ಶತಮಾನಗಳಿಂದ ಇದ್ದ ಜಾತಿ, ವರ್ಣವ್ಯವಸ್ಥೆ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಳಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಈ ದೇಶ ಇವತ್ತು ಸ್ವಾಭಿಮಾನದಿಂದ ತಲೆಯೆತ್ತಿ ನಡೆಯುತ್ತಿದೆ. ಡಾ. ಅಂಬೇಡ್ಕರ್ ಅವರ ಹೋರಾಟದ ಬದುಕು ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಹೇಳಿದರು.
ಬೀದರ್ ನಗರದ ಡಾ.ಚೆನ್ನಬಸವ ಪುಟ್ಟದ್ದೇವರು ರಂಗಮಂದಿರದಲ್ಲಿ ಭಾರತೀಯ ಬೌದ್ಧ ಮಹಾಸಭೆ ಜಿಲ್ಲಾ ಹಾಗೂ ತಾಲ್ಲೂಕು ಶಾಖೆಯಿಂದ ಭಾನುವಾರ ಆಯೋಜಿಸಿದ ʼಮಹಿಳಾ ವಿಮೋಚನಾ ದಿನಾಚರಣೆ ಹಾಗೂ ಸಮತಾ ಸೈನಿಕ ದಳ ಸಮಾವೇಶದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.
ʼಭಾರತದ ಶೂದ್ರರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದಾರೆ. ಇಂದು ಮಹಿಳೆ ಘನತೆಯಿಂದ ಬದುಕು ನಡೆಸಲು ಸಂವಿಧಾನವೇ ಕಾರಣ. ಸ್ವಾತಂತ್ರ್ಯ ಹಕ್ಕು ಪಡೆದಿದ್ದರಿಂದ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈಯಲು ಸಾಧ್ಯವಾಗುತ್ತಿದೆʼ ಎಂದು ತಿಳಿಸಿದರು.
ಭಾರತೀಯ ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷೆ ಮಂಜುಳಾ ಭಾವಿದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಜಾತಿ, ಧರ್ಮಕ್ಕೆ ಸೀಮಿತರಲ್ಲ. ಇಡೀ ಭಾರತೀಯರಿಗೆ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ ಹಕ್ಕು ನೀಡಿದವರು. ಎಲ್ಲಾ ಸಮುದಾಯದವರು ಬಾಬಾಸಾಹೇಬರ ಆದರ್ಶಗಳನ್ನು ಪಾಲಿಸಬೇಕುʼ ಎಂದು ಹೇಳಿದರು.
ಮಧ್ಯಾಹ್ನದ ಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ವಿಠಲದಾಸ ಪ್ಯಾಗೆ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರಬುದ್ಧ ಸಮಾಜದ ಪರಿಕಲ್ಪನೆ ವಿಶೇಷ ಉಪನ್ಯಾಸ ನೀಡಿದರು.
ಈ ಸುದ್ದಿ ಓದಿದ್ದೀರಾ? ಯುವಜನರ ಜೀವಕ್ಕೆ ಕುತ್ತು ತರುತ್ತಿರುವ ಮೋಸದಾಟ: ಆನ್‌ಲೈನ್ ಗೇಮಿಂಗ್ ಬಗ್ಗೆ ಇರಲಿ ಎಚ್ಚರ
ಸಮಾವೇಶದಲ್ಲಿ ಭಂತೆ ಧಮ್ಮಕೀರ್ತಿ, ಭಂತೆ ಸಂಘ ಸೇವಕ ಸಾನಿಧ್ಯ ವಹಿಸಿದರು. ಭಾರತೀಯ ಬೌದ್ಧ ಮಹಾ ಸಭೆಯ ಜಿಲ್ಲಾಧ್ಯಕ್ಷ ರಾಜಪ್ಪ ಗುನ್ನಳ್ಳಿಕರ್ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವೈಶಾಲಿ ಮೋರೆ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಮಲ್ಲಿಕಾರ್ಜುನ ಭಾಲ್ಕೆ, ಮನೋಹರ ಮೋರೆ, ದೇವೇಂದ್ರ ಭಾಲ್ಕೆ, ಜಗನ್ನಾಥ ಕಾಂಬಳೆ, ಶಿವಕುಮಾರ್ ಸದಾಫುಲೆ, ಕಾಶಿನಾಥ ಚೆಲವಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.