ಚಿಕ್ಕಮಗಳೂರು l ಯಾವುದೇ ಅವೈಜ್ಞಾನಿಕ ವರದಿ, ಕಾಯ್ದೆ ಜಾರಿ ಮಾಡಬಾರದು: ಕೆ ಎಲ್ ಅಶೋಕ್ 

Date:

Advertisements

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾದುದು. ಅಸಾಂವಿಧಾನಿಕ ವರದಿ. ಅವುಗಳನ್ನು ಸಂಪೂರ್ಣ ರದ್ದು ಮಾಡಬೇಕು ಎಂದು ಕರ್ನಾಟಕ ಜನಶಕ್ತಿಯ ಮುಖಂಡರಾದ ಕೆ ಎಲ್ ಅಶೋಕ್ ಒತ್ತಾಯಿಸಿದರು.

ಚಿಕ್ಕಮಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ಎದ್ದೇಳು ಕರ್ನಾಟಕ ವತಿಯಿಂದ ಆಯೋಜಿಸಲಾಗಿದ್ದ ಜನದನಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಸೆಕ್ಷನ್ 4 ಅಥವಾ 17 ಡೀಮ್ಸ್ ಮುಳ್ಳಯ್ಯನಗಿರಿ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಿದ್ದಾರೆ. ಅರಣ್ಯ ಇಲಾಖೆಗೆ ಸೇರಿದೆ ಎಂದು ತೆರವುಗೊಳಿಸುತ್ತಾರೆ. ಪರ್ಯಾಯವಾಗಿ ಭೂಮಿ ನೀಡಬೇಕು, ಇಲ್ಲವಾದರೆ ಅರಣ್ಯ ಇಲಾಖೆಯ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಸಾಗುವಳಿ ಮಾಡಲು ಹಕ್ಕು ಪತ್ರ ನೀಡಬೇಕು. ಕಸ್ತೂರಿ ರಂಗನ್ ವರದಿಯಂತೆ ಯಾವುದೇ ಅವೈಜ್ಞಾನಿಕ ಅಸಾಂವಿಧಾನಿಕ ವರದಿಯಾಗಲೀ, ಕಾಯ್ದೆಯಾಗಲೀ, ಅವುಗಳನ್ನು ಸಂಪೂರ್ಣ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

Advertisements

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಪೊರೇಟರ್ ನೀತಿಗಳಿಂದ ರೈತರು, ಕಾರ್ಮಿಕರು, ಹಳ್ಳಿಪಟ್ಟಣಗಳಲ್ಲಿ ವಾಸ ಮಾಡುವ ಬಡವರು ದಿನವಿಡೀ ದುಡಿದು ಬಂದು ನೆಮ್ಮದಿಯಿಂದ ವಿಶ್ರಾಂತಿ ಪಡೆಯಲು ಒಂದು ಸೂರಿನಗೂ  ಪರದಾಡುತ್ತಿದ್ದಾರೆ. ಸೂರಿಗಾಗಿ 94(ಸಿ) ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಇನ್ನು ಹಕ್ಕುಪತ್ರ ಸಿಗಲಿಲ್ಲ ಎಂದು ಕರ್ನಾಟಕ ಜನಶಕ್ತಿ ಮುಖಂಡರಾದ ಗೌಸ್ ಮೊಹಿಯುದ್ದೀನ್ ತಿಳಿಸಿದರು.

ವಸತಿ ಹಾಗೂ ಭೂಮಿ ಇಲ್ಲದೆ ರಾಜ್ಯದಲ್ಲಿ ಅದೆಷ್ಟೋ ಕುಟುಂಬದವರು ವಂಚಿತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಕಂದಾಯ ಸಚಿವರು ಕೃಷ್ಣಬೈರೇಗೌಡ ಅವರು ಗೊಂದಲವಿರುವ ಭೂಮಿಯ ಕುರಿತು ದಾಖಲೆಗಳನ್ನ ಒದಗಿಸಲು ಆಡಳಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಜ್ಯದಲ್ಲಿ 50 ಲಕ್ಷಕ್ಕಿಂತ ಅರ್ಜಿಗಳು ಹಕ್ಕುಪತ್ರ ಇಲ್ಲದೆ ವಂಚಿತರಾಗಿದ್ದಾರೆ ಎಂದು ಭೂಮಿ ವಸತಿ ವಂಚಿತರ ಸಮಿತಿ ಮುಖಂಡ ಮರಿಯಪ್ಪ ಅವರು ತಿಳಿಸಿದರು.

