ಭಾರತದಲ್ಲಿನ ಕ್ರಿಮಿನಲ್ ಕಾನೂನುಗಳ ಪ್ರಕಾರ ಮೃತದೇಹದೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗುವುದು ಅತ್ಯಾಚಾರಕ್ಕೆ ಸಮನಾಗುವುದಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದೆ.
ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತ ಗುರು ಅವರ ಪೀಠವು, “ಮೃತದೇಹದ ಮೇಲೆ ಅತ್ಯಾಚಾರ” ಮಾಡುವುದು “ಭಯಾನಕ” ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಇದು ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಸಂಬಂಧಿತ ಅಪರಾಧಗಳ ಪ್ರಕಾರ ಅತ್ಯಾಚಾರವನ್ನು ಒಳಗೊಂಡಿರುವುದಿಲ್ಲ ಎಂದು ತಿಳಿಸಿದೆ.
ಆರೋಪಿಗಳಾದ ನೀಲಕಂಠ, ನಾಗೇಶ್ ಮಾಡಿರುವುದು ಖಂಡಿತಾ ಅಪರಾಧವಾಗಿದೆ. ಅಂದರೆ ಮೃತದೇಹದ ಮೇಲೆ ಅತ್ಯಾಚಾರ ಎಸಗುವುದು ಅತ್ಯಂತ ಭೀಕರ ಅಪರಾಧಗಳಲ್ಲಿ ಒಂದಾಗಿದೆ ಎಂದು ಪೀಠವು ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಹಿತ್ಯ ಸಮ್ಮೇಳನ – ಜನ ಮರುಳೋ-ಜಾತ್ರೆ ಮರುಳೋ ಎಂದಾಗಬಾರದು!
“ಮೇಲೆ ಹೇಳಿದ ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲು ಸಂತ್ರಸ್ತೆ ಜೀವಂತ ಇರಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಜೀವಂತ ಮನುಷ್ಯನಿಗೆ ಘನತೆ ಮತ್ತು ನ್ಯಾಯಯುತವಾದ ಬದುಕು ಅಗತ್ಯವಿರುವ ರೀತಿ, ಪ್ರತಿ ಮೃತದೇಹವು ಗೌರವಾನ್ವಿತ ಅಂತ್ಯಸಂಸ್ಕಾರಕ್ಕೆ ಅರ್ಹವಾಗಿದೆ. ಪ್ರಕರಣದ ಸತ್ಯಗಳು ಮತ್ತು ಆಕ್ಷೇಪಣೆದಾರರ ಪರ ವಕೀಲರು ತಿಳಿಸಿದ ಯಾವುದೇ ಅಪರಾಧಗಳನ್ನು ಮೇಲ್ಮನವಿದಾರರ ಮೇಲೆ ಹೇರಲಾಗುವುದಿಲ್ಲ”ಎಂದು ಪೀಠ ವಿವರಿಸಿದೆ.
ಅತ್ಯಾಚಾರದ ಅಪರಾಧಕ್ಕೆ ಸಂಬಂಧಿಸಿದಂತೆ ನಾಗೇಶ್ ಅವರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
