲ್ಲ ಎಂದು ಸುತ್ತಮುತ್ತ ಇರುವಂತಹ ಜನರಿಗೆ, ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಕರಡಿಗುಡ್ಡ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಬಾಲಕಿಯರು ಹಾಗೂ ಬಾಲಕರು ಇರುವಂತಹ ಹಾಸ್ಟೆಲ್ ಎಂದಿನಂತೆ ಬಾಲಕಿಯರು ರಾತ್ರಿ ತಮ್ಮ ದಿನನಿತ್ಯದ ಕಾರ್ಯ ಮುಗಿಸಲು ಶೌಚಾಲಯಕ್ಕೆ ಹೋಗಿರುವಾಗ ಶೌಚಾಲಯದ ಕಿಟಕಿಯ ಭಾಗದಲ್ಲಿ ಮೊಬೈಲ್ ಇಟ್ಟಿರುವುದನ್ನು ಗಮನಿಸಿದ ವಿದ್ಯಾರ್ಥಿನಿ ತಕ್ಷಣ ತರಗತಿ ವಿದ್ಯಾರ್ಥಿನಿಯರಿಗೆ ಮಾಹಿತಿ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆ ವಸತಿ ಬಾಲಕರು, ವಾರ್ಡನ್ ಹಾಗೂ ಪ್ರಾಂಶುಪಾಲರು ಹಾಸ್ಟೆಲ್ ಕಾಂಪೌಂಡ್ ಹೊರಗೆ ತೆರಳಿ ಮೂಬೈಲ್ ಇಟ್ಟಿದ್ದ ಯುವಕನನ್ನು ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಕೇಂದ್ರ ಗೃಹಸಚಿವ ಅಮಿತ್ ಶಾ ವಜಾಕ್ಕೆ ದಸಂಸ ಆಗ್ರಹ
ಮರುದಿನ ಶನಿವಾರ ರಾತ್ರಿ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಪಿ ಐ ವೀರಭದ್ರಯ್ಯ ಹಿರೇಮಠ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವಾರ್ಡನ್ ಶಂಕ್ರಪ್ಪ ನೀಡಿದ ದೂರಿನ ಆಧಾರದ ಮೇಲೆ ಅನುಮಾನಾಸ್ಪದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.