ಸರ್ಕಾರದಿಂದ ಸೂರಿಲ್ಲದೆ ವಾಸ ಮಾಡುವ ಎಲ್ಲ ಬಡವರಿಗೆ 94ಸಿ ಮತ್ತು 94ಸಿಸಿ ಅಡಿಯಲ್ಲಿ ಕೂಡಲೇ ಹಕ್ಕುಪತ್ರ ನೀಡಬೇಕು. ಹಾಗೆಯೇ ಫಾರಂ ನಂ. 50, 53, 57 ರಲ್ಲಿ ಅರ್ಜಿ ನೀಡಿರುವ ಬಡವರನ್ನು ಅಂದರೆ ಭೂಮಿ ಇಲ್ಲದೆ ಇರುವವರನ್ನು ಗುರುತಿಸಿ ಭೂಮಿ ನೀಡಬೇಕು. ಹಾಗೆಯೇ ನಾವು ನಿರಂತರ ಹೋರಾಟ ಮತ್ತು ಬೀದಿಗಿಳಿದರೆ ಮಾತ್ರ ನಾವು ನಮ್ಮ ಹಕ್ಕನ್ನು ಪಡೆಯಲು ಸಾಧ್ಯ ಎಂದು ಭೂಮಿ ವಸತಿ ವಂಚಿತರ ಸಮಿತಿ ಮುಖಂಡ ಸಿದ್ದರಾಜು ತಿಳಿಸಿದರು.

ಅರಣ್ಯ ಇಲಾಖೆಯವರು ನೂರಾರು ಎಕರೆ ಒತ್ತುವರಿ ಮಾಡಿದವರನ್ನು ತೆರವುಗೊಳಿಸಿಲ್ಲ, ಅಂಗೈ ಅಗಲದಷ್ಟು ಬಡವರು ಜಾಗವನ್ನೂ ತೆರವುಗೊಳಿಸುತ್ತಾರೆ. ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿ ವಾಸ ಮಾಡುವ ಜನರನ್ನು ಸರ್ಕಾರದ ಹೆಸರಿನಲ್ಲಿ ಏಕಾ ಏಕಿ ಆಡಳಿತಾಧಿಕಾರಿಗಳು ಗುಡಿಸಲುಗಳನ್ನು ಧ್ವಂಸಗೊಳಿಸುತ್ತಾರೆ. ಸರ್ಕಾರಿ ಕಚೇರಿಗೆ ಅಲೆದು ಕಾಲಿಗೆ ಹಾಕಿರುವ ಚಪ್ಪಲಿ ಸವೆಯುತ್ತಿದೆಯೇ ಹೊರತು ಕೆಲಸ ಆಗುತ್ತಿಲ್ಲ ಎಂದು ಎದ್ದೇಳು ಕರ್ನಾಟಕ ಸದಸ್ಯೆ ಎಸ್.ಜಿ ಗಿರಿಜಾ ತಿಳಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸರ್ಕಾರದ ಕಾನೂನು ಆದೇಶದಂತೆ ಅರಣ್ಯ ಒತ್ತುವರಿ ತೆರವು; ಅಡಕೆ ತೋಟ ಸಂಹಾರ  

ಜನದನಿ ಸಮಾವೇಶದಲ್ಲಿಎದ್ದೇಳು ಕರ್ನಾಟಕ ಕಾರ್ಯಕರ್ತರು, ಭೂಮಿ ಹಾಗೂ ವಸತಿ ವಂಚಿತರು, ಹಲವು ಸಂಘಟನೆಯ ಮುಖಂಡರು ಹಾಗೂ ಸ್ಥಳೀಯ ಜನರು ಉಪಸ್ಥಿತಿಯಲ್ಲಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X