ಪಶ್ಚಿಮ ಬಂಗಾಳ ರಾಜ್ಯ ಸಾರಿಗೆ ಇಲಾಖೆಯು ವಾಹನಗಳಿಗೆ 15 ವರ್ಷಗಳ ಸೇವಾ ಮಿತಿಯನ್ನು ವಿಧಿಸಿರುವ ಕಾರಣದಿಂದಾಗಿ 2025ರ ಮಾರ್ಚ್ ವೇಳೆಗೆ ಕೋಲ್ಕತ್ತಾದ ಸುಮಾರು 64% ಹಳದಿ ಟ್ಯಾಕ್ಸಿಗಳು ರಸ್ತೆಯಿಂದ ಹೊರಗುಳಿಯಲಿವೆ. ದಾಖಲೆಗಳ ಪ್ರಕಾರ, ಕೋಲ್ಕತ್ತಾದಲ್ಲಿ ಸುಮಾರು 7,000 ನೋಂದಾಯಿತ ಹಳದಿ ಟ್ಯಾಕ್ಸಿಗಳಿವೆ. ಅವುಗಳಲ್ಲಿ ಸುಮಾರು 4,500 ಟ್ರಾಕ್ಸಿಗಳು 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಷ್ಟು ಹಳೆಯವು. ಅವುಗಳ ಸೇವೆಯನ್ನು ನಿರ್ಬಂಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಈ ಟ್ಯಾಕ್ಸಿಗಳು ಬಹುತೇಕ ಎಲ್ಲ ಟ್ಯಾಕ್ಸಿಗಳು ಹಿಂದೂಸ್ತಾನ್ ಮೋಟಾರ್ಸ್ ಲಿಮಿಟೆಡ್ (HML) ಕಂಪನಿಯ ‘ಅಂಬಾಸಿಡರ್’ ವಾಹನಗಳಾಗಿವೆ. ಕಂಪನಿಯು ಈ ನಿರ್ದಿಷ್ಟ ಬ್ರಾಂಡ್‌ನ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದು, ಆ ವಾಹನಗಳನ್ನು ಬದಲಿಸಲು ಕೂಡ ಅವಕಾಶ ಇಲ್ಲವಾಗಿದೆ. ಹೀಗಾಗಿ, ಹಳದಿ ಟ್ಯಾಕ್ಸಿಗಳು ಕೋಲ್ಕತ್ತಾ ನೆಲದಲ್ಲಿ ಕಣ್ಮರೆಯಾಗುವ ಸಾಧ್ಯತೆ ಇದೆ.
ಕೋಲ್ಕತ್ತಾದಲ್ಲಿ ಹಳದಿ ಟ್ಯಾಕ್ಸಿಗಳು ಯಾವಾಗ ರಸ್ತೆಗಳಿದವು ಎಂಬುದು ಸ್ಪಷ್ಟವಾಗಿಲ್ಲ. ಆದರೆ, 1908ರಲ್ಲಿ ಮೊದಲ ಬಾರಿಗೆ ಹಳದಿ ಟ್ಯಾಕ್ಸಿಗಳು ಸಂಚಾರ ಆರಂಭಿಸಿದ್ದವು ಎಂದು ರಾಜ್ಯ ಸಾರಿಗೆಯ ಕೆಲವು ದಾಖಲೆಗಳು ಹೇಳುತ್ತವೆ. ಆದಾಗ್ಯೂ, ಕಲ್ಕತ್ತಾ ಟ್ಯಾಕ್ಸ್ ಅಸೋಸಿಯೇಷನ್ 1962ರಲ್ಲಿಯೇ ಸ್ಟ್ಯಾಂಡರ್ಡ್ ಟ್ಯಾಕ್ಸ್ ಮಾಡೆಲ್ ಆಗಿ ‘ಅಂಬಾಸಿಡರ್’ಅನ್ನು ಅಳವಡಿಸಿಕೊಂಡಿತು. ಅಲ್ಲದೆ, ಸಂಜೆಯ ನಂತರವೂ ಬಣ್ಣವು ಸ್ಪಷ್ಟವಾಗಿ ಗೋಚರಿಸುವ ಕಾರಣ ಟ್ಯಾಕ್ಸಿಗಳ ಬಣ್ಣವಾಗಿ ಹಳದಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿತು ಎಂದು ಹೇಳಿಕೊಂಡಿದೆ.
ಆದರೆ, ಇತ್ತೀಚೆಗೆ ಅಪ್ಲಿಕೇಷನ್ ಕ್ಯಾಬ್‌ಗಳ ರಸ್ತೆಗಳಿದ ಬಳಿಕ, ಹಳದಿ ಟ್ಯಾಕ್ಸಿಗಳ ಜನಪ್ರಿಯತೆ ಕಡಿಮೆಯಾಗಿದೆ. ಆದರೂ, ಹಳದಿ ಟ್ಯಾಕ್ಸಿಗಳಿಗೆ ಸಂಬಂಧಿಸಿದ ‘ನಾಸ್ಟಾಲ್ಜಿಯಾ’ವನ್ನು ಪರಿಗಣಿಸಿ, ಅವುಗಳನ್ನು ಜೀವಂತವಾಗಿಡಲು ರಾಜ್ಯ ಸಾರಿಗೆ ಇಲಾಖೆಯು ಪ್ರಯತ್ನಿಸುತ್ತಿದೆ.
ಈ ವರದಿ ಓದಿದ್ದೀರಾ?: ಅದಾನಿ ಸೋಲಾರ್ ಒಪ್ಪಂದದ ಹಿಂದಿದೆ ಕೇಂದ್ರ-ಆಂಧ್ರ ಸರ್ಕಾರಗಳ ಚಮತ್ಕಾರ
“ಅಂಬಾಸಿಡರ್ ರೀತಿಯ ವಾಹನಗಳನ್ನು ಪತ್ತೆ ಕಾರ್ಯಾಚರಣೆಗೆ ತರುವ ಪ್ರಶ್ನೆ ಇಲ್ಲ. ಅಂಬಾಸಿಡರ್‌ಅನ್ನು ತಯಾರಿಸುವ ಕಂಪನಿಯು ಈಗ ಈ ಬ್ರಾಂಡ್‌ನ ಉತ್ಪಾದನೆಯನ್ನು ನಿಲ್ಲಿಸಿದೆ. ಆದಾಗ್ಯೂ, ಹಳೆಯ ಹಳದಿ ಟ್ಯಾಕ್ಸಿಗಳ ಪರವಾನಗಿಗಳನ್ನು ಹೊಂದಿರುವ ಮಾಲೀಕರು ಹಳೆಯದಕ್ಕೆ ಬದಲಾಗಿ ಹೊಸ ವಾಣಿಜ್ಯ ಸಾರಿಗೆ ಪರವಾನಗಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅದರ ನಂತರ ಯಾವುದೇ ಮಾಲೀಕರು, ತಮ್ಮ ವಾಹನಕ್ಕೆ ಹಳದಿ ಬಣ್ಣವನ್ನು ಬಳಿಯಲು ಇಚ್ಛಿಸಿದರೆ ರಾಜ್ಯ ಸಾರಿಗೆ ಇಲಾಖೆಯಿಂದ ವಿಶೇಷ ಅನುಮತಿ ನೀಡಲಾಗುತ್ತದೆ. ಟ್ಯಾಕ್ಸಿ ಅಸೋಸಿಯೇಷನ್‌ಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.