ಗುಬ್ಬಿ | ಅಮಿತ್ ಶಾ ಪ್ರತಿಕೃತಿ ದಹನ : ಅಂಬೇಡ್ಕರ್ ಬಗ್ಗೆ ಅವಹೇಳನ ಖಂಡಿಸಿದ ಪ್ರಗತಿ ಪರ ಸಂಘಟನೆಗಳು

Date:

Advertisements

ದೇಶದ ಪ್ರಜಾಪ್ರಭುತ್ವಕ್ಕೆ ಅರ್ಥಪೂರ್ಣ ಸಂವಿಧಾನ ರಚಿಸಿದ ಡಾ.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಟ್ಟು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಪ್ರಗತಿ ಪರ ಸಂಘಟನೆಗಳು, ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳ ಒಕ್ಕೂಟ ರಾಷ್ಟ್ರಪತಿಗಳಿಗೆ ತಾಲ್ಲೂಕು ಆಡಳಿತ ಮೂಲಕ ಪತ್ರ ಮನವಿ ಮಾಡಿದರು.

ಗುಬ್ಬಿ ಬಸ್ ಸ್ಟ್ಯಾಂಡ್ ಬಳಿ ಜಮಾಯಿಸಿದ ದಲಿತ ಸಂಘರ್ಷ ಸಮಿತಿ ನೇತೃತ್ವದ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಘೋಷಣೆ ಕೂಗಿ ಅಮಿತ್ ಷಾ ಭಾವಚಿತ್ರ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ನಂತರ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ತಲುಪಿದರು.

1000804583 1

ಪ್ರತಿಭಟನಾ ಸಭೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿ ಮುಖಂಡರು ಮೊದಲು ಅಧಿಕಾರಕ್ಕೆ ಬರಲು ಬಳಸಿದ್ದ ಸಂವಿಧಾನ ಚುನಾವಣೆ ಬಗ್ಗೆ ತಿಳಿದುಕೊಳ್ಳಿ. ಅಂಬೇಡ್ಕರ್ ಬರೆದ ನಿಯಮಾನುಸಾರ ಅಧಿಕಾರದಲ್ಲಿರುವ ಅಮಿತ್ ಷಾ ಅವರಿಗೆ ಜಾತೀಯತೆ ಬುದ್ಧಿ ನೆತ್ತಿಗೇರಿದೆ. ದೇವರ ಸ್ಮರಣೆ ಮಾಡಿ ಪುಣ್ಯ ಅವರೇ ಕಟ್ಟುಕೊಳ್ಳಲಿ. ನಮಗೆ ಅಂಬೇಡ್ಕರ್ ಅವರೇ ದೇವರು ಎಂಬುದು ಅರ್ಥ ಮಾಡಿಕೊಳ್ಳಬೇಕು. ದೇಶದ 75 ಭಾಗ ಜನರು ಅವರನ್ನು ಆರಾಧಿಸುತ್ತಾರೆ ಎಂದು ಕಿಡಿಕಾರಿ ಅಮಿತ್ ಷಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements
1000804590

ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್ ಮಾತನಾಡಿ ದೇಶಕ್ಕೆ ಸಂವಿಧಾನ ಜಾರಿಯಾದಾಗ ಅಮಿತ್ ಷಾ ಹುಟ್ಟಿರಲಿಲ್ಲ. ಈ ಮನುಷ್ಯ ಪ್ರಭಾವಿ ಅಲ್ಲ. ಅಧಿಕಾರ ವಾಮಮಾರ್ಗದಲ್ಲಿ ಬಂದು ಮುಸ್ಲಿಂ ಕ್ರಿಶ್ಚಿಯನ್ ವಿರೋಧಿಸಿ ಕೇವಲ ಒಂದು ಧರ್ಮಕ್ಕೆ ದೇಶ ಎಂದು ಹೇಳಿ ಕೋಮು ಗಲಭೆಗಳಿಗೆ ಕಾರಣವಾಗಿದ್ದಾರೆ. ದಲಿತರನ್ನು ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಇಲ್ಲಸಲ್ಲದ ಸರ್ಕಸ್ ಮಾಡುವ ಬಿಜೆಪಿ ಅಸಲಿ ಬಣ್ಣ ಅಮಿತ್ ಷಾ ಹೊರಗಿಟ್ಟಿದ್ದಾರೆ. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಇಡೀ ಕೇಂದ್ರ ಸರ್ಕಾರವನ್ನು ಅಮಾನ್ಯಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ ದೇಶದ ಸಂವಿಧಾನ ಶಕ್ತಿ ತಿಳಿದಿದ್ದರೆ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡುತ್ತಿರಲಿಲ್ಲ. ಮನುಸ್ಮೃತಿ ಪಾಲಕರಾದ ಅಮಿತ್ ಷಾ ಸಂವಿಧಾನದಡಿ ಬರದಿದ್ದರೆ ಗೃಹ ಮಂತ್ರಿ ಆಗುತ್ತಿರಲಿಲ್ಲ. ಯಾವುದಾದರೂ ದೇವಾಲಯದಲ್ಲಿ ಪೂಜಾರಿ ಆಗಿರುತ್ತಿದ್ದೆ ಎಂದು ಕಟುವಾಗಿ ಟೀಕಿಸಿ ದೇಶದ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇಂತಹ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಆಗ್ರಹಿಸಿದರು.

1000804583

ದಸಂಸ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ಅಮಿತ್ ಷಾ ಮೊದಲು ಸಂವಿಧಾನ ಪೀಠಿಕೆ ಓದಲಿ. ಅಲ್ಲಿನ ಸಾಮಾಜಿಕ ನ್ಯಾಯ ಬದ್ಧತೆ ಬಗ್ಗೆ ತಿಳಿಯಲಿ. ಕೇವಲ ಒಂದು ಧರ್ಮ ಬೆಂಬಲಿಸಿ ಅಧಿಕಾರ ಪಡೆಯಲು ಸಾಧ್ಯವಿಲ್ಲ. ಎಲ್ಲಾ ಜಾತಿಯ ಜನ ಮತ ಹಾಕಿದ್ದಾರೆ. ಇದಕ್ಕೆ ಅಂಬೇಡ್ಕರ್ ಸಂವಿಧಾನದ ಚುನಾವಣಾ ಪದ್ದತಿ ಕಾರಣ. ಯಾವ ದೇವರೂ ನಿಮಗೆ ಮತ ನೀಡಿಲ್ಲ. ಜಾತಿ ಭೂತದ ನಿಮ್ಮ ಕೊಳಕು ಮನಸ್ಸು ಸರಿ ಪಡಿಸಿಕೊಳ್ಳಿ. ಅದಕ್ಕೂ ಮೊದಲು ಅಧಿಕಾರದಿಂದ ಕೆಳಗಿಳಿದು ಅಂಬೇಡ್ಕರ್ ಬಗ್ಗೆ ಮತ್ತಷ್ಟು ಸ್ಟಡಿ ಮಾಡಿ ನಂತರ ಜಾತ್ಯತೀತ ಮನಸ್ಥಿತಿಗೆ ಬನ್ನಿ ಎಂದು ಛೇಡಿಸಿದರು.

ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಚೇರಿ ಬಳಿ ಬಂದಾಗ ಅಮಿತ್ ಷಾ ಪ್ರತಿಕೃತಿ ದಹನ ಮಾಡಿ ಆಕ್ರೋಶದ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಪಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಶೋಕತ್ ಆಲಿ, ಮುಖಂಡರಾದ ಗುರುರೇಣುಕಾರಾಧ್ಯ, ಕೊಡಿಯಾಲ ಮಹದೇವು, ಜಿ.ವಿ.ಮಂಜುನಾಥ್, ತಾಪಂ ಮಾಜಿ ಸದಸ್ಯ ಕರೇತಿಮ್ಮಯ್ಯ, ಕುಂದರನಹಳ್ಳಿ ನಟರಾಜ್, ಅದಲಗೆರೆ ಈಶ್ವರಯ್ಯ, ಸಚಿನ್, ಮಧು, ಇಮ್ರಾನ್, ರಿಜ್ವಾನ್ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X