ಮಲೆನಾಡಿನ ಅರಣ್ಯ ಕಾಯ್ದೆಗಳು ಮತ್ತು ಭೂಮಿ-ವಸತಿ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಧವನಿ ಎತ್ತಲು ನಾನು ಸಿದ್ಧನಿದ್ದೇನೆ. ಕೇಂದ್ರವನ್ನು ಆಳುತ್ತಿರುವ ಬಿಜೆಪಿ ಸರ್ಕಾರಕ್ಕೆ ಬಡವರ ಬದುಕು ಹಾಗೂ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ. ಅವರು ಫ್ಯಾಷನ್ ರಾಜಕಾರಣಕ್ಕೆ ಇಳಿದಿದ್ದಾರೆ. ಖಂಡಿತವಾಗಿ ಪಶ್ಚಿಮ ಘಟ್ಟದ ಜನರ ಪರವಾಗಿ ಮಾತನಾಡಲು ನಾನು ಸಿದ್ದವಿದ್ದೇನೆ ಎಂದು ಹಾಸನ ಸಂಸದ ಶ್ರೇಯಸ್ ಪಟೇಲ್ ಭರವಸೆ ನೀಡಿದರು.
ಹಾಸನ ನಗರದ ಚಿಕ್ಕಮಗಳೂರು ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿಯಲ್ಲಿ ಎದ್ದೇಳು ಕರ್ನಾಟಕ ಹಮ್ಮಿಕೊಂಡಿದ್ದ ಎರಡು ದಿನಗಳ ವಲಯ ಮಟ್ಟದ ಕಾರ್ಯಗಾರದಲ್ಲಿ ಮಾತನಾಡಿದರು.
ಮಲೆನಾಡಿನ ಅರಣ್ಯ ಕಾಯ್ದೆಗಳು ಮತ್ತು ಭೂಮಿ-ವಸತಿ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ ಎಲ್ ಅಶೋಕ್ ಹಾಗೂ ರಾಜ್ಯ ಸಮಿತಿ ವೆಂಕಟೇಶ್ ಹಾಗಲಗಂಚಿಯವರು ಸಂಸದರಿಗೆ ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಮಲೆನಾಡಿನ ಅರಣ್ಯ ಕಾಯ್ದೆಗಳು ಮತ್ತು ಭೂಮಿ-ವಸತಿ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಮಾತನಾಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಸಿಡಿ ಬಿಡುಗಡೆಯೇ ಹಾಸನ ಜಿಲ್ಲೆಗೆ ಕಾಂಗ್ರೆಸ್‌ನವರ ಕೊಡುಗೆ: ಹೆಚ್ ಡಿ ಕುಮಾರಸ್ವಾಮಿ ಲೇವಡಿ
ಈ ಸಂದರ್ಭದಲ್ಲಿ ಮಲೆನಾಡಿನಲ್ಲಿ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕೆ ಎಲ್ ಅಶೋಕ್, ವೆಂಕಟೇಶ್ ಹಾಗಲಗಂಚಿ, ಗಿರಿಜಾ ಎಸ್ ಜಿ, ವಿಜೇಂದ್ರ, ಎದ್ದೇಳು ಕರ್ನಾಟಕದ ಮುಖಂಡರಾದ ತಾರರಾವ್ ಇರ್ಷಾದ್ ಅಹಮ್ಮದ್ ದೇಸಾಯಿ, ಮುನ್ನ ಸೇರಿದಂತೆ ಇತರರು ಇದ್ದರು.
