ವಿಜಯಪುರ | ನಿತ್ಯವೂ ಮಾನವೀಯ ಮೌಲ್ಯಗಳನ್ನು ನಾವು ಮೈಗೂಡಿಸಿಕೊಳ್ಳಬೇಕು: ನಾಗರತ್ನ ಮನಗೂಳಿ

Date:

Advertisements

ಯೇಸುಕ್ರಿಸ್ತರ ಸಂದೇಶಗಳಾದ ಕ್ಷಮೆ, ಪ್ರೀತಿ ಸಹನೆ, ಸಹಬಾಳ್ವೆ ಮತ್ತು ಶಾಂತಿ ಈ ಮಾನವೀಯ ಮೌಲ್ಯಗಳನ್ನು ನಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಮನಗೂಳಿ ಹೇಳಿದರು.

ಅವರು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ವ ಧರ್ಮೀಯ ಸ್ನೇಹಕೂಟದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

“ಸಂಗಮ ಎಂದರೆ ಎಲ್ಲರು ಒಟ್ಟಿಗೆ ಕೂಡಿಕೊಳ್ಳುವುದು. ವಿವಿಧ ರೀತಿಯಲ್ಲಿ ಸಂಗಮ ಸಂಸ್ಥೆಯು ಶಿಕ್ಷಣ ನೀಡುತ್ತಿದೆ. ಯಾರಿಗೂ ಭೇದಭಾವ ಮಾಡದೇ ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಿದ್ದಾರೆ. ದೇವರು ಪ್ರತಿಯೊಬ್ಬರ ಆತ್ಮದೊಳಳಗೆ ಇರುವವನು. ನಾವು ಹೊಟ್ಟೆ ಕಿಚ್ಚು, ಅಸೂಯೆ ಪಡದೇ ಎಲ್ಲರೊಂದಿಗೆ ಸಹಬಾಳ್ವೆಯಿಂದ ಇರಬೇಕು” ಎಂದು ಸಾನಿಧ್ಯ ವಹಿಸಿದ್ದ ಸಿಂದಗಿಯ ಶ್ರೀ ಗುರುದೇವ ಆಶ್ರಮದ ಶ್ರೀ ಶ್ರೀ ಶಾಂತಗಂಗಾಧರ ಸ್ವಾಮೀಜಿ ಹೇಳಿದರು.

Advertisements
WhatsApp Image 2024 12 23 at 8.30.10 PM 1

ಯೇಸು ಅವರ ಜೀವನ ಚರಿತ್ರೆ ಹಾಗೂ ಅವರು ಮಾಡಿದ ಜನರ ಸೇವೆ ಅಮೂಲ್ಯವಾದದ್ದು. ಯೇಸು ಅವರ ತತ್ವ ಮತ್ತು ಮೌಲ್ಯಗಳನ್ನು ಎಲ್ಲರೂ ಅನುಸರಿಸಬೇಕೆಂದು ಮುಸ್ಲಿಂ ಧರ್ಮಗುರು ಮೌಲವಿ ನಸ್ರುದ್ದೀನ್ ಮುಲ್ಲಾ ಗಣಿಹಾರ ಹೇಳಿದರು.

ಕ್ರಿಸ್ಮಸ್ ಹಬ್ಬವನ್ನು ವಿಶ್ವದಾದ್ಯಂತ ಎಲ್ಲರೂ ಆಚರಿಸುತ್ತಾರೆ. ನಮ್ಮಲ್ಲಿ ಯೇಸುವಿನ ಮೌಲ್ಯಗಳಾದ ನಿಸ್ವಾರ್ಥತೆ, ಕ್ಷಮೆ, ಪ್ರೀತಿಯನ್ನು ನಾವು ರೂಡಿಸಿಕೊಳ್ಳಬೇಕೆಂದು ಫಾದರ್ ಜೀವನ್‌ ಹೇಳಿದರು.

ಸಂಗಮ ಸಂಸ್ಥೆಯು ಪ್ರತಿ ವರ್ಷ ದೀಪಾವಳಿ, ಬಕ್ರೀದ್ ಮತ್ತು ಕ್ರಿಸ್ಮಸ್ ಹಬ್ಬಗಳನ್ನು ಎಲ್ಲ ಧರ್ಮಗಳ ಜೊತೆಗೂಡಿ ಆಚರಿಸುತ್ತೇವೆ ಎಂದು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ್‌ ಹೇಳಿದರು.

ಇದನ್ನು ಓದಿದ್ದೀರಾ? ದೇವಾಲಯಗಳ ಆಸ್ತಿ ರಕ್ಷಣೆಗೆ ಮಹತ್ವದ ಕ್ರಮ ವಹಿಸಿದ ರಾಜ್ಯ ಸರ್ಕಾರ: ಉಳಿಯಿತು 10,700 ಎಕರೆ ‘ದೇವರ ಸ್ವತ್ತು’

ಸಂಗಮ ಸಂಸ್ಥೆಯ ಸಹ ನಿರ್ದೇಶಕಿಯಾದ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಸರ್ವಧರ್ಮ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಭಾರತದ ಸಂವಿಧಾನದ ಪೀಠಿಕೆಯ ಮೂಲಕ ಈ ಸ್ನೇಹಕೂಟವನ್ನು ಪ್ರಾರಂಭಿಸಲಾಯಿತು.

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇವದಾಸಿ ತಾಯಂದಿರಿಗೆ, ವಿಶೇಷ ಚೇತನರಿಗೆ ಮತ್ತು ಹೆಚ್.ಐ.ವಿ ಬಾದಿತರಿಗೆ ಕಿಟ್ ವಿತರಿಸಲಾಯಿತು. ಹೊಲಿಗೆ ತರಬೇತಿ ಶಿಕ್ಷಕಿಯರಿಗೆ ಹಾಗೂ ಕಲಿಕಾ ಕೇಂದ್ರದ ಶಿಕ್ಷಕಿಯರಿಗೆ ಕ್ರಿಸ್ಮಸ್ ಉಡುಗೊರೆ ನೀಡಲಾಯಿತು. ಉಮೇಶ್ ನಿರೂಪಿಸಿದರು, ವಿಜಯಕುಮಾರ ಬಂಟನೂರ ಸ್ವಾಗತಿಸಿದರು ಮತ್ತು ಮಲ್ಕಪ್ಪ ಹಲಗಿ ವಂದಿಸಿದರು.

WhatsApp Image 2024 12 23 at 8.30.06 PM
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